ಪುಟ:ಧರ್ಮಸಾಮ್ರಾಜ್ಯಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ನಾಲ್ಕನೆಯ ಅಂಗ ೧೧೫ 114 / 1 # + ' + + /> | • v1, 1 yyts, \ \ \\\ \# +\\\r\ \v ರಂತೆಸೆವ ಮದಿಸಿದ ಭ್ರಮರಗಳ ಝೇಂಕಾರದಿಂದ ಕೂಡಿ, ಆ ಮನ್ನ ಥನ ಕ್ರೀಡಾಪ್ರದೇಶಗಳೋ ಎನ್ನುವಂತೆ ಈ ವನಪ್ರದೇಶಗಳು ನೋಟಕ್ಕೂ ಮನಸ್ಸಿಗೂ ಆನಂದವನ್ನು ಂಟುಮಾಡುವುವು! ".] ಎಂದು ವರ್ಣಿಸಿದ ಬಳಿಕ, ಅಲ್ಲಿರ್ದೊಂದು ಸರೋವರದ ತಟದಲ್ಲಿ ಅನುಗೊಳಿಸಿರ್ದ ಸ್ಪಟಿಕಾಸನದಲ್ಲಿ ಕುಳಿತು ಕೊಂಡನು. ಆಕಾಲಕ್ಕೆ ಸರಿಯಾಗಿ ಉನ್ಮಾದಿನಿಯು ತನ್ನ ಮುಖದಿಂದ ಪದ್ಯ ವನ್ನೂ , ನೇತ್ರಗಳಿಂದ ಕೆನ್ನೆ ದಿಲನ್ನೂ, ತಾರಕೆಗಳಿಂದ ಭ್ರಮರೀಯುಗ ವನ್ನೂ, ಭುಜಯಗ್ನದಿಂದ ಮೃಣಾಳವನ್ನೂ, ಉರೋಜಗಳಿಂದ ಕೋಕ ಯುಗವನ್ನೂ, ಅಲಕದಿಂದ ಸೋಪಾನಮಂಡ್ತಿಯನ್ನೂ, ಸುಖ್ಯಿಂದ ಸೌರ ಭವನ್ನೂ, ಆನಂದಾಶ್ರುವಿನಿಂದ ಮಕರಂದವನ್ನೂ, ಇವುಗಳಿಂದೊಡಗೂ ಡಿದ ತನ್ನ ದಿವ್ಯ ವಿಗ್ರಹದಿಂದ ಸರೋವರವನ್ನೂ ,ಹಾಸ್ಯಗೊಳಿಸುತ್ತ-ರಾಜನ ಅಕ್ಷಿಗಳಿಗೆ ಚಲತ್ಸರೋವರ ಭ್ರಾನ್ತಿಯನ್ನುಂಟುಮಾಡಿ-ಮುಂದುವರಿದು ಬಂದು ಆಸರೋವರದ ತೀರದಲ್ಲಿ ಪ್ರತಿಸರೋವರವೋ ಎಂಬಂತೆ ನಿಂದು, ರಾಜನ ನೇತ್ರಭ್ರಮರಕ್ಕೆ ಎಭ್ರಮವನ್ನೂ ಮನಸ್ಸಿಗೆ ಸಂಭ್ರಮವನ್ನೂ ಉಂಟುಮಾಡಿದಳು. ಇವಳನ್ನೇಕ್ಟಿಸಿದ ದೇವಸೇನನು ಪರಮವಿಸ್ಮಿತನಾಗಿತನ್ನಲ್ಲಿತಾನೇ:- << ಇದಾರೀ ಸುಂದರಿಯು? ಈಕೆಯನ್ನೂ ಇವಳುಟ್ಟಿರುವ ನಾರುಮಡಿ ಯನ್ನೂ ನೋಡಿದರೆ, ನಾನು ನೋಡಿದ ಆ ಉನ್ಮಾದಯನಿಯಂತಿಯೇ ತೋರುವಳು ! ಆದರೂ ವಿಚಾರಿಸುವುದು ಉತ್ತಮ. ' ಎಂದು ಮಾತ ನಾಡಿಕೊಂಡ ಬಳಿಕ ಉನ್ಮಾದಿನಿಯನ್ನು ಕುರಿತು ವಿನಯಗಾಂಭೀರ್ಯ ದಿಂದ:-ಎಲೌ ಮಂಗಳಾಂಗಿ! ನೀನಾರು?” ಎಂದು ಕೇಳಲು ಉನ್ಮಾದ ಯನ್ತಿಯು ಭಕ್ತಿಗೌರವಗಳಿಂದ ನಮಸ್ಕರಿಸಿ ಪ್ರಾಣೇಶನೆ ! ನಿನ್ನ ಮನೋವಲ್ಲಭೆಯಾದ ಉನ್ಮಾದಿನಿ ಎಂಬುವದನ್ನ ರಿಯೆಯಾ?” ಎಂದು ಹೇಳಲು ದೇವಸೇನನು ಬೆಚ್ಚಿದವನಾಗಿ ಖಿನ್ನತೆಯೊಡನೆ ತನ್ನಲ್ಲಿತಾನೇ