ಪುಟ:ಧರ್ಮಸಾಮ್ರಾಜ್ಯಂ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೧೩ vvvvvvvvvvvvvvvvvvvv رادیو بیبیسی Vyyyyyy ವನ್ನು ಕಾಪಾಡಿದಿರಾದುದರಿಂದ ನೀವೆನಗೆ ತಂದೆಯೇ ಅಹುದು, ನಿಮ್ಮ ಧರ್ಮಬುದ್ದಿ ಗೂ ಕರುಣೆಗೂ ವಂದನ. ” ಎಂದು ನಮಸ್ಕರಿಸಲು 44 ಅಭಿಪಾರಗನು:-ಸುಮಂಗಲಿಯಾಗು, ” ಎಂದು ಹೇಳಿ ಅಲ್ಲಿಂದ ಹೊರಟುಹೋದನು. ಬಳಿಕ ಉನ್ಮಾದಿನಿಯು ರಾಜನು ಧಿಕ್ಕರಿಸಿದನೆಂದು ಹೇಳಿದು ದನ್ನು ಸ್ಮರಿಸಿಕೊಂಡು ಶೋಕಗೊಂಡವಳಾಗಿ, ತನ್ನಲ್ಲಿತಾನೇ:-(ಹಾ ವಿಧಿ ಯೇ! ಎನ್ನ ಗತಿಯು ಇಂತಾಯಿತೇ? ಒಳ್ಳೆಯದು ! ಇನ್ನೊಂದು ವೇಳೆ ಮಹಾರಾಜನಲ್ಲಿಗೆ ನಾನೇ ಹೋಗಿ, ಎನ್ನ ಅದೃಷ್ಟದ ಪರಿಣಾಮವನ್ನು ಪರೀಕ್ಷಿಸುವೆನು; ಅಲ್ಲಿಗೂ ಎನ್ನ ಮನೋರಥವು ಸಫಲವಾಗದೇಹೋದರೆ ದುಃಖಮಯವಾದೀಜೀವಿತವನ್ನು ಮೃತ್ಯುವಿಗೆ ವಶಮಾಡಿ ಪರಲೋಕ ದಲ್ಲಿಯಾದರೂ ಎನ್ನ ಪತಿಯನ್ನು ಸೇರುವೆನು. ” ಎಂದು ಮಾತನಾಡಿ ಕೊಂಡು ಬಳಿಕ, ಮಹಾರಾಜನನ್ನು ಕುರಿತು ಆತುರವಾಗಿಹೊರಟು ಹೋದಳು. ನಲ್ಕನೆಯ ಸಂಧಿ. NO LUST CAN PIERCE A SOUND HEART. ಇತ್ತಲಾ ದೇವಸೇನಮಹಾರಾಜನು ತನ್ನ ಕೇಳಿಕೋದ್ಯಾನಕ್ಕೆ ಓರ್ವನೇ ಪ್ರವೇಶಿಸಿ ಪರಮಹರ್ಷದಿಂದ ತನ್ನಲ್ಲಿತಾನೆ ಈರೀತಿ ಮತ ನಾಡಿಕೊಂಡನು:- ನಾನೀ ಉದ್ಯಾನಕ್ಕೆ ಬಂದು ಬಹುದಿನಗಳಾ ದುವು. ಇದುವರೆಗೂ ಎನ್ನ ರಾಜ್ಯದಲ್ಲಿ ಪ್ರಜೋಪದ್ರವಗಳುಂಟಾಗಿರ್ದು ದರಿಂದ, ಅದನ್ನು ಶಮನಮಾಡುವ ಕಾಠ್ಯದಲ್ಲಿ ನಿರತನಾಗಿ, ಇದನ್ನು ಶುದ್ಧಾಂಗವಾಗಿ ಮರೆತುಬಿಟ್ಟಿರ್ದನು; ಒಳ್ಳೆಯದು ಎಂದಕ್ಕೆ ಹೋಗಿ ಇದರ ಇರುವಿಕೆಯನ್ನು ಪರೀಕ್ಷಿಸಿ ನೋಡುವೆನು.” ಎಂದು ಸ್ವಲ್ಪ ಮುಂದಕ್ಕೆ ಬಂದು, ಆಗತಾನೇ ಪ್ರಾಪ್ತವಾಗಿರ್ದ ಮಾಧವಪ್ರಭಾವ