ಪುಟ:ಧರ್ಮಸಾಮ್ರಾಜ್ಯಂ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಧರ್ಮಸಾಮ್ರಾಜ್ಯಮ್ [ಸಂಧಿ Tv• • • • • Fvs/St \ tvi' 41 1 1 ಮನೋವಿಕಾರವು? ಆದುದರಿಂದ ನಾನು ಉತ್ಮನೇ ಆಗಿರುವನು; ನಿದ್ರಾ ವಸ್ಥೆಗೆ ದೂರನಾದಂತೆ ನಾನೀಗ ಲಜ್ಜೆಗೂ ದೂರನಾಗಿಹೆನು ?” 1 ಎಂದು ಮಾತನಾಡಿಕೊಳುತಿರ್ದ ಸಮಯಕ್ಕೆ ಸರಿಯಾಗಿ, ಇವಿ ಷಯಗಳನ್ನೆಲ್ಲ ಮರೆಯೋಳೆ ನಿಂದು ನೋಡುತಿರ್ದ ಅಭಿಪಾರಗನು, ರಾಜನ ಸಮೀಪವನ್ನೆ ದಿ, ಭಕ್ತಿಗೌರವಗಳಿಂದೊಡಗೂಡಿ:—“ಜಯ ವಾಗಲಿ ಮಹಾರಾಜನಿಗೆ. ಎಂದು ಹೇಳಲು, ದೇವಸೇನನು ಬೆಚ್ಚಿದವ ನಾಗಿ, ಬಳಿಕ ಇತ್ತ ತಿರುಗಿ ಅಭಿಪಾರಗನನ್ನು ನೋಡಿ ಧೈರ್ಯಸಂಭ್ರಮ ವನ್ನು ನಟಿಸುತ್ತ_ ಅಭಿಪಾರಗನೇ! ದೀರ್ಘಾಯುವಾಗು; ಕಾಶ್ಮೀರಿ ಯುದ್ಧದ ವಿಚಾರವೇನು? ” ಎಂದು ಕೇಳಲು ಅಭಿಪಾರಗನು, ಕಾಶ್ಮೀ ರರಾಜನು ಕಳುಹಿರ್ದ ವಸ್ತ್ರಾಭರಣರತ್ನ ಮುಂತಾದ ಕಾಣಿಕೆಗಳನ್ನು ಮುಂದಿಟ್ಟು ಸಂತೋಷದಿಂದ:- ಜೀಯ! ನಿನ್ನ ಅನ್ನ ಪ್ರಭಾವದಿಂದಲೂ ಪ್ರೋತ್ಸಾಹದಿಂದಲೂ ಉತ್ತೇಜನವನ್ನು ಹೊಂದಿದ ನಾನು, ಕಾಶ್ಮೀರರಾ ಜನ ಶತ್ರುವಾದ ಹೂಣರಾಜನ ಸೈನ್ಯವನ್ನು ಯುದ್ಧದಲ್ಲಿ ಜಯಿಸಿ, ಆರಾಜನನ್ನೂ ಸೆರೆಗೊಂಡು ತಂದೊಪ್ಪಿಸಿದೆನು; ಆದರೆ, ಕಾಶ್ಮೀರರಾಜನು ಹೂಣರಾಜನ ಶಿರಸ್ಸನ್ನು ಸ್ವಹಸ್ತದಿಂದಲೇ ಛೇದಿಸಬೇಕೆಂದು ಉದ್ಯುಕ್ತ ನಾಗಲು, ಅವನು ಆರೀತಿ ಮಾಡದಂತೆ ನಾನು ಅವನಿಗೆ ಬುದ್ದಿವಾದ ವನ್ನು ಹೇಳಿ, ಹೂಣರಾಜನ ಪ್ರಾಣಗಳನ್ನು ಉಳುಹಿ, ಅವನ ರಾಜ್ಯವನ್ನು ಪುನಃ ಅವನಿಗೇ ಕೊಡಿಸಿ, ಮುಂದಕ್ಕೆ ಕಾಶ್ಮೀರರಾಜನಿಗೆ ಮಿತ್ರನಾ ಗಿಯ ಸಾಮಂತನಾಗಿಯೂ ಇರುವಂತೆ ಮಾಡಿದೆನು; ಈ ಸಂಧಿಚಾತ ರ್ಯದಿಂದ ಸಂತುಷ್ಟನಾದ ಕಾಶೀರಾಧಿಸನೂ ಮತ್ತಾ ಹೂಣೇಶ್ವರನೂ, ನಾನು ಧರಿಸಿರುವೀ ವಸ್ತ್ರಾಭರಣಾದಿಗಳನ್ನೂ ಈ ದಿವ್ಯ ಖಡ್ಗವನ್ನೂ ಎನಗೆ ಬಹುಮಾನವಾಗಿ ಕೊಟ್ಟು ದು ಮಾತ್ರವಲ್ಲದೆ, ತಂತಮ್ಮ ಕೃತಜ್ಞತೆ ಯನ್ನು ಸೂಚಿಸುವನಿಮಿತ್ತ, ಅನರ್ಥ್ಯವಾದ ಕಾಣಿಕೆಯನ್ನೂ ನಿನ್ನ ಸಂ ನಿಧಿಗೆ ಕಳುಹಿಸಿರುವರು.” ಎಂದು ಹೇಳಲು ದೇವಸೇನನು ಪರಮ ಸಂತೋಷಗೊಂಡು:-(ಅಭಿಸಾರಗನೇ! ನೀನೆನ್ನ ಆಪ್ತ ಮಿತ್ರನಾಗಿಯ