ಪುಟ:ಧರ್ಮಸಾಮ್ರಾಜ್ಯಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮) ಮರನಯ ಅಂಗ. ೮೭ ••••• , , , , • • • • • • • • • • • • ಬಿಟ್ಟಿರುವದರಿಂದ ಅದರ ಕಾರಣವು ಮುಖ್ಯಮಂತ್ರಿಗೂ ತಿಳಿಯದೇ ಇರುವಲ್ಲಿ, ಎನಗೆ ತಿಳಿಯುವ ಬಗೆ ಹೇಗೆ ? ಅಂತೂ ಬಾಹ್ಯರೋಗಾದಿ ಗಳೊಂದೂ ಇಲ್ಲವಂತೆ, ಆದರೂ ಅನ್ನಾ ದ್ಯಾಹಾರಗಳಲ್ಲಿಯ ಉಪೇಕ್ಷೆ ಯನ್ನು ತಳೆದು ದಿನೇದಿನೇ ಕ್ಷೀಣಾಂಗನಾಗುತ್ತಿಹನಂತೆ.” ಅಭಿ-ಆ ಕೌಮುದೀ ಮಹೋತ್ಸವದ ದಿನ ಆರೋಗ್ಯವಾಗಿರ್ದನೋ ಇಲ್ಲವೋ? ಸುನ-'ಆದಿನ ಆರೋಗ್ಯವಾಗಿಯೂ ಇರ್ದನು; ಮತ್ತು ಆದಿನದ ಉತ್ಸ ವವೂ ಅತಿ ಸಂಭ್ರಮದಿಂದ ನಡೆಯಿತು.” ಅಭಿ:- ಆದಿನ ಮಹಾರಾಜ ನಿಗೆ ಆರಾದರೂ ಅಪರೂಪವಾದ ವಸ್ತುವನ್ನೇನಾದರೂ ಅರ್ಪಿಸಿದರೋ? ಅಥವಾ ಇನ್ನಾವುದಾದರೂ ಆಶ್ಚರ್ಯಕರವಾದ ವಸ್ತುವನ್ನು ನೋಡಿ ದನೋ ? ಸುನ-ಅದೇನೂ ಇಲ್ಲ, ಆದರೆ ಆದಿನ ಕಿರೀಟವನ ಮಗ ಳಾದ ಉನ್ಮಾದಿನಿಯು ನಾರುಮಡಿಯನ್ನುಟ್ಟು ತಮ್ಮ ಮನೆಯ ಮು ಮ್ಯಾಳಿಗೆಯಮೇಲೆ ನಿಂತಿರ್ದಳು; ಮಹಾರಾಜನು ಅವಳನ್ನೇ ನೋಡು ತಿರ್ದನು; ಅವಳೂ ಅವನನ್ನೇ ನೋಡುತ್ತ ಅಳುತಿರ್ದಳು; ಇದು ರಾಜ ಗೌರವಕ್ಕೆ ಕುಂದೆಂದು ನಾನು ರಥವನ್ನು ವೇಗವಾಗಿ ಮುಂದುವರಿಸಿ ಬಿಟ್ಟೆನು. ಅಭಿ:-(ಸ್ವಗತ) cಓಹೊ ! ಇಲ್ಲಿಯೇ ಏನೋ ಜೀವಾಳ ವಿದೆ! (ಪ್ರಕಾಶ) ಪುನಃ ಅವಳ ವಿಚಾರವೇನಾದರೂ ನಡೆಯಿತೋ??? ಸುನ:-“ಮಹಾರಾಜನು ಆದಿನ ಅರಮನೆಯನ್ನು ಸೇರಿದಮೇಲೆ ಎನ್ನ ನ್ನು ಕುರಿತು- ಅವಳಾರಮಗಳು ? ಅವಳ ಹೆಸರೇನು?” ಎಂದು ಕೇಳಿದನು; ಅದಕ್ಕೆ ನಾನು ಅವಳ ವಿಷಯವನ್ನೆಲ್ಲ ಸವಿಸ್ತಾರವಾಗಿ ಹೇಳಿ ಮನೆಗೆ ಹೊರಟುಹೋದೆನು; ಅಷ್ಟೇ ಇನ್ನೇನೂ ವಿಶೇಷವಿಲ್ಲ.” ಅಭಿಃ-(ಉಪೇಕ್ಷೆ ಯನ್ನು ನಟಿಸುತ್ತ) (ಅಷ್ಟೇನೇ ? ಒಳ್ಳೆಯದು! ನಿನಗೆ ಭೋಜನ ಕಾ ಲವು ಮಾರುತ್ತಾಬಂದಿತು; ಇನ್ನು ತೆರಳುವನಾಗು.” ಎಂದು ಹೇಳಲು ಅವನು ಹೊರಟುಹೋದನು. ಬಳಿಕ ಅಭಿಪಾರಗನು ಚಿಂತಾಕ್ರಾಂತನಾಗಿ ಈರೀತಿ ಆತ್ಮಜಿಜ್ಞಾಸೆ ಯನ್ನು ಮಾಡಲುಪಕ್ರಮಿಸಿದನು:- ಆಹಾ! ರಾಜನು ಸ್ವಕಾರ್ಯದಿಂದ