ಪುಟ:ಧರ್ಮಸಾಮ್ರಾಜ್ಯಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಧರ್ಮಸಾಮ್ರಾಜ್ಯ [ಸಂಧಿ • : 12 t+(l, rs ht tft* *1* * +1 P fs t+Fhtshh ನಡೆಸಿಕೊಂಡು ಹೋಗುವದು ಇವರುಗಳ ಕರ್ತವ್ಯವಲ್ಲವೆ ? ನಾನು ರಾಜಧಾನಿಯಲ್ಲಿ ಇರುವಾಗಲೇ ಈರೀತಿಯಾದಮೇಲೆ ನಾನಿಲ್ಲ ದವೇಳೆ ಯಲ್ಲಿನ್ನೇನುಗತಿ ? ಇಂತಹ ಸಾಮರ್ಥ್ಯಹೀನರನ್ನು ನಂಬಿದರೆ ರಾಜ್ಯವೇ ಹಾಳಾಗುವುದು; ಮುಖ್ಯವಾಗಿ ಅವರನ್ನು ನಿಂದಿಸಿ ಪ್ರಯೋಜನವಿಲ್ಲ. ಏಕೆಂದರೆ ನೀತಿಜ್ಞರು ಹೀಗೆ ಹೇಳುವರು. [೫೨ ತಾ:- ತಲೆಯು ರೋಗದಿಂದ ಪೀಡಿತವಾದುದಾದರೆ, ಉಳಿದ ಅಂಗಗಳು ಸ್ವಕಾರ್ಯವನ್ನು ತ್ಯಜಿಸಿ ಜಡತ್ವವನ್ನು ಹೊಂದು ವುವು; ಅದರಂತೆಯೇ ಸ್ವಕಾರ್ಯದಲ್ಲಿ ರಾಜನು ಸ್ವಲ್ಪ ಉಪೇಕ್ಷೆಯುಳ್ಳ ವನಾದರೆ ಮಂತ್ರಿ ಮುಂತಾದ ನೃತ್ಯರು ಹಗಲೇ ನಿದ್ರಿಸುವರು.”] ಎಂದು ವಿಷಾದಗೊಂಡ ಬಳಿಕ ಮಧ್ಯಾನ್ನವು ಸವಿಾಪಿಸಲಾಗಿ ತವಕದಿಂದ:-* ಅಭಿಪಾರಗನೇ ! ನೀನಿನ್ನು ಮನೆಗೆ ಭೋಜನಕ್ಕೆ ನಡೆ; ನಾನೀಗಲೇ ಹೋಗಿ ಜೋರರನ್ನು ವಿಚಾರಿಸುವೆನು.” ಎಂದು ಹೊರಟು ಹೋದನು. ಎರಡನೆಯ ಸಂಧಿ. HUNGER: THE MOTHER OF CRIMES. ಅನ್ನಾಭಾವದ ಆಪದಗಳು. ಬಳಿಕಲಾದೇವಸೇನನ್ನು ಆಕ್ಷಣವೇ ನ್ಯಾಯಮಂದಿರವನ್ನು ಸೇರಿ ಧರ್ಮಾ ಸನದಲ್ಲಿ ಕುಳಿತು, ಸಾಲಾಗಿ ನಿಂತಿರುವ ಆ ಜೋರರನ್ನು ಕುರಿತು ಧೃಷ್ಟತೆಯಿಂದ:- ಎಲೈ ಚೋರರಿರಾ! ನೀವಾರು? ” ಎಂದು ಕೇಳಲು ಜೂಜಕನೆಂಬ ಬ್ರಾಹ್ಮಣನು ಉಳಿದ ಜೋರರನ್ನೆಲ್ಲ ಹಿಂದೆಬಿಟ್ಟು ಮುಂದಕ್ಕೆ ಬಂದು, ರಾಜನಿಗೆ ವಂದಿಸಿ ವಿನಯದಿಂದ:-ttನಾವು ಅಂಗ ಜಡತಾಂ ಯಾನ್ತಿ ಗಾಡ್ರಾಣಿ ಮಸ್ತಕ ವ್ಯಾಧಿಪೀಡಿತೇ | ಕಾರ್ಯೆ ಹಿ ವಿಮುಖೇ ಜಾಜ್ಞೆ ಸ್ವಪನ್ತಿ ಸಚಿವಾ ದಿವಾ ||೫೫||