ಪುಟ:ಧರ್ಮಸಾಮ್ರಾಜ್ಯಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೦೫ ಲೂ ಹೇಳಬೇಕಾಗಿರುವುದು, ಇದನ್ನು ಮಟ್ಟಿಗೆ ದೋಷವಾಗಿ ಭಾವಿಸಲಾ ಗವೆಂದು ಬೇಡುವೆನು.” ದೇವ: ಇಲ್ಲ ; ನಿಜಾಂಶವನ್ನು ಹೇಳು!' ಜೂಜ-(ದೈನ್ಯದಿಂದ):ಎಮ್ಮ ರಾಜ್ಯದಲ್ಲಿ ಕ್ಷಾಮವು ಪ್ರಾಪ್ತವಾದುದರಿo ದ ಕ್ಷುಧಾತುರರಾದ ಅನೇಕ ಪ್ರಜೆಗಳು ತಮ್ಮ ದುಃಖವನ್ನು ಪರಿಹರಿಸ ಬೇಕೆಂದು ರಾಜನ ಅಧಿಕಾರಿಗಳಿಗೆ ಮೊರೆಯಿಡಲು, ಅವರು ಅದನ್ನು ಲಕ್ಷಿಸದೇ ಹೋದರು, ಹೀಗೆಯೇ ಕೆಲವು ಕಾಲ ಗತಿಸುವುದರೊಳಗಾಗಿ, ಅನೇಕರು ಅನ್ನ ಪಾನಗಳಿಲ್ಲದೆ ಸಾಯುತ್ತಿರುವುದನ್ನು ನೋಡಿ ಸಹಿಸಲಾ ರದೆ, ರಾಜನಿಗೆ ಮೊರೆಯಿಡುವ ಉದ್ದೇಶದಿಂದ, ರಾಜಮಂದಿರದ ಇದಿರಿಗೆ ಆರ್ತಧ್ವನಿಯನ್ನು ಮಾಡಲಾಗಿ, ಅಂತಃಪುರದ ಸ್ತ್ರೀಯರ ಕೇಳಿಯಲ್ಲಿರ್ದ ರಾಜನು ಕುಪಿತನಾಗಿ ಎಮ್ಮೆಲ್ಲರನ್ನೂ ರಾಚ್ಯಾವರಣದಿಂದಾಚೆಗೆ ಹೊರ ಡಿಸಿಬಿಡುವಂತೆ ತನ್ನ ದಾತರಿಗೆ ಆಜ್ಞಾಪಿಸಿದನು; ಒಳಿಕ ಎಮ್ಮ ದುರವ ಸ್ಥೆಗಳನ್ನು ನೋಡಿ ಸಹಿಸಲಾರದೆ ಪತ್ನಿ ಪುತ್ರಾದಿ ಬಂಧು ಜನರು, ಪ್ರತಿಬಂ ಧಿಸಿದುದರಿಂದ ಅವರುಗಳಲ್ಲಿ ಕೆಲವರನ್ನು ಶೂಲಕ್ಕೆ ಹಾಕಿಸಿದುದಲ್ಲದೆ, ಸ್ತ್ರೀಶಿಶುಗಳೆಂಬ ತಾರತಮ್ಯವನ್ನೆಣಿಸದೆ ಕ್ರೂರವಾಗಿ ಹಿಂಸಿಸಿ, ಕಾರಾಗಾ ರಕ್ಕೆ ಕಳುಹಿಬಿಟ್ಟರು; ನಾವುಗಳಿನ್ನೂ ಅಲ್ಲಿಯೇ ಇರ್ದರೆ ಎಮ್ಮ ಪ್ರಾಣ ಗಳೂ ನಾಶವಾಗುವುದೆಂಬ ಭೀತಿಯಿಂದ ಕಂಗೆಟ್ಟು ಓಡಿಬಂದು, ದಯಾ ದ್ರ್ರಹೃದಯನಾದ ನಿನ್ನಿಂದ ಪರಿಪಾಲಿಸಲ್ಪಡುತ್ತಿರುವೀ ರಾಜ್ಯವನ್ನು ಪ್ರವೇಶಿಸಿ, ಪ್ರಾಣಗಳನ್ನು ಕಾಪಾಡಿಕೊಂಡೆವು.” ಎಂದು ಹೇಳಿದನು. ಈ ಕ್ರೌರ್ಯವನ್ನು ಕೇಳಿದ ದೇವಸೇನನು ವ್ಯಸನಗೊಂಡವನಾಗಿ“ಪಾ! ಕಷ್ಟ ಕಷ್ಟ!! ಹಸಿವಿನಿಂದ ಕಾಡುವ ತನ್ನ ಮಕ್ಕಳನ್ನು ತಂದೆ ಯಾದವನೇ ಕೊಲ್ಲಿಸಿದಂತಾಯಿತಲ್ಲ! [೫೮, ತಾ:- ಅಯ್ಯೋ! ಆ ರಾಜನ ಬುದ್ದಿಯು ದಯಾಶೂನ್ಯ ವಾಗಿಯೂ, ಲಜ್ಞಾವಿಹೀನವಾಗಿಯ, ಪರಲೋಕಭೀತಿಗೆ ದೂರವಾ ಮೃಹಾವಿಮುಕ್ತಾ ಬತ ನಿರ್ವಪತ್ರತಾ ನೃ ಸಸ್ಯ ಬುದ್ಧಿಃ ಪರಲೋಕ ಸರ್ವಥಾ 1 ಅಹೊ?! ತಟಿಚ್ಚಂಚಲಯಾ ನೃಸಿಯಾ ಹೈ ತೇಯೆಣ ಸ್ವಹಿತಂ ನವೀಕೃತ ೫೮ 11