ಪುಟ:ಧರ್ಮಸಾಮ್ರಾಜ್ಯಂ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಧರ್ಮಸಾಮ್ರಾಜ್ಯಮ್ [ಸಂಧಿ 1212 * * • • • •, 14, 1_11 • • • • • • txt 1 ಗೆ 11 *rit 217 ಮಾಲಿನ್ಯವನ್ನು ಹೊಂದಿದ ಎನ್ನೀ ಜೀವಮಾನದಿಂದೇನುಫಲ ? (ಇದು ವರೆಗೂ ನಾನು ಆಚರಿಸಿದ) ಧರ್ಮಸಂಮತವಾದ ರಾಜ್ಯ ಪರಿಪಾಲನಾ ಕಾರ್ಯದ ಪ್ರಭಾವದಿಂದ (ಮುಂದಕ್ಕೆ) ಸಂಬೋಧಿಯನ್ನು (ಸರ್ವೆಶ್ವ ರತ್ವವನ್ನು ಪಡೆಯುವೆನು.”] ಎಂದು ಹೇಳಿ ಉನ್ಮಾದಯಂತಿಯನ್ನೇ ಚೆನ್ನಾಗಿ ಈಕ್ಷಿಸಿದ ಬಳಿಕ, ಅಂತರಿಕ್ಷವನ್ನು ನೋಡಿ ಕೈಗಳನ್ನು ಮುಗಿದುಕೊಂಡು [೮೬, ತಾ:- “ಮನುಷ್ಯನನ್ನು ರಕ್ಷಿ ಸತಕ್ಕುದು ಅವನ ಧನವೇ ಆಗಲಿ, ಅಥವಾ ಅವನ (ದೇಹಸಂಬಂಧವಾದ ಅಥವಾ ಚತುರಂಗ ಸಂ೬೦ಧವಾದ) ಒಲವೇ ಆಗಲಿ, ಅಲ್ಲವು; ಮಹತ್ತರವಾದ ಸುಖಕ್ಕೆ (ಮುಕ್ತಿಗೆ) ಕಾರಣಭೂತವಾದುದು, ಧರ್ಮವೇ ಹೊರತು, ಸ್ತ್ರೀಯ ಕಾಮವಿಲಾಸವೆಂದಿಗೂ ಅಲ್ಲವು; ಧರ್ಮಾತ್ಮನಾದವನಿಗೆ ಮೃತ್ಯುವೂ ಕೂಡ ಸುಖವನ್ನೇ ಉಂಟು ಮಾಡುವುದು, ಏಕೆಂದರೆ, ಧರ್ಮದಲ್ಲಿಯೇ ನಿರತನಾದವನಿಗೆ (ಇಹದಲ್ಲಿಯೇ ಆಗಲಿ ಪರದಲ್ಲಿಯೇ ಆಗಲಿ) ದುರ್ಗತಿ ಭಯವೆಂಬುದೆಂದಿಗೂ ಇರದು.”] ಎಂದು ಧರ್ಮವನ್ನು ಸ್ತುತಿಸಿದ ಬಳಿಕ ತನ್ನ ಹಸ್ತದಲ್ಲಿರ್ದ ಈಟಿ ಯಿಂದ ವಕ್ಷಸ್ಥಲವನ್ನು ತಿವಿದುಕೊಂಡು ಕೆಳಗೆ ಬಿದ್ದು ಮೃತನಾದನು. ಇತ್ತಲಾ ಮಹಾರಾಜನು ಸಂಧ್ಯಾ ಕಾಲವು ಮಾರಿದರೂ ಎಂದಿ ನಂತೆ ದೇವತಾಧ್ಯಾನಾದಿ ಸಂಧ್ಯಾ ಕರ್ಮವನ್ನಾಚರಿಸಲು ಇನ್ನೂ ಬಾರದೆ ಇರ್ದುದರಿಂದ ಅಭಿಪಾರಗನು ಭಯಗೊಂಡವನಾಗಿ, ಮಹಾರಾಜನನ್ನು ಅರಸಿಕೊಂಡು ಉದ್ಯಾನಕ್ಕೆ ಓರ್ವನೇ ಗೋಪ್ಯವಾಗಿ ಬಂದು, ತನ್ನಲ್ಲಿ ತಾನೆ._“ಇದೇನು ? ಎಲ್ಲಿನೋಡಿದರೂ ಶಬ್ದವೇ ಇಲ್ಲ ; ನಾನೀಗ ಧರ್ಮಶ್ಚ ರಕ್ಷತಿ ನರಂ ನ ಧನ ಬಲು ನಾ | ಧರ್ಮಃ ಸುಖಾಯ ಮಹ ತೇ ನ ವಧೂವಿಲಾಸಃ | ಧರ್ಮಾತ್ಮನ ಮುದಮೆವ ಕರೋತಿ ಮೃತ್ಯು | ರ್ನಹ್ಮಸ್ತಿ ದುರ್ಗತಿಭೆಯ ಸರತಸ್ಸ ಧರ್ಮೆ |೮೬||