ಪುಟ:ಧರ್ಮಸಾಮ್ರಾಜ್ಯಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6೧೨ ಧರ್ಮಸಾಂವಾ ಜ್ಯಮ್ [ಸಂಧಿ VVV v /+ // MV VV \ - \ \ # \ \# + 12 V v \ \ \ N V V + + # + V V W # V & V \ # V/ » vvvvv ಇನ್ನೇನುಗತಿ? ಹಾ! ನಾನು ಕೆಟ್ಟೆನು!” ಎಂದು ತನ್ನಲ್ಲಿ ತಾನೇ ಮಾತ ನಾಡಿಕೊಂಡು ಹಾಗೆಯೇ ಬಿದ್ದು ವಿಕಲ್ಪಗೊಳ್ಳಲು, ಅಭಿಪಾರಗನು ಬೆಚ್ಚಿ ತನ್ನಲ್ಲಿತ ನೇ:- ನಾನಿನ್ನು ಸುಮ್ಮನಿರ್ದರೆ ಪ್ರಮಾದವಾಗು ವುದು; ಆದುದುಂದ ಇವಳನ್ನು ಮಾತೆಯೆಂದೇ ಸಂಭೋಧಿಸುವೆನು.” ಎಂದು ನಿಶ್ಚಯಿಸಿ ಆಕೆಯನ್ನು ಕುರಿತು ಗೌರವದಿಂದ:- ಎಲೌಮಾತೆ! ನೀನಂಜಬೇಡ; ನಿನ್ನ ಪಾತಿವ್ರತ್ಯಕ್ಕೆ ಭಂಗವೇದಿಗೂ ಉಂಟಾಗದು. ಏಳು; ನಡೆದ ವೃತ್ತಾಂತವನ್ನು ಹೇಳುವೆನು. ” ಎಂದು ಕೂಗಿಹೇಳಲು ಉನ್ಮಾದಿನಿಯು ಪರಮವಿಸ್ಮಯಗೊಂಡು ಸ್ವಗತವಾಗಿ ಇದೇನು? ಈತನು ಮಾತೆ ಎಂದು ಸಂಬೋಧಿಸದನು! ಎನ್ನ ಧರ್ಮವು ಇವನ ಮನ ವನ್ನು ಪ್ರವೇಶಿಸಿ ಈರೀತಿ ಮಾತೃಭಾವನೆಯನ್ನುಂಟುಮಾಡಿತೋ?” ಇಲ್ಲ ವೆ, ರಾಜನನ್ನು ನಾನು ಕಾಮಿಸಿರುವುದು ಇವನಿಗೇನಾದರೂ ತಿಳಿದಿರ ಬಹುದೊ? ಒಳ್ಳೆಯದು! ವಿಚಾರಿಸಿ ತಿಳಿದು ಕೊಳ್ಳೆನು.” ಎಂದು ನಿಶ್ಚಯಿಸಿ ಅಭಿಪಾರಗನನ್ನು ಕುರಿತು ವಿನಯದಿಂದ ಸ್ವಾಮೀ! ಇದೇನು ಈ ರೀತಿ ಸಂಬೋಧಿಸಿದಿರಿ? ” ಎಂದ ಕೇಳಲು, ಅಭಿಪಾರಗನು ವಿನಯ ದಿಂದ:-(ಎಲ್ ಸಾಧಿಯೆ ! ನಿನಗೂ ಮಹಾರಾಜನಿಗೂ ಇರುವ ಪೂರ್ವಸಂಬಂಧವನ್ನೂ ಈಚೆಗೆ ನಡೆದ ವರ್ತಮಾನಗಳನ್ನೂ ಚೆನ್ನಾ ಗಿಯೂ ತಿಳಿದೆನು; ಮತ್ತು ನಿನ್ನನ್ನು ಪ್ರತಿಗ್ರಹಿಸೆಂದು ನಾನೇ ಅನೇಕವಿಧ ವಾಗಿ ಮಹಾರಾಜನನ್ನು ಪ್ರಾರ್ಥಿಸಿದೆನು; ಆದರೂ ಅವನು ಸಂಮತಿಸ ಲಿಲ್ಲವು; ನೀನು ಪೂರ್ವದಿಂದಲೂ ಮಹಾರಾಜನನ್ನೇ ಪತಿಯನ್ನಾಗಿ ವರಿಸಿರ್ದು, ಈಗಲೂ ಅದೇ ಹಂಬಲಿನಲ್ಲಿರುವುದರಿಂದ, ನಾನು ನಿನ್ನನ್ನು ಮಾತೆಯೆಂದು ಭಾವಿಸಿ ಈರೀತಿ ಸಂಬೋಧಿಸಿದೆನು; ನಿನಗೆ ಇನ್ನೂ ಮಹಾ ರಾಜನಲ್ಲಿಯೇ ಅಭಿಲಾಷೆಯು ಇರುವ ಪಕ್ಷಕ್ಕೆ, ನೀನೇ ಹೋಗಿ ಅವನನ್ನು ಒಡಂಬಡಿಸಿ, ಅವನೊಡನೆ ಸಂಸಾರಸುಖವನ್ನ ನುಭವಿಸು; ನಾನಿದೋ ಹೊ ರಡುವೆನು.”ಎಂದುಹೇಳಿ ನಮಸ್ಕರಿಸಲು ಉನ್ಮಾದಿನಿಯು ಸಂತುಷ್ಟಳಾಗಿ ಸ್ವಾಮೀ ! ನೀವು ಎನ್ನ ವ್ರತಕ್ಕೆ ಅವಕಾಶವನ್ನಿತ್ತು ಎನ್ನ ಪಾತಿವ್ರತ್ಯ