ಪುಟ:ಧರ್ಮಸಾಮ್ರಾಜ್ಯಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲ೦ , ಧರ್ಮಸಾಮ್ರಾಜ್ಯಮ್ [ಸಂಧಿ ಲದ ಪ್ರೌಢವಿದ್ಯೆಯನ್ನು ಅಧಿಕರಿಸಿದವನಾಗಿ'ಮ, ಯೌವನ ಸಮನ್ವಿತ ನಾಗಿಯೂ, ಚಿತ್ರವಿಚಿತ್ರವಾಗಿ ಅಲಂಕರಿಸಿಕೊಳ್ಳ ಚಮತ್ಕೃತಿಯನ್ನು ಬಲ್ಲ ವನಾಗಿಯೂ, ಪಾನಸುಖಿಯಾಗಿಯೂ, ಧನಾರ್ಜನಧುರೀಣನಾಗಿಯ ಇರುವ ಮತ್ತೊಬ್ಬ ಪುರುಷನನ್ನು ವರಿಸಿ,ಪ್ರಪಂಚಸುಖವನ್ನು ಅನುಭವಿಸು.” ಇದನ್ನು ಕೇಳಿದ ಬ್ರಾಹ್ಮಣಪತ್ನಿಯು ಕಿವಿಗಳನ್ನು ಮುಚ್ಚಿ ಕೊಂಡು:- (“ಶಾಂತಂ ಪಾಪಂ ! ಶಾಂತಂ ಪಾಪಂ ! 1” ಎಂದು ಹೇಳಲು ಗುಪ್ತನು ದೃಷ್ಟತೆಯಿಂದ:- ಶಾಂತಂ ಪಾಪಂ ! ಶಾಂತಂ ಪಾಪಂ ! ಎಂದು ಹೇಳುವುದಕ್ಕೆ ಇಲ್ಲಿ ಪಾಪವೆಲ್ಲಿಹುದು ? ನಾನು ಶಾಸ್ತ್ರ ಸಂಮತವಾಗಿಯೋ ಹೇಳಿರುವೆನು; ಹೇಗೆಂದರೆ, ಸ್ತ್ರೀಯು ಯೌವನವತಿಯಾಗಿರ್ದು ಪತಿಯು ದೇಶಭ್ರಷ್ಟನಾದರೆ, ವನಕ್ಕೆ ತೆರಳಿದರೆ, ಕುಷ್ಠಾದಿ ಅನಿವಾರ್ಯವಾದ ವ್ಯಾಧಿಯಿಂದ ಪೀಡಿತನಾದರೆ, ಆಗ್ಗೆ ಅವಳು ಮತ್ತೊಬ್ಬ ಪತಿಯನ್ನು ವರಿಸಬಹುದೆಂದು ಧರ್ಮವಚನವಿರ್ದೆаರುವುದು; ಇಷ್ಟೇ ಅಲ್ಲದೆ, ಗಂಡನು ಮೃತನಾದರೆ ಹೆಂಡತಿಯು ಬಹು ಪುತ್ರವತಿಯಾಗಿರ್ದರೂ ದ್ವಿತೀ ಯಪತಿಯನ್ನೂ, ಅವನೂ ಮೃತನಾದರೆ ತೃತೀಯಪತಿಯನ್ನೂ, ಅವನೂ ಮೃತನಾದರೆ ಚತುರ್ಥಪತಿಯನ್ನೂ, ಅವನೂ ಮೃತನಾದರೆ ಪಂಚಮ ಪತಿಯನ್ನೂ, ಹೀಗೆಯೇ ದಶಮಪರ್ಯಂತ ಪತಿಗಳನ್ನು ವರಿಸಬಹು ದೆಂದು ಶಾಸ್ತ್ರಗಳಲ್ಲಿಯೇ ಅವಕಾಶವು ತೋರಿಸಲ್ಪಟ್ಟಿರುವುದು; ನೀನೋ ಇನ್ನೂ ಏಕಪುತ್ರವತಿ; ನಿನ್ನ ಗಂಡನೋ ವನಕ್ಕೆ ಹೊರಟುಹೋದನು; ಹೀಗಿರುವಲ್ಲಿ ನಾನು ಹೇಳಿದಂತೆ ಆಚರಿಸಲು ಅಭ್ಯಂತರವೇನು? ಆದಕಾ ರಣ ಆರೀತಿಮಾಡಿ ಸುಖದಿಂದ ಜಾಳು! ) ಇದನ್ನು ಕೇಳಿದ ಬ್ರಾಹ್ಮಣಪತ್ನಿ ಯು ಸ್ವಲ್ಪ ಭೀತಳಾಗಿ, ಬಳಿಕ ಚಿಂತೆಯಿಂದ:-- ಈಗೇನುಮಾಡಲಿ ? ಈ ನೀಚನು ಈರೀತಿ ದುರ್ಬೊ ಧನೆಯನ್ನು ಮಾಡುತ್ತ ದಾರಿಗೆ ಅಡ್ಡಲಾಗಿ ನಿಂತಿಹರು ; ಈಗ ನಾನು ಹೆದರಬಾರದು. ಎಂದು ಮನದಲ್ಲಿ ನಿಶ್ಚಯಿಸಿ ಬಳಿಕ ಅವನನ್ನು ಕುರಿತು ಧೈರ್ಯದಿಂದ:- ನಿನ್ನನ್ನು ನೋಡಿದರೆ ಎನಗೆ ಬಹುವ್ಯಸನ