೮೬ .. .. , , ಧರ್ಮಸಾಮಾ ಜ್ಯಮ್ [ಸಂಧಿ ... . . . . " ಪ್ರಜಾಹಿತೋದ್ದಿಷ್ಟ ಕಾರ್ಯಗಳಲ್ಲಿ ಉಪೇಕ್ಷೆಯುಳ್ಳವರಾದಾರೆಂದು, ವೇಷಾಂತರಗಳನ್ನಳವಡಿಸಿಕ್ಕೊಂಡು ತಾನೇ ಪ್ರಜೆಗಳ ಸುಖದಃಖಗಳನ್ನು ಗೂಢವಾಗಿ ವಿಚಾರಿಸುವನು; ಹೀಗಿರ್ದೂ ದೇಶವು ಅವ್ಯವಸ್ಥೆಗೆ ಬಂದಿರು ಇದನ್ನು ನೋಡಿದರೆ, ಮಹಾರಾಜನಲ್ಲಿಯೇ ಏನೋ ಪ್ರಮಾದವುಂಟಾಗಿ ರುವಂತೆ ತೋರುವುದು ಇದರ ಕಾರಣವನ್ನು ನಾನೀಗ ಗೂಢವಾಗಿ ತಿಳಿ ಕೊಳ್ಳಬೇಕಾಗಿರುವುದು. ಎಂದು ಯೋಚಿಸುತ್ತಿರುವ ಸಮಯಕ್ಕೆ ಸರಿಯಾಗಿ, ರಾಜಸಾರಥಿಯಾದ ಸುನಂದನು ರಾಜಮಂದಿರದಿಂದ ತನ್ನ ಮನೆಗೆ ಹೋಗುವುದಕ್ಕೆ ಇದಿರಿಗೆ ಬರುತ್ತಿರುವುದನ್ನು ಕಂಡು ಸಂತೋ ಷಭರಿತನಾಗಿ - ಇವನಿಂದಲೇ ಸರ್ವವನ್ನೂ ಗೂಢಸಂಭಾಷಣೆಯ ಮೂಲಕ ತಿಳಿದುಕೊಳ್ಳುವೆನು.” ಎಂದು ನಿಶ್ಚಯಿಸಿ ಆ ಸುನಂದನನ್ನು ಕುರಿತು ಪ್ರೇಮದಿಂದ:-(ಸುನಂದನೇ! ನಿನಗೆ ಕ್ಷೇಮವೆ?” ಎಂದು ಕೇಳಲು ಸುನಂದನು ವಿಕಸಿತವದನನಾಗಿ:-(ಅಭಿಪಾರಗನೆ ನಿನ್ನ ಭುಜಬಲಪ್ರ ಭಾವದಿಂದ ನಾನು ಸುಕ್ಷೇಮಿಯು ಕಾಶ್ಮೀರದಿಂದಾವಾಗ ಆಗಮ ನವ?' ಅಭಿ:-ct ಈಗತಾನೇ ಬರುತ್ತಿಹೆನು; ರಾಜಕುಲವು ಸುಕ್ಷೇಮವಾ ಗಿರುವುದೆ??” ಸುನ- ಅದೂ ಸುಕ್ಷೇಮವಾಗಿಹುದು.” ಅಭಿ-(ಸಂತೋ ಷವನ್ನು ನಟಿಸುತ್ತ) :ಸಂತೋಷ ಈಗೆಲ್ಲಿಂದ ಬರುತ್ತಿರುವೆ? ” ಸುನರಾಜಮಂದಿರದ ಅಶ್ವಶಾಲೆಯಿಂದ ಬರುತ್ತಿಹೆನು ಅಭಿ-ಹಾಗೋ? ಹಾಗಾದರೆ ಸಾರಥಿತ್ವದ ಈದಿನದ ಸರದಿಯು ನಿನ್ನ ದೋ, ಅಥವಾ ಇನ್ನಾರದೋ??” ಸುನ- (ನಿರುತ್ಸಾಹನಾಗಿ) ಎನ್ನ ದೂ ಅಲ್ಲ; ಇತರ ರದೂ ಅಲ್ಲ” ಅಭಿ-(ಸ್ವಗತ) ಇದೇನೋ ಸ್ವಲ್ಪ ಅವಕಾಶವು ಸಿಕ್ಕಿ ದಹಾಗೆ ತೋರುವುದು! (ಕುತೂಹಲದಿಂದ ಪ್ರಕಾಶ) ಅದೇಕೆ?” ಸುನ« ಹೋದವರುಷದ ಕೌಮುದೀ ಮಹೋತ್ಸವವಾದಂದಿನಿಂದ ಮಹಾರಾ ಜನು ಅಸ್ವಸ್ಥನಾಗಿರುವುದರಿಂದ ರಥಾರೋಹಣವನ್ನೆ ಮಾಡಲಿಲ್ಲ.” ಅಭಿ:-(ಕುತೂಹಲವನ್ನು ನಟಿಸಿ) ಮಹಾರಾಜನಿಗೆ ದೇಹದಲ್ಲಿ ಏನು ಆಲಸ್ಯ? ಸುನ: -ಮಹಾರಾಜನು ಶುದ್ಧಾಂಗವಾಗಿ ಜನಸಂಗವನ್ನೇ
ಪುಟ:ಧರ್ಮಸಾಮ್ರಾಜ್ಯಂ.djvu/೧೪೪
ಗೋಚರ