ಪುಟ:ಧರ್ಮಸಾಮ್ರಾಜ್ಯಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ , , , , , , , , , , ... • • • • • • ದಿಂದ ಜೀವಿಸುವುದನ್ನೂ, ಮತ್ತಾಮಹಾತ್ಮನಾಗಿಯ ಧರ್ಮಸ್ವರೂಪ ನಾಗಿಯೂ ಇರುವ ಶೀಲಾಸನನು ಕ್ಷಾಮಪೀಡಿತನಾಗಿ ಸತೀಪುತ್ರರಿಂ ದೊಡಗೂಡಿ ಅರಣ್ಯಕ್ಕೆ ತೆರಳುತಿರ್ದುದನ್ನೂ, ನೋಡಿದಾರಭ್ಯ ಎನ್ನ ಕೋಪವೂ ವಿಷಾದವೂ ವ್ಯಸನವೂ ಭೀತಿಯ ಒಂದರಮೇಲೊಂದು ಉಲ್ಬಣಿಸುವುವು; ಒಳ್ಳೆಯದು! ಮುಂದಣ ಉದ್ಯೋಗವನ್ನು ಮಾಡು ವೆನು.” ಎಂದು ಮಾತನಾಡಿಕೊಂಡ ಬಳಿಕ, ತನ್ನ ಸೈನಿಕರನ್ನು ಕು ರಿತು:-“ನಿಮ್ಮಲ್ಲೋರ್ವನು ಆ ದಾಯಕಶ್ರೇಷ್ಠಿ ಯನ್ನೂ ಪತ್ನಿಪುತ್ರ ರಿಂದೊಡಗೂಡಿದ ಆ ಶೀಲಾಸನನನ್ನೂ ಈಗಲೇ ಎನ್ನ ಮನೆಗೆ ಮರ್ಯಾ ದೆಯಿಂದ ಕರೆದುಕೊಂಡುಹೋಗಿ, ಅವರವರಿಗೆ ವಿಹಿತವಾದ ಉಪಚಾರ ಗಳಿಂದ ಸತ್ಕರಿಸುವಂತೆ ನಾನು ಹೇಳಿದೆನೆಂದು ಅಲ್ಲಿ ತಿಳುಹತಕ್ಕುದು; ಮತ್ತು ಉಳಿದ ನೀವುಗಳೆಲ್ಲರೂ ಗ್ರಾಮಚಾರಿಗಳಿಗೆ ಸಹಾಯಕರಾಗಿ ಎಮ್ಮ ರಾಷ್ಟ್ರದಲ್ಲಿ ದುಷ್ಕರ್ಮವನ್ನೆಸಗುತ್ತಿರುವ ಪರದೇಶದ ಚೋರ ರನ್ನೆಲ್ಲ ನಿಂನಿಮ್ಮ ಸಾಹಸಚಮತ್ಕಾರಗಳನ್ನೆಲ್ಲ ಪ್ರಯೋಗಿಸಿ ಹಿಡಿದು ತರತಕ್ಕುದು; ಈ ವಿಷಯಕವಾದ ವ್ಯವಸಾಯದಲ್ಲಿ ಸಮರ್ಥರಾದವರಿ ಗೆಲ್ಲ ತಕ್ಕ ಬಹುಮಾನಗಳು ಕೊಡಲ್ಪಡುವುವು; ಆದರೆ ಕಾಮವಿತ್ತಾ ದಿಗಳಿಗಧೀನರಾಗಿ ನಿರ್ದೋಷಿಗಳಿಗೆ ಹಿಂಸೆಯನ್ನಾಗಲಿ ಅವಮಾನವನ್ನಾ ಗಲಿ ಉಂಟುಮಾಡಿದ ಸಂಗತಿಯು ತಿಳಿದುಬಂದುದೇ ಆದರೆ, ಅಂತಹ ದುಷ್ಟರನ್ನು ಶೂಲಕ್ಕೆ ಹಾಕಿಸುವೆನು; ಈ ವಿಷಯವನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಡತಕ್ಕುದು.” ಎಂದು ಆಜ್ಞೆ ಮಾಡಲು ಅವರು:-ಜೇ ಯಾ! ಅಪ್ಪಣೆಯನ್ನು ಶಿರಸಾವಹಿಸಿದೆವು.” ಎಂದು ಹೇಳಿ ಕೈಮುಗಿದು ಹೊರಟುಹೋದತರುವಾಯ ಪುನಃ ಆತ್ಮಗತವಾಗಿ:_• ಈ ಅನಾಹುತ ಗಳಿಗೆ ಏನು ಕಾರಣವಿರಬಹುದು ? ಮಹಾರಾಜನು ಇಂತಹ ದುರಾ ಗತಗಳೊಂದಕ್ಕೂ ಅವಕಾಶಕೊಡತಕ್ಕ ವನಲ್ಲ; ಮತ್ತು ರಾಜ್ಯಾಧಿಕಾರಿ ಗಳ ಉಪೇಕ್ಷಿಸತಕ್ಕವರಲ್ಲ; ಏಕೆಂದರೆ, ಮಹಾರಾಜನು ತನ್ನ ಮಂತ್ರಿ ಮುಂತಾದ ಅಧಿಕಾರಿಗಳು ಸ್ವಭೋಗ ಸ್ವಕ್ಷೇಮಗಳಲ್ಲಿಯೇ ಮಗ್ನರಾಗಿ