ಪುಟ:ಧರ್ಮಸಾಮ್ರಾಜ್ಯಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] ೭೯ ಮೂರನೆಯ ಅಂಗ • • • • • • • • • . ತಂದೆಯು ಓರ್ವನೇ ಹೋಗುತ್ತಿಹನು; ನಾನೂ ಹೊರಡು ವೆನು; ಎನ್ನಲ್ಲಿ ಅವಿಧೇಯತೆಯೇನಾದರೂ ಇರ್ದರೆ ಕ್ಷಮಿಸಿ, ” ಎಂದುಹೇಳಿ ಕೈಮು ಗಿದು ಓಡಿಹೋದನು. ಬಳಿಕ ಚಿತ್ರನು ತನಗುಂಟಾದ ಪರಾಜಯದಿಂದ ಖಿನ್ನನಾಗಿ ವ್ಯ ಸನದಿಂದ ಅತ್ತ ಸರಿದು ನಿಂತುದನ್ನು ನೋಡಿದ ಗುಪ್ತನು, ಅಂತಃ ಭಯ ಗೊಂಡರೂ ಅದನ್ನು ಬಾಹ್ಯತಃ ವ್ಯಕ್ತಪಡಿಸದೆ, ಧೈರ್ಯವನ್ನು ನಟಿಸುತ್ತ, ಆ ವಟುವಿನಹಿಂದೆ ಹೊರಡಲುದ್ಯುಕ್ತಳಾಗಿರ್ದ ಆಬ್ರಾಹ್ಮಣಪತ್ನಿ ಯನ್ನು ಕುರಿತು ಕೃತಕವಾದ ವಿನಯದಿಂದ: ಅಮ್ಮಾ ತಾಯಿ! ನಿನ್ನ ಶ್ರಮ ವನ್ನು ನೋಡಿದರೆ, ನಮಗೆ ಬಹು ವ್ಯಸನವಾಗುವುದು, ನಿನ್ನ ರೂಪ ವನ್ನೂ ನಿನ್ನ ಇರುವಿಕೆಯನ್ನೂ ನೋಡಿದರೆ ಕಷ್ಟ ಪಟ್ಟವಳಂತೆ ಕಾಣುವು ದಿಲ್ಲ,ನನ್ನ ಪತಿಗೂ ನಿನ್ನ ಪುತ್ರನಿಗೂ ಬಹುವಿಧವಾಗಿ ಬುದ್ದಿವಾದವನ್ನು ಹೇಳಿದೆವು; ಅವರು ಪ್ರಕೃತಕಾಲಸ್ಥಿತಿಯನ್ನೂ ಈಗುಂಟಾಗಿರುವ ದಾರಿ ದ್ರಸ್ಥಿತಿಯನ್ನೂ ಅರಿಯದೆ, ಬಹುಕಾಲದಿಂದಲೂ ಅನುಸರಿಸಿಒ೦ದ ಮೌ ಥ್ಯಕ್ಕೆ ಅಧೀನರಾಗಿ ಕಾಡಿಗೆ ಹೋಗಲುದ್ಯುಕ್ತರಾದರು; ನಿನ್ನ ಪತಿಯು ಕೇವಲ ವೃದ್ದನು; ಇಂದೊನಾಳೆಯೊ ಸಾಯುವಸ್ಥಿತಿಯಲ್ಲಿರುವನು; ಅದ ಲ್ಲದೆ ವಾನಪ್ರಸ್ಥವನ್ನು ಅವಲಂಬಿಸಲು ಹೋದನು; ಆದಕಾರಣ ಅವನ ಚಿಂತೆಯು ನಮಗೆ ಇಲ್ಲವೇ ಇಲ್ಲ, ಆದಲ್ಲದೆ ನಿನ್ನ ಮಗನೋ ಇನ್ನೂ ತರುಣನು; ಕಾಯಪುಷ್ಟಿ ಯೂ ಸಂಪೂರ್ಣವಾಗಿಹುದು, ಆದುದರಿಂದ ಅವನು ಶ್ರಮಪಟ್ಟಾದರೂ ಜೀವಿಸಬಲ್ಲ ; ಹೀಗಿರುವಲ್ಲಿ ಅವನ ಯೋಚನೆ ಯ ಎಮಗಷ್ಟೊಂದಿಲ್ಲ, ಆದರೆ ನಿನ್ನನ್ನು ನೋಡಿದರೆ ಎಮ್ಮ ಮನಸ್ಸು ಬೆಂದುಹೋಗುವುದು;ಏಕೆಂದರೆ ನೀನು ಸ್ತ್ರೀ; ಮತ್ತು ಅಬಲೆ;ನಿನ್ನ ವಯಸ್ಸು ಇನ್ನೂ ಪ್ರಪಂಚ ಸುಖವನ್ನು ಅನುಭವಿಸುವ ಸ್ಥಿತಿಯಲ್ಲಿರುವದು; ಹೀಗಿರು ವಾಗ್ಗೆ ನೀನೆಂತು ಅರಣ್ಯದಲ್ಲಿ ಕಷ್ಟ ಪಡುವೆ? ಅದಲ್ಲದೆ ವನಕ್ಕೆ ತೆರಳಿದ ಗಂಡನಿಂದ ನಿನಗೇನುತಾನೇ ಸುಖವುಂಟಾದೀತು? ಆದಕಾರಣ ಆ ಹಾಳು ಮುದುಕನ ಯೋಚನೆಯನ್ನು ಬಿಡು; ರೂಪವಂತನಾಗಿಯ, ಪ್ರಕೃತಕಾ