ಪುಟ:ಧರ್ಮಸಾಮ್ರಾಜ್ಯಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೯೧ \r r\ \ \ \# \# vvvvv\\ ಎಂದು ಹೇಳಿದ ಬಳಿಕ ಶಿಲಾತಲದಲ್ಲಿ ಕುಳಿತು ಉತ್ಸಾಹದಿಂದ:- ಒಳ್ಳೆಯದು! ಎನ್ನ ಮನಸ್ಸಿನಲ್ಲಿ ಸ್ಪುರಿಸುತ್ತಿರುವಂತೆಯೇ ಆಕೆಯ ರೂಪವನ್ನು ಇಲ್ಲಿ ಚಿತ್ರಿಸುವೆನು.” ಎಂದು ಅಲ್ಲಿ ಚಿತ್ರಿಸಿದ ಬಳಿಕ ಒಂದು ಕ್ಷಣಕಾಲ ಅದನ್ನೇ ನೋಡಿ ಕುತಭಾವದಿಂದ [೪೧ ತಾ-“ಬೆರಗುವಡೆದ ಜಿಂಕೆಯ ಕಣ್ಣಳ ಚಾಂಚಲ್ಯವನ್ನು ಧಿಕ್ಕರಿಸುವ ಆ ದೃಷ್ಟಿಯ, ಶರತ್ಕಾಲದ ಚಂದ್ರನ ಕಿರಣಗಳ ಪ್ರಕಾ ಶಕ್ಕೆ ಪೋಲ್ವ ಆ ಸೌಮ್ಯ ಕಾಂತಿಯ, ಅಮೃತಸಮುದ್ರದಲ್ಲಿ ಮೇಲ್ವ ರಿದು ಬರುವ ಲಲಿತತರಂಗಗಳಂತೆ ಥಳಥಳಿಸ ಆ ಲಾವಣ್ಯವೂ, ಮತ್ತಿ೦ ತಹ ಆಶ್ಚರ್ಯಕರವಾದ ವ್ಯಾಪಾರಗಳುಳ್ಳ ಆ ದೇಹದ ರಮ್ಯತೆಯ, ಜಡವಾದೀ ಚಿತ್ರದಲ್ಲಿ ಎಂತುತಾನೇ ಅಳವಡುವುದು ?' ಎಂದು ಮಾತನಾಡಿಕೊಂಡ ಬಳಿಕ ಅಲ್ಲಿರ್ದ ಮೃದುತಲ್ಪದಲ್ಲಿ ಕುಳಿತು ಆತ್ಮಲಜ್ಜೆಯಿಂದೊಡಗೂಡಿ:-(ನಾನವಳನ್ನು ನೋಡಿದಾಗ ಆಕೆಯ ಭ್ರಮರದ ದೃಷ್ಟತೆಯನ್ನೂ ಚೇಷ್ಟೆಯನ್ನೂ ಅರಿಯದ ಸದ್ದಿನಿ ಯಂತೆ, ಇನ್ನೂ ಕನ್ಯಯಾಗಿ ಕಂಡುಬಂದಳು: ಈಗೇನಾದರೂ ಉದ್ಘಾ ಹಿತಳಾಗಿರಬಹುದೆ? ಒಂದುಪಕ್ಷ ಹಾಗೆ ವಿವಾಹಿತೆಯಾಗಿರ್ದಲ್ಲಿ ಆಕೆಯು ಎನ್ನ ಭಾಗಕ್ಕೆ ಪರಸ್ತ್ರೀಯಾದಳು: ಹೀಗಿರುವಲ್ಲಿ ಪರಸ್ತ್ರೀಯ ರೂಪಲಾ ವಣ್ಯಗಳನ್ನು ವರ್ಣಿಸುವುದೂ ಕೂಡ ದೋಷವಲ್ಲವೆ ? ಛೇ! ನಾನೆಂತಹ ಅವಿವೇಕಿಯು! ಹಾ! [೪೨ ತಾ:-Iಇದೇನು! ಪರಭಾರ್ಯೆಯ ವಿಷಯದಲ್ಲಿ ಎನಗೂ ಶ್ಲೋ|| ದೃಷ್ಟಿರ್ಮುಗ್ಗ ಕುರಂಗಲೋಚನಚಮತ್ಕಾರಕ್ರಿಯಾಸ್ಪರ್ಧಿನೀ ಭಾಸ್ವಚ್ಛಾರದಚಂದ್ರಿಕಾಸಹಚರೀ ಸಾ ಕಾಪಿ ವಕ್ರ ದ್ಯುತಿಃ | ಲಾವಣ್ಯಂ ನನು ತತ್ತು ಧಾಜಲನಿಧೇ ರಿಂಗ ರಂಗಾಯಿತಂ ಏತಸ್ಯಾಃ ಕಥಮೇತು ಚಿತ್ರಪದವಿಮಶ್ಚರ್ಯಚರ್ಯ೦ ವಪುಃ ||೪೧|| ಪರಸ್ಯ ನಾಮ ಭಾರ್ಯಾಯಾಂ ಮಾನಾವಮಧೀರತಾ | ತದುನ್ಮಸ್ಮಿ ಸಂತ್ಯಕ್ಕೂ ಲಜ್ಜ ಏವಾದ ನಿದ್ರಯಾ |೪೨||