ಪುಟ:ಧರ್ಮಸಾಮ್ರಾಜ್ಯಂ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೨೫ • • • . ವ್ಯಸನವನ್ನೂ ಜುಗುಪೆಯನ್ನೂ ಹೊಂದಿ:-(ಹಾ! ಇದೆಲ್ಲಿಯ ಪ್ರಾರಬ್ಬ ಬಾಧೆಯು! ಜನ್ಮಾಂತರವಾಸನೆಯಂತೆ ಎಲ್ಲೆಲ್ಲಿ ಹೋದರೂ ಎನ್ನನೆ ಹಿಂಬಾಲಿಸುವಳು ! ಸಂಧ್ಯಾ ಕಾಲವಾಗಿರುವುದರಿಂದ ದೇವವಂದನಾದಿ ನಿತ್ಯಕರ್ಮಗಳನ್ನಾ ಚರಿಸಬೇಕಾಗಿಹುದು, ಇವಳಲ್ಲಿ ವಾದಮಾಡಿದರೆ ಕಾ ಲವು ಮೀರಿಹೋಗುವದು. ಇನ್ನು ಮನೆಗೆ ಹೋಗುವೆನು ಎಂದು ಮಾತನಾಡಿಕೊಂಡು ತನ್ನ ಅರಮನೆಗೆ ತೆರಳಲುದ್ಯುಕ್ತನಾಗಲು, ಉನ್ಮಾ ದಿನಿಯು ಅವನ ದಾರಿಯನ್ನ ಡಗಟ್ಟಿ ದೈನ್ಯದಿಂದ, [೮೧ತಾ:- ಮಹಾರಾಜನೆ ! ನನ್ನ ನಲ್ಲ ಭನೆ ! (ಎನ್ನ ನಗಲಿ) ನೀನೋರ್ವನೇ ಅರಮನೆಗೆ ತೆರಳುವುದು ಧರ್ಮವಲ್ಲವು; ನೀನೆಲ್ಲಿಗೆ ಹೋಗು ವೆಯೋ ಅಲ್ಲಿಗೆ ನಾನೂ ಬರುವೆನು. 17, ಎಂದು ಹೇಳಿ ರೋದಿಸುತ್ತ ಅವನ ಸೆರಗನ್ನು ಹಿಡಿದುಕೊಳ್ಳಲು, ದೇವಸೇನನು ಕೋಪಾವಿಷ್ಟನಾಗಿ:« ಛಿ ! ಭಟ್ಟೆ ಹೆಂಗುಸೆ ! ಲಜ್ಜೆ ಯಿಲ್ಲದೆ ಪರಪುರುಷನನ್ನು ಮುಟ್ಟುವೆಯಾ ? ತೆಗೆತೆಗೆ !!” ಎಂದು ಗಜರಿ ಅಲ್ಲಿಂದ ಮುಂದಕ್ಕೆ ಹೊರಟುಹೋದನು - ಇತ್ತಲಾ ಉನ್ಮಾದಿನಿಯು, ಈ ಧಿಗ್ಗಜನಶದಿಂದ ಥಟ್ಟನೆ ಎದೆ ದೊಡದು ನೆಲದಲ್ಲಿ ಬೀಳುತ್ತ:-( ಪತಿಯೇ ! ಪತಿಯೇ !! ” ಎಂದು ಹಂಬಲಿಸುತ್ತ ಬಿದ್ದು ಹಾಗೆಯೇ ಮೃತಳಾಗಿಹೋದಳು. ಬಳಿಕ ದೇವಸೇನನು ಇವಳು ಬಿದ್ದ ಶಬ್ದವನ್ನು ಕೇಳಿ ಹಿಂದು ರುಗಿಬಂದು ಅವಳನ್ನು ನೋಡಿ ಆಶ್ಚರ್ಯದಿಂದ:-- ಇದೇನೀಪ್ರಮಾ ದವು ? ಪ್ರಾಯೇಣ ಸ್ತ್ರೀಯರು ಮರ್ದಸ್ವಭಾವವುಳ್ಳವರೆಂಬುದು ನಿಜವೇ ಅಹುದು; ತಮ್ಮ ಸಂಕಲ್ಪಸಿದ್ಧಿ ಗಾಗಿ ಸರ್ವೋಪಾಯಗಳನ್ನಾ ದರೂ ಪ್ರಯೋಗಿಸುವರು; ಕೆಲವುವೇಳೆ ಆಶಾಭಂಗದಿಂದ ಪ್ರಾಣಗಳನ್ನಾ ದರೂ ತ್ಯಜೆಸಿಬಿಡುವರು; ಬಳ್ಳೆಯದು ! ಇವಳೇಮೂರ್ಛಯು ಎನ್ನನ್ನು ಶೆ 1 ನೈಷ ಧರ್ಮೋ ಮಹಾರಾಜ ಯದ್ಯಾಯಾ ಗೃಹಮೇಕಕಃ | ತೇನಾಹಮಪಿ ಯಾಸ್ಯಾಮಿ ಯೇನ ವಲ್ಲಭ ಯಾಸ್ಯಸಿ |೮೧||