ಪುಟ:ಧರ್ಮಸಾಮ್ರಾಜ್ಯಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಧರ್ಮಸಾಮ್ರಾಜ್ಯಮ್ [ಸಂಧಿ .wwwvvvvvvv svvvv••••• ವನ್ನು ನೋಡಿ, ಪರಮಹರ್ಷಿತನಾಗಿ:« ಧರ್ಮಹನನ ದೋಷದಿಂದ ಎನ್ನ ರಾಜ್ಯೋದ್ಯಾನದಲ್ಲಿ ಪ್ರಜಾವೃಕ್ಷಗಳಿಗೆ ದಾರಿದ್ರಾತಪವುಂಟಾಗಿ, ಗುಣಮಾರ್ದವವೆಲ್ಲ ಶೋಷಿಸಿಹೋಗಿರ್ದುದು, ಆದರೀಗ ಎಮ್ಮ ಭಕ್ತಿ ಗೌರವಗಳಿಂದೊಡಗೂಡಿದ ಆರಾಧನೆಯಿಂದ ಸಂತುಷ್ಟವಾದ ಆ ಸದ್ದ ರ್ಮವು ತನ್ನ ಚಮಪತಿಯಾದ ರಾಮನನ್ನು (ಮುಂಗಾರುಮಳೆಯನ್ನು) ಕುರಿತು ಸರಿಯಾದ ಋುತುಕಾಲವನ್ನರಿತು ಭೂಮಿಯನ್ನು ಪ್ರವೇಶಿಸು ವಂತಜ್ಞಾಪಿಸಿದುದರಿಂದ ಪ್ರಜಾವೃಕ್ಷಗಳೆಲ್ಲವೂ ಜೀವನ (ಅನ್ನಾಧ್ಯಾ ಹಾರ ಮತ್ತು ನೀರು) ಬಾಹುಳ್ಯದಿಂದ ಸಂತುಷ್ಟಿಯನ್ನು ಪಡೆದು, ಎಂದಿನಂತೆಯೇ ಸಂಪೂರ್ಣ ಗುಣಪರಿಪಾಕವನ್ನು ಹೊಂದಿ, ಸ್ವಕರ್ಮ ಗಳೊಳಾಸಕ್ತಿಯನ್ನು ಪಡೆಯಲಾಗಿ, ಎಲ್ಲೆಲ್ಲಿ ನೋಡಿದರೂ ಫಲಲಾಭ ಗಳುಂಟಾಗುತ್ತಿಹವು; ಅದರಂತೆಯೇ ಈಗಲೀಉದ್ಯಾನವು ನೇತ್ರಕ್ಕೆ ಹರ್ಷವನ್ನೂ ಮನಕ್ಕೆ ಆನಂದವನ್ನೂ ಉಂಟುಮಾಡುತ್ತಿಹುದು, ಅದರಂ ತೆಯೇ ಅಲ್ಲಿ ಕಾಣುವ ಉದ್ಯಾನಗಳನ್ನೂ ನೋಡುವೆನು. ” ಎಂದು ನಿಂದುನೋಡಿ ! ಪರಮಹರ್ಷ ದಿಂದ [ತಾ:-(೫೨ -೫೮) ಆ8! (ನರ್ತಕಿಯತೆಸೆವ) ವಸಂತ ಲಕ್ಷ್ಮಿ ಯು,ಚಿತ್ರವಿಚಿತ್ರವಾದ ವಸ್ತ್ರಗಳನ್ನುಟ್ಟು ರಂಜಿಸುವಳೋ ಎನ್ನುವಂತೆಸೆವ ಅನೇಕವಿಧವಾದ ಪೂಗೊಂಚಲುಗಳಿಂದಲೂ, (ನಟವಿಟರಂತೆ)ಶಬ್ದ ಮಾಧು ರ್ಯವನ್ನುಂಟುಮಾಡುವ ಕೋಕಿಲೆಗಳಿಂದಲೂ ಮತ್ತು ಗಂಡುನವಿಲ್ಲ ಳಿಂ ದಲೂ, ತಾವರೆಮೊದಲಾದ ಜಲಪುಷ್ಪಗಳಿಂದ ನಿಬಿಡೀಕೃತವಾದ ಜಲಾ ಶಯಗಳಿಂದಲೂ, ರಂಗಪ್ರದೇಶದಲ್ಲಿ ಹಾಸಿರುವ ಪಜ್ಜೆಗಂಬಳಿಗಳಂತೆಸೆವ ಈಗತಾನೇ ಚಿಗುರಿರುವ ಗರಿಕೀ ಹುಲ್ಲುಗಳ ತಾಣದಿಂದಲೂ, ಗಾಯಕ ವಿಚಿತ್ರಪುಷ್ಪಸ್ತಬಕೋಷ್ಟ್ರಲಾನಿ ಕೃತಚದಾನೀವ ವಸಂತಲಕ್ಷಾ। ವಾಚಾಲಪುಂಸ್ಕೊ ಕಿಲಬರ್ಹಿಣಾನಿ ಸರೋರುಹಾಕೀರ್ಣಜಲಾಶಯಾನಿ ||೬೩|| ಸಮುದ್ಭವಮಲಶಾದ್ವಲಾನಿ ವನಾನಿ ಮತ್ತು ಮರಾರುತಾನಿ ! ಆಕ್ರೀಡಭೂತಾನಿ ಮನೋಭವಸ್ಯ ದ್ರಷ್ಟುಂ ಭವಶ್ಯವ ಮನಃಪ್ರಕರ್ಷಃ |೬೪||