ಪುಟ:ಧರ್ಮಸಾಮ್ರಾಜ್ಯಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಧರ್ಮಸಾಮಾಜ್ಯಮ್ [ಸಂಧಿ It + * * 14 *#* * * * * *

  • * * * \+ 1 1

101 1,\ ses, vyst ನಿಸದೆ ಅವಿವೇಕದಿಂದ ಈರೀತಿ ಮಾತನಾಡುವೆ' ?” ಎಂದು ಗದರಿಸಲು ಶೀಲಾಸನನು ಅವನ ಅವಿವೇಕಕ್ಕೆ ನಕ್ಕು, ಒಳಿಕ ಅವನನ್ನು ಕುರಿತು ವಿಷಾದದಿಂದ:__“ಪೂಜ್ಯನೇ! ನೀನು ಹೇಳಿದುದು ಅನಾರ್ಯರಿಗೆ ವಿಹಿ ತವಾದ ಧರ್ಮದಂತೆ ತೋರುವುದು; ಆದರೆ ಇದನ್ನು ಕೇಳು [೨೭, ತಾ:-((ಚಿತ್ರಸೈರ್ಯವಿಲ್ಲದ) ಅವಿವೇಕಿಗಳು, ಆವು ದಾದರೂ ಒಂದು ನೆಪವನ್ನು ಮಾಡಿಕೊಂಡು, ಸ್ವಧರ್ಮಮಾರ್ಗಗಳನ್ನು ಬಿಟ್ಟು ಬಿಡುವರು; ಆದರೆ, ತಪಸ್ಸು ವಿದ್ಯೆ ಸ್ವರೂಪಜ್ಞಾನಗಳೇ ಧನವಾ ಗಿ ಉಳ್ಳ ಸತ್ಕುಲಪ ಸೂತರು ಮಾತ್ರ, ಅತಿನೀಚವಾದ ಕಷ್ಟದಶೆಯಲ್ಲಿಯ ಕೂಡ ಸ್ವಕರ್ಮಭ್ರಷ್ಟರಾಗರು.” ] ' ಆದಕಾರಣ ನಿನ್ನ ಮಾತಿನಂತೆ ಆಕೃತ್ಯವನ್ನೆಂದಿಗೂ ಮಾಡಲಾರೆನು. ಅದಲ್ಲದೆ, ಧರ್ಮೋಪದೇಶಕನಾಗಿಯ ಯತಿಯಾಗಿಯೂ ಇರುವ ನೀ ನು ಇಂತಹ ಬೋಧೆಯನ್ನು ಮಾಡಬಹುದೆ ? ನಿಮ್ಮ ಧರ್ಮದಲ್ಲಿ ಮದ್ಯ ಪಾನವು ವಿಹಿತವಾಗಿರಬಹುದೆಂದು ತೋರುವುದು! ನಿಮ್ಮನ್ನು ನೋಡಿದರೆ ಆರ್ಯಧರ್ಮವು ನಿಮಗಿನ್ನೂ ತಿಳಿಯದೆಂದು ತೋರುವುದು! ಆದಕಾ ರಣ ನೀವುಗಳಾಚರಿಸುವ ಮದ್ಯಪಾನದಿಂದುಂಟಾಗುವ ಹಾನಿಯನ್ನರಿ ತಿರುವ ಎಮ್ಮ ಮಹಾರಾಜನು, ಮದ್ಯಪಾಯಿಗಳಿಗೆ ಲೋಹರಸವನ್ನು ಕುಡಿಸುವ ದಂಡನೆಯನ್ನು ವಿಧಿಸಿರುವನು. ಆದಕಾರಣ ಎಮ್ಮದೇಶದಲ್ಲಿ ಇತಃಪರ ಮದ್ಯಶಬ್ದವನ್ನೇ ಎತ್ತಬೇಡ, ನಿನಗೂ ಅದೇ ದಂಡನೆಯುಂ ಟಾಗುವುದು ಮತ್ತು ನೀನೂ ಸೇವಿಸುವುದನ್ನು ಶುದ್ಧಾಂಗವಾಗಿ ತ್ಯಜಿ ಸು, ಏಕೆಂದರೆ, ಮದ್ಯಪಾನದ ಹಾನಿಗಳನ್ನು ಹೇಳುವೆನು' ಕೇಳು:- [ತಾ:-- (೨೮) ಆವುದು ತನ್ನನ್ನು ಪಾನಮಾಡಿದವನ ಶೀಲ ನಿಮಿತ್ತ ಮಾಸಾದ್ಯ ಯದೇವ ಕಿಂಚನ ಸ್ವಧರ್ಮಮಾರ್ಗಂ ವಿಸ್ಸಜ೩ ಬಾಲಿಶಾಃ | ತಪಶು ತಜ್ಞಾನಧನಾಸ್ತು ಸಾಧವೋ ನ ಯಾನ್ತಿ ಕೃಚ್ಛ ಪರಮೇ ಛಪಿ ವಿಕ್ರಿಯಾಮ್ | - ಶೀಲಂ ನಿಮೀಲಯತಿ ಹಂತಿ ಯಶಃ ಪ್ರಸಹ್ಯ ಲಜ್ಞಾಂ ನಿರಸ್ಕೃತಿ ಮತಿಂ ಮಲಿನೀಕ ರೋತಿ | ಯನ್ನಾಮ ಸೀತಮುಪಹನ್ತಿ ಗುಣಾಂಶ್ಚ ತಾಂಸ್ತಾಂಸ್ತತ್ಪಾತುಮರ್ಹಸಿ ಕಥಂ ಮುನಿವರ್ಯ ಮದ್ಯಮ್ ||೨೮||