ಪುಟ:ಧರ್ಮಸಾಮ್ರಾಜ್ಯಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬] | ನಾಲ್ಕನೆಯ ಅಂಗ ೧೩೧ ಎಂದು ಸ್ತುತಿಸಿ, ಕೈಲಿರ್ದ ಪ್ರಷ್ಟಗಳಿಂದಾಕೆಯನ್ನು ಪೂಜಿಸಿದ ಬಳಿಕ, ಆಕೆಗೆ ಪ್ರದಕ್ಷಿಣ೦ಗೈದು ನಮಸ್ಕರಿಸಿದವನಾಗಿ, ಅನಂತರ ಇತ್ತ ತಿರುಗಿ ಆತುರದಿಂದ: ನಾನಿನ್ನು ಮಹಾರಾಜನ ವಿಷಯವನ್ನು ವಿಚಾರಿಸುವೆನು. ” ಎಂದು ಓಡಿಬಂದು, ಮಹಾರಾಜನ ವಕ್ಷಸ್ಥಲದಲ್ಲಿ ಕೀಲಿಸಿರ್ದ ಈಟಿಯನ್ನು ನೋಡಿ ಭೀತಿಯಿಂದ:- ಅಯ್ಯೋ ! ಇದೇಸೀ ಘೋರ ಕೃತ್ಯವು ? ಮಹಾರಾಒನು ಆತ್ಮಹತ್ಯೆ ಯನ್ನು ಮಾಡಿಕೊಂಡಂ ತಿರುವದು. ” ಎಂದು ಅವನ ದೇಹವನ್ನೆಲ್ಲ ಪರೀಕ್ಷಿಸಿ ಶೋಕದಿಂದ:-II ಹಾ ! ಮಹಾರಾಜನೂ ಗತಾಸುವಾದನು. ” ಎಂದು ನೆಲದಲ್ಲಿ ಬಿದ್ದು ಮೂರ್ಛಿತನಾಗಿ, ಒಳಿಕ ಸ್ವಲ್ಪ ಚೇತರಿಸಿಕೊಂಡದ್ದು ಮನೋವಿಕಲ್ಪ ದಿಂದ: ಮಹಾರಾಓನೇ ! ದೇವಸೇನನೇ ! ಎನ್ನೊಡೆಯನೇ ! ಆತ್ಯ ಮಿತ್ರನೇ! ಎನ್ನ ಒಲಧುವೇ ! ಎನ್ನ ಜೀವನನೇ ! ಎನ್ನ ದೈವವೇ! ಇದೇಕೀ ರೀತಿ ಮೌನವಾಗಿರುವೆ? ನಾನೇನು ನಿನ್ನಲ್ಲಿ ಅಪರಾಧವನ್ನು ಮಾಡಿದೆನು? ಉನ್ಮಾದಯನ್ತಿಯ ವಿಷಯವನ್ನು ಕುರಿತು ಇನ್ನು ಪ್ರಸ್ತಾಪಿಸೆನು; ಏಳು; ಮಾತನಾಡು; ನಾನಿನ್ನಾ ರನ್ನು ದೇವ, ಜೀಯ, ಸ್ವಾಮಿ ಎಂದು ಸಂಬೋ ಧಿಸಲಿ ? ಎನ್ನ ಸಾಹಸಪರಾಕ್ರಮಗಳನ್ನು ನೋಡಿ ಸಂತೋಷಿಸುವ ರಿನ್ನಾರು ? ಕಷ್ಟ ಕಾಲದಲ್ಲಿ ಎನ್ನನ್ನು ರಕ್ಷಿಸರಿನ್ನಾರು ? ನಿನ್ನ ಮನ್ನಣೆ ಗಳನ್ನೆಂತು ಮರೆಯಲಿ ? ನಾನೀಗ ನಿರ್ಗತಿಕನಾದೆನು; ಪ್ರಜೆಗಳೆಲ್ಲರೂ ಅನಾಥರಾದರು; ನಾನೂ ಕೆಟ್ಟೆನು. ಎಂದು ವಿವಿಧವಾಗಿ ಪ್ರಲಾವಿ ಸುತಿರ್ದು, ಬಳಿಕ ಗದ್ದದ ಕಂತನಾಗಿ, ದೇವತೆಗಳನ್ನು ಕುರಿತು ಸಂಬೋ ಧಿಸಿ: ಎಲೈ ದೇವತೆಗಳಿರಾ ! ಎನ್ನ ಸಂಕಟವನ್ನು ಕೇಳಿ ಸಂತೈಸ ವರಿನ್ನಾ ರೂ ಇಲ್ಲಿಲ್ಲ; ಎನ್ನ ಮಾತುಗಳನ್ನು ದಯೆಯಿಂದ ಲಾಲಿಸಿರಿ [ತಾ:- (೮೮) ಈತನು ಎನ್ನ ರಾಜನು : ಎನ್ನ ಪ್ರಾಣಕ್ಕೆ ಸಮನಾದ ಮಿತ್ರನು; ಎನಗೆ ಸರ್ವಸುಖವನ್ನೂ ಇತ್ಯವನು; ಈಗಲಾ ರಾಜಾ ಮಮ ಪ್ರಾಇಸಮಸ್ಬಾ ಚ ಸುಖಸ್ಸ ದಾತಾ ಗತಜೀವಿತಶ್ : ನೈವೋತ್ಸ ಹೇ ಯೇನ ಏಾತುಮೇನಂ ಸ್ವಜೀವಿತಾನುರಕ್ಷತಾರ್ಥವಮ್ |i೮೮ ! --- .. ... .