ಪುಟ:ಧರ್ಮಸಾಮ್ರಾಜ್ಯಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ಧರ್ಮಸಾಮ್ರಾಜ್ಯಮ್ [ಸಂಧಿ •••• 11 * * * * 1/ 1 : V v/ + ' ಎಮುಖನಾದುದರಿಂದಲೇ ಸಚಿವಾದಿಗಳೂ ವಿಮುಖರಾಗಿ, ಅಂತೂ ರಾಜ್ಯವು ದುಃಸ್ಥಿತಿಗೆ ಬರಲ. ನಕ್ರಮಿಸಿತು; ಮಹಾರಾಜನು ಆರೀತಿ ವಿಮುಖನಾಗಲು ಆ ಉನ್ಮಾದಯನ್ತಿಯೇ ಕಾರಣವಾಗಿರಬಹುದೆ ? ಇಲ್ಲ ! ಏಕೆಂದರೆ, ಮಹಾರಾಜನು ಪರಸ್ತ್ರೀಪರಾಂಗು ಖನು ; ಮತ್ತು ದುಷ್ಕಾಮಿಯ ಅಲ್ಲ... ಹಾಗಾದರಿನ್ನಾ ವಕಾರಣವಾಗಿರಬಹುದು ? ಇನ್ನಾ ವಕಾರಣವೂ ತೋರುವುದಿಲ್ಲ ; ಸಂದೇಹವೇನು ? ಸುನಂದನ ಮಾತುಗಳನ್ನೆಲ್ಲ / Pಚಿಸಿದರೆ ಉನ್ಮಾದಿನಿಯೇ ಕಾರಣವಾಗಿರಬೇಕೆಂ ದು ತೋರುವುದು; ಏಕೆಂದರೆ, ಮಹಾರಾಜನನ್ನು ನೋಡಿ ಉನ್ಮಾ ದಿನಿಯು ಅಳುತಿರ್ದಳೆಂಬ ಸಂಗತಿಯನ್ನೂ, ಅವಳನ್ನು ಮಹಾರಾಜನು ದೃಷ್ಟಿಸಿದನೆಂಬ ಸಂಗತಿಯನ್ನೂ, ಅರಮನೆಗೆ ಹೋದಮೇಲೆ ಪ್ರನಃ ಆ ವಳ ವಿಷಯವನ್ನು ವಿಚಾರಮಾಡಿದನೆಂಬ ಸಂಗತಿಯನ್ನೂ ಸಹ, ಕು ರಿತು ಯೋಚಿಸಿದರೆ, ಅವರವರಿಗೆ ಆವುದೋ ಪೂರ್ವಸಂಬಂಧವಿರ್ದಂತೆ ತೋರುವುದು; ಈ ಊಹೆಯೇ ನಿಜವಾಗಿರಬೇಕು; ಏಕೆಂದರೆ ಉನ್ಮಾದ ಯಂತಿಯು ರಾಜನನ್ನು ನೋಡುವ ಉತ್ಸವಕಾಲದಲ್ಲಿ ಇತರರೆಲ್ಲ ರಂತೆ ದಿವ್ಯ ವಸ್ತ್ರಾಭರಣಗಳಿಂದ ಅಲಂಕೃತಳಾಗದೆ ನಾರುಮಡಿಯನ್ನುಟ್ಸ್ ಎಭವವಾಸರದ ಹರ್ಷವನ್ನು ಸೂಚಿಸುವುದಕ್ಕೆ ಪ್ರತಿಯಾಗಿ ದುಃಖವನ್ನೂ ಕಾರ್ಪಣ್ಯವನ್ನೂ ತೋರ್ಪಡಿಸುತಿರ್ದಳು; ಇಷ್ಟೇಅಲ್ಲದೆ ವಿವಾಹಕಾ ಲದಲ್ಲಿ ಅವಳು ಮರ್ಛಗೊಂಡಿರ್ದುದೂ, ಅವಳ ತಂದೆಯು ನೆಂಟರಿ ಷ್ಟರನ್ನು ಕರೆಸದೆ ಆತುರದಿಂದ ಗೋಪ್ಯವಾಗಿ ಎನ್ನಿ೦ದ ಮಾಂಗಲ್ಯವನ್ನು ಕಟ್ಟಿಸಿದುದೂ, ಇಊಹೆ'ಯನ್ನು ಬಲಪಡಿಸುವುದಕ್ಕೆ ಸಾಕಾದ ಕಾರಣಗಳಾಗಿವೆ; ಇದಮೇಲೆ ಇನ್ನೊಂದು ಪ್ರಬಲವಾದ ಕಾರಣವೂ ಇರುವುದು; ಅದೇನೆಂದರೆ-ಗರ್ಭಾಧಾನ ಸಮಾವೇಶನ ಮುಂತಾದ ದೇ ಹಸಂಯೋಜನಕಾರ್ಯಗಳಿಗೆ ಅವಕಾಶಕೊಡದೆ, ವ್ರತವ್ಯಾಜವನ್ನು ದೂತಿಯ ಮುಖದಿಂದ ಹೇಳಿಕಳುಹಿದರು; ಸಂಶಯವೇನು? ಈ ಕಾರಣ ಗಳಿಂದ ರಾಜನಿಗೂ ಉನ್ಮಾದಯನ್ತಿಗೂ ಅವುದೋ ಪೂರ್ವಸಂಬಂಧವು