ಪುಟ:ಧರ್ಮಸಾಮ್ರಾಜ್ಯಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ರ್೮ ••••••••• ••••••••ಒwww ಇರಲೇಬೇಕು ; ಮತ್ತು ಅವಳ ಎರಹದಿಂದಲೇ ವ್ಯಾಕುಲಿತನಾದ ಮಹಾ ರಾಜನು ರಾಜಕಾರ್ಯದಲ್ಲಿ ನಿರುತ್ಸಾಹನಾಗಿರುವುದರಿಂದ ರಾಜ್ಯವು ಹೀನಸ್ಥಿತಿಗೆ ಬಂದಿರುವುದು; ಆದಕಾರಣ ನಾನೀಗ ಮೊದಲು ರಾಜನಲ್ಲಿ ಗೆ ಹೋಗಿ ಉಪಾಯಾಂತರದಿಂದ ಅವನ ಅಂತರಂಗವನ್ನು ತಿಳಿದು ಉ ನ್ಯಾದಯಂತಿಯನ್ನು ಅವನಿಗೆ ಸೇರಿಸುವೆನು; ಹಾಗೆ ಮಾಡದೇ ಹೋದರೆ ಈರ್ವರೂ ಮನ್ಮಥಪೀಡನದಿಂದ ದಶಮಾವಸ್ಥೆಯನ್ನು ಹೊಂದಬಹುದು; ಈ ಕಾರ್ಯವು ದೋಷವಾಗಿಯ ತೋರದು; ಏಕೆಂದರೆ, ಎನಗೆ ನಡೆ ದಿರುವ ಉದ್ಯಾಹವು ವಧುವಿಗೆ ಇಷ್ಟವಲ್ಲ ದುದು; ಮತ್ತು ಅಪೂರ್ಣವಾ ದುದು; ಅದಲ್ಲದೆ ಪರಸ್ಪರ ಮೋಹಾನ್ವಿತವಾದ ದೇಹಸಂಬಂಧವೂ ಆಗಿಲ್ಲ ; ಇನ್ನು ತಡಮಾಡಿದರೆ ರಾಜ್ಯವೆಲ್ಲ ಹಾಳಾಗಿ ಪ್ರಜೋಪದ್ರ ವಗಳೂ ಪ್ರಬಲಿಸಿ, ಇತ್ತ ಮಹಾರಾಜನೂ ಪಂಚತ್ವವನ್ನು ಐದುವುದರಿಂದ ಸರ್ವನಾಶವೂ ಆಗುವುದು ; ನಾನೀಗಲೇ ರಾಜನಲ್ಲಿಗೆ ಹೋಗುವೆನು.” ಎಂದು ಯೋಚಿಸಿಕೊಂಡು ಹೊರಟುಹೋದನು. ಮರನೆಯ ಅಂಗವು ಮುಗಿದುದು. “ಗಟ್ಟು ನಾಲ್ಕನೆಯ ಅಂಗ ಒಂದನೆಯ ಸಂಧಿ THE FAITHFUL SERVENT AND LAW-SUBTLITIES. ನೃತ್ಯಗುಣಸಂಪತ್ತಿ ಮತ್ತು ಧರ್ಮಸೂಕ್ಷ್ಯ ಇತ್ತಲಾ ದೇವಸೇನಮಹಾರಾಜನು ಶಶಿಕಾಂತದುಪ್ಪರಿಗೆಯ ಮೇ ಲೆ ಓರ್ವನೇ ಕುಳಿತು ಪಶ್ಚಾತ್ತಾಪದಿಂದ:- ಅಯ್ಯೋ! ಸುಂದರಿಯಾದ ಆ ಉನ್ಮಾದಿನಿಯನ್ನೂ ಮತ್ತವಳ ಮಾತಾಪಿತೃಗಳನ್ನೂ ಅನ್ಯಾಯವಾಗಿ ನಿಂದಿಸಿ, ಅವಮಾನಗೊಳಿಸಿದೆನಲ್ಲ; ಎನ್ನ ಧಿಕ್ಕಾರಶಲ್ಯದಿಂದ ಅವರ ಹೃದ