ಪುಟ:ಧರ್ಮಸಾಮ್ರಾಜ್ಯಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ • • • • , , , , , , , , • • • •11 1 ಧರ್ಮಸಾಮ್ರಾಜ್ಯ [ಸಂಧಿ - ಇದನ್ನು ಕೇಳಿದ ಬ್ರಾಹ್ಮಣಪತ್ನಿ ಯು ಕೋಪಾವಿಷ್ಟಳಾದರೂ, ಶಾಂತಿಯನ್ನು ವಹಿಸಿ, ಅವನ ಅವಿವೇಕಕ್ಕೆ ಮರುಕಗೊಂಡು, ಅವನನ್ನು ಕುರಿತು:_“ಎಲೈ ಉಪದೇಶಕನೆ! ನೀವುಪದೇಶಿಸುವ ವಿಷಯವು ಎಮ್ಮ ಮಹಾರಾಜನಿಗೆ ತಿಳಿದುಬಂದರೆ, ಪರಲೋಕದಲ್ಲಾಗುವ ಹಿಂಸೆಗಳೆಲ್ಲ ನಿಮಗೆ ಇಲ್ಲಿಯೇ ಆಗುವುವು ! ಆದಕಾರಣ ಇನ್ನು ಮೇಲೆ ಇಂತಹ ದು ರ್ಬೋಧೆಯನ್ನು ಎಮ್ಮ ರಾಷ್ಟ್ರದಲ್ಲಿ ಮಾಡಲು ಯೋಚಿಸಲೂ ಬೇಡ! ನಿನ್ನನ್ನು ನೋಡಿದರೆ, ಆವುದೋ ಅನಾರ್ಯದೇಶದಿಂದ ಈ ಆರ್ಯಾವರ್ತಕ್ಕೆ ಬಂದಿರುವಂತೆ ತೋರುವುದು | ಸತಿಯರು ಬಹುಪತಿವ್ರತೆಯರಾಗುವುದು ನಿಮ್ಮ ದೇಶದ ಧರ್ಮವಾಗಿರಬಹುದು ! ಇಲ್ಲಿನ ಧರ್ಮವು ಬೇರೆ ! ಅದನ್ನು ನೀವು ತಿಳಿಯುವುದಕ್ಕೂ ಕೂಡ ಅಯೋಗ್ಯರಾಗಿರುವಿರಿ! ಆದಕಾರಣ ಈ ಪ್ರದೇಶವನ್ನು ಬಿಟ್ಟು ಈಕ್ಷಣವೇ ಹೊರಟುಹೋಗಿರಿ!” ಎಂದು ಹೇಳಲು ಗುಪ್ತನು ಲಜ್ಜೆಗೊಂಡವನಾಗಿ, ಅತ್ತ ಸರಿಯಲು, ಆಕೆಯು ತನ್ನ ಪತಿ ಯನ್ನು ಹಿಂಬಾಲಿಸಿ ಹೊರಟು ಹೋದಳು. ಬಳಿಕ ಚಿತ್ರನು ಗುಪ್ತನನ್ನು ಕುರಿತು ಆಶ್ಚರ್ಯದಿಂದ:-ಮಿತ್ರನೇ! ಎಮ್ಮ ಸುರಲೋಕದಲ್ಲಿಯೂ ಇಂತಹ ಧರ್ಮಸ್ಥೆ ರ್ಯವನ್ನು ಕಾಣೆವು! ಈ ರಾಷ್ಟ್ರದಲ್ಲಿ ಪ್ರತಿಯೋರ್ವ ಹೆಂಗುಸೂ ಗಂಡು ಸೂ ಮತ್ತು ಹುಡು ಗನೂ ಕೂಡ ಪ್ರೌಢರಾಗಿಯ ಸ್ವಧರ್ಮಸೈರ್ಯವುಳ್ಳವರಾಗಿಯ ರಾಜಾಜ್ಞಾಪಾಲಕರಾಗಿಯ ಇರುವರು ! ನಾವು ಹಿಂದೆ ನೋಡಿದ ರಾಜ್ಯಗಳೊಳಗೆ ಅಲ್ಲಿನ ರಾಜರುಗಳಿಗೂ ಕೂಡ ಇಲ್ಲಿನ ಸಾಧಾರಣ ಕುರುಬನಷ್ಟು ಯೋಗ್ಯತೆಯ ವಿವೇಕವೂ ಇರಲಿಲ್ಲವಲ್ಲ! ಅದಲ್ಲದೆ [೩೬ ತಾ-ಸಾಮಾನ್ಯವಾಗಿ, ಜನರು ಭೋಗವನ್ನು ಪಡೆಯುವುದ ಕ್ಕಾಗಿ ಮನೋವಿಕಲ್ಪವನ್ನು ಹೊಂದಿ, ಧರ್ಮಾತಿಕ್ರಮಣದೋಷವನ್ನು ಲಕ್ಷಿಸದೆ, ತಾವು ಮಾಡುವ ಕಾರ್ಯಗಳು ತಮ್ಮ ಯಶಸ್ಸನ್ನು ಹಾಳು ಯಶಃ ಸಪರಪಿ ಕರ್ಮಭಿರ್ಜನಃ ಸಮೃದ್ಧಿಯನ್ವಚ್ಛತಿ ನೀಚದಾರುಣ್ಯಃ | ಸ್ವಸೌಖ್ಯಸಂಗಾದನವೇಕ್ಷಿತಾತ್ಯಯಃ ಪ್ರತಾರ್ಯಮಾಣಶ್ಚ ಸಲೇನ ಚೇತಸಾ ||೩೬||