ಪುಟ:ಧರ್ಮಸಾಮ್ರಾಜ್ಯಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಧರ್ಮಸಾಮಾಜ್ಯಮ್ [ಸಂಧಿ ಮುಖ್ಯವಾಗಿ ಇದು ಎನ್ನ ದೋಷವು!” ಎಂದು ತನ್ನಲ್ಲಿತಾನೇ ವಿವಾದಗೊಂಡು, ಬಳಿಕ ದೂತನಮುಖೇನ ಧಾನ್ಯಾಧಿಪತಿಯನ್ನೂ ಕೋ ಶಾಧಿಪತಿಯನ್ನೂ ಸತ್ರಾಧಿಪತಿಯನ್ನೂ ಕರೆಯಿಸಿ, ಕೋಪದಿಂದ ಅವ ರುಗಳ ಮುಖವನ್ನು ನೋಡಿದ ಬಳಿಕ ಅವರನ್ನು ಕುರಿತು:- ನಿಮ್ಮ ಗಳ ಮೌಡ್ಯಕ್ಕೂ ಕಾರ್ಯಾ ದಕ್ಷತೆಗೂ ಸ್ವಕ್ಷೇಮಚಿಂತನೆಗೂ ಶೋಕಿಸ ಬೇಕಾಗಿರುವುದು! ನಿಂನಿಮ್ಮ ಮಕ್ಕಳು ಅನ್ನಾ ಭಾವದಿಂದ ಸಂಕಟಪಡು ತಿರ್ದರೆ ಈರೀತಿ ಉಪೇಕ್ಷೆಯನ್ನು ತಳೆಯುತಿದಿರಾ ? ಅಯ್ಯೋ! ನಿಮ್ಮ ಹಾಳುಸ್ವಕ್ಷೇಮ ಚಿಂತೆಯೆ! ಧಿಕ್!! ಎಂದು ವ್ಯಸನಗೊಂಡಬಳಿಕ ಅವರು ಗಳನ್ನು ಕುರಿತು:- ಒಳ್ಳೆಯದು ! ಆದುದಾಯಿತು, ಈಗಲಾದರೂ ನಾನು ಹೇಳುವುದನ್ನು ಕೇಳಿರಿ-ಧಾನ್ಯಾಗಾರದಲ್ಲಿ ಇರುವ ಧಾನ್ಯಗ ಳನ್ನು ಅನ್ನಲ್ಲದೆ ಸಂಕಟಪಡುವ ಪ್ರತಿಯೋರ್ವನಿಗೂ 'ಈದಿನ ಮೊದ ಲ್ಗೊಂಡು ಸುಭಿಕ್ಷವು ಪ್ರಾಪ್ತವಾಗುವ ವರೆಗೂ ಕೊಡತಕ್ಕುದು, ಮತ್ತು ಪ್ರತಿಯೊಂದು ಸತ್ರದಲ್ಲಿಯ ದಿವಾರಾತ್ರಿಗಳಲ್ಲಿಯ ಜಾತಿ ನೀತಿ ಕು ಲಾದಿಗಳನ್ನೆಣಿಸದೆ ಅಶನಾರ್ಥಿ ಗಳಿಗೆ ಅವರವರ ತರಗತಿಗನುಸಾರವಾಗಿ ಅನ್ನ ಪಾನಾದಿಗಳಿಂದ ತೃಪ್ತಿಪಡಿಸತಕ್ಕುದು;ಧಾನ್ಯವು ಅಲ್ಲಿಲ್ಲದೇ ಇರ್ದರೆ, ಧಾನ್ಯಾದಿಗಳನ್ನು ಕೂಡಿಸಿಟ್ಟಿರುವವರುಗಳಿಂದ, ಅವರವರ ಸಂಸಾರಕ್ಕೆ ಉಪಯೋಗವಾಗುವಷ್ಟನ್ನು ಬಿಟ್ಟು, ಉಳಿದಿರುವ ಅಂಶವನ್ನು ತಂದು ಕಣಜದಲ್ಲಿ ತುಂಬಿಸತಕ್ಕುದು; ಹಾಗೆ ಅವರು ದುರಾಶೆಯಿಂದ ಸಂಮತಿ ಸದೇ ಹೋದರೆ, ಅಂಥವರನ್ನು ರಾಜದಂಡನೆಗೆ ಗುರಿಮಾಡತಕ್ಕುದು; ಹಾಗೂ ರಾಜ್ಯದಲ್ಲಿ ಧಾನ್ಯವೇ ಇಲ್ಲದಿರುವ ಪಕ್ಷಕ್ಕೆ, ಸಾಕಾದ ಬೆಲೆ ಬನ್ನಿ ತ್ತು ಅನ್ಯದೇಶದಿಂದ ತರಿಸತಕ್ಕುದು; ಅದಲ್ಲದೆ ಇತಃಪರ ಎಮ್ಮ ರಾಷ್ಟ್ರದಲ್ಲಿ ಬೆಳೆದ ಧಾನ್ಯಗಳಲ್ಲಿ ರಾಷ್ಟ್ರಕ್ಕೆ ಮೂರುವರುಷಗಳಿಗೆ ಸಾಕಾಗುವಷ್ಟನ್ನು ತಪ್ಪದೆ ಶೇಖರಿಸತಕ್ಕುದು; ಮತ್ತು ಈ ಶಾಸನದಂತೆ ಸಮಸ್ತರೂ ಆಚರಿಸತಕ್ಕುದು;ತಪ್ಪಿದರೆ ಕೂರದಂಡವು ತಪ್ಪದು, ಮತ್ತು ಎಲೈ ಸತ್ರಾಧಿಕಾರಿ ಮತ್ತು ಕೋಶಾಧಿಕಾರಿಗಳಿರಾ! ನೀವುಗಳಿದನ್ನು ಲಾ