ಪುಟ:ಧರ್ಮಸಾಮ್ರಾಜ್ಯಂ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಧರ್ಮಸಾಂಮ್ರಾಜ್ಯಮ್ [ಸಂಧಿ wwwMwwwಜwwwಯwwwsvvvvvv yesvv ಮೂರನೆಯ ಸಂಧಿ. THE DISPLAY OF DISCRETION. ವಿವೇಕವಿಸ್ತಾರ - ಇತ್ತಲಾ • ಉನ್ಮಾದಿನಿಯು ಪೂರ್ವದಂತೆಯೇ ನಾರುಮಡಿಯ (ುಟ್ಟು ಧರ್ಮದೇವತೆಯ ವ° ೦ದಿರದ ಬಳಿಯಲ್ಲಿ ಓರ್ವಳೇ ಕುಳಿತು, ಚಿಂತೆಯಿಂದ ನಿಟ್ಟುಸುರುಬಿಡುತ್ತ, ಸ್ವಗತವಾಗಿ:_ಅಯ್ಯೋ! ಮಹಾ ರಾಜನನ್ನು ನೋಡಿದಾರಭ್ಯ ಎನ್ನ ವ್ಯಥೆಯು ಇಮ್ಮಡಿಯಾದುದು; ದಿನಗಳಾದರೂ ಅನೇಕವಾಗಿ ಕಳೆದುಹೋದುವು; ಎನ್ನ ವಲ್ಲಭನಿಗಂತೂ ಎನ್ನ ಮೇಲೆ ಇನ್ನೂ ದಯೆಯುಂಟಾಗಲಿಲ್ಲ ವ; ರಾಜರು ಬಹುಕಾರ್ಯ ವ್ಯಾಸಂಗಿಗಳು; ಆದುದರಿಂದಲೇ ಅವನು ಎನ್ನನ್ನು ಶುದ್ಧಾಂಗವಾಗಿ ಮರೆತಂತೆ ತೋರುವುದು; ಇನ್ನು ಅಭಿಪಾರಗನು ಬಂದುಬಿಟ್ಟರೇನು ಗತಿ ? ಎಂದು ಮಾತನಾಡಿಕೊಳ್ಳುತಿರ್ದ ಸಮಯಕ್ಕೆ ಸರಿಯಾಗಿ, ಕಿರೀಟವನು ಅಭಿಪಾರಗನನ್ನು ಕರೆತಂದು, ಉನ್ಮಾದಿನಿಗೆ ಕಾಣಿಸದಂತೆ ದೂರದಲ್ಲಿಯೇ ನಿಂದು ಅವನನ್ನು ಕುರಿತು:ಅಭಿಪಾರಗನೇ! ಇದೋ ನಿನ್ನ ಪತ್ನಿಯನ್ನು ನೋಡು; ಇದುವರೆಗೂ ಅವಳನ್ನು ಮಾನವಾಗಿ ಕಾಪಾ ಡಿದೆನು; ನೀನಿನ್ನು ಅವಳನ್ನು ಒಡಂಬಡಿಸಿ ನಿನ್ನ ಮನೆಗೆ ಕರೆದುಕೊಂಡುಹೋ ಗಬಹು, ಎನ್ನ ಅಭ್ಯಂತರವೇನೂ ಇಲ್ಲವು' ಎಂದು ಹೇಳಿ ಉನ್ಮಾದಿ ನಿಯನ್ನು ತೋರಿಸಿ ತಾನು ಹೊರಟುಹೋದನು. ಬಳಿಕ ಈ ಮಾತುಗಳ ಶಬ್ದವನ್ನು ಕೇಳಿದ ಉನ್ಮಾದಿನಿಯು ಇತ್ತ ತಿರುಗಿ ಅಭಿಪಾರಗನನ್ನು ನೋಡಿ ಭಯಗೊಂಡು ತನ್ನಲ್ಲಿತಾನೇ:- • ಅಯ್ಯೋ ! ಇನ್ನೇನುಗತಿ? ಇವನೇ ಅಭಿಪಾರಗನಾಗಿರಬೇಕಲ್ಲವೆ ? ಸ್ಮರಿಸಿದಂತೆಯೇ ಬಂದುಬಿಟ್ಟನು; ಈಗೇನು ಮಾಡಲಿ ? ಇನ್ನಾವ ಉಪಾಯವನ್ನೂ ಕಾಣೆನಲ್ಲ !” ಎಂದು ಗಡಗಡನೆ ನಡುಗು ದುಃಖಿಸಲಾರಂಭಿಸಿದುದನ್ನು ನೋಡಿದ ಅಭಿಪಾರಗಳು, ವ್ಯಸನ