ಪುಟ:ಧರ್ಮಸಾಮ್ರಾಜ್ಯಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೦೭ ದುವು , ಉಳಿದಮಕ್ಕಳಿಗೂ ಅದೇ ದುರ್ಗತಿಯು ಪ್ರಾಪ್ತವಾಗುತಿರ್ದು ದನ್ನು ನೋಡಿ ಸಹಿಸಲಾರದೆ ಅಂತರಾತ್ಮ ಸಮ್ಮತಿಗೆ ವಿರುದ್ಧವಾಗಿರ್ದ ರೂ ಈ ಜೋರವೃತ್ತಿಯನ್ನು ಅವಲಂಬಿಸಬೇಕಾದ ನಿರ್ಬಂಧಕ್ಕೆ ಒಳ ಗಾದೆವು; ಆದಕಾರಣ ಎನ್ನ ದೋಷಗಳನ್ನು ಮನ್ನಿಸಿ ಕಾಪಾಡುವ ನಾಗೆಂದು ಬೇಡುವೆವು; ಏಕೆಂದರೆ [೬೧, ತಾ:-ಮಹಾಮಹಿಮನಾದ ನೀನೇ ಬಂಧುಶೂನ್ಯ ರಾದೆಮಗೆ ಬಂಧುವು; ಮತ್ತು ನಿರ್ಗತಿಕರಾದೆಮಗೆ ಸೀನೇ ಗತಿಯ ರಕ್ಷಕನೂ ಆಗಿರುವೆ. ಆದಕಾರಣ ಎಮ್ಮ ವಿಷಯದಲ್ಲಿ ನಿನಗೆ ಆವುದು ಯುಕ್ತವಾಗಿ ತೋರುವುದೊ ಅದರಂತೆಯೇ ಎಮ್ಮ ನು ರಕಿ ಸು!” | ಎಂದು ಹೇಳಿ ಸರ್ವರೂ ಅಂಜಲಿಬದ್ದ ರಾಗಿ ಬೇಡಿಕೊಂಡರು. ಇದನ್ನು ಕೇಳಿದ ದೇವಸೇನನು ಬೆದರಿದವನಾಗಿ ಆಶ್ಚರ್ಯದಿಂದ:- “ಪ್ರಮಾದ ! ಘೋರಪ್ರಮಾದ ! ಎನ್ನ ರಾಜ್ಯದಲ್ಲಿಯ ಪ್ರಜೆಗಳಿಗೆ ಅನ್ನಾ ಭಾವವಾಗಿರುವುದೆ ? ಹಾಗಾದರೆ ಎನ್ನ ರಾಜ್ಯವೃಕ್ಷದ ಬೇರೇ ಒಣಗಿಹೋಗಲುಪಕ್ರಮಿಸಿದಂತೆ ತೋರುವುದು! ರಾಜ್ಯದಲ್ಲಿ ಅನ್ನಕ್ಕೆ ಅಭಾವವಾದರೆ ಮಹಾಪಾತಕಗಳೆಲ್ಲವೂ ಉಂಟಾಗಿ, ಪ್ರಜೆಗಳೂ ರಾ ಷ್ಟವೂ ಕೊನೆಗೆ ರಾಜನಾದ ನಾನೂ ನಾಶವನ್ನೆ ದಲು ಇದೇ ಕಾ ರಣವಾಗುವುದು! ನೀತಿಕೋವಿದರು ಹೇಳಿರುವ ಈಮಾತು ಈಗ ಸತ್ಯವೇ ಆಯಿತು [೬೨, ತಾ-ಅನ್ನಕ್ಕೆ ಅಭಾವವಾದರೆ (ಪ್ರಾಣಿಗಳ) ಶರೀರ ದಲ್ಲಿನ ಸಪ್ತಧಾತುಗಳೂ ಹೇಗೆ ಕ್ಷಯಿಸಿಹೋಗುವುವೋ ಅದರಂತೆಯೇ, ಅನ್ನಕ್ಕೆ ಕೊರತೆಯಾದ ರಾಷ್ಟ್ರ (ವೆಂಬ ದೇಹದಲ್ಲಿನ ಸಪ್ತಾಂಗಗಳೂ ಕ್ಷಿಪ್ರದಲ್ಲಿಯೇ ನಾಶವನ್ನೆ ದುವುವು'] ತ್ಯಂ ನೋ ಬಂಧುರಬನ್ಸೂನಾಂ ತ್ವಂಗತಿಃ ಶರಣಂ ಚ ನಃ || ಯಥಾ ವೇ ಮಹಾಭಾಗ ತಥಾ ನಸ್ರಾ ತುಮರ್ಹತಿ |೬೧|| ಅನ್ನ ಪ್ರಣಾಶೇ ಕೀಯ ಶರೀರೇ ಸಪ್ತಧಾತವಃ | ಅನ್ನಹೀನೇ ತಥಾ ರಾಷ್ಟ್ರ, ಸಸ್ತಾಂಗಾನ್ಯ ಚಿರೇಣ ಹಿ ೬೨