ಪುಟ:ಧರ್ಮಸಾಮ್ರಾಜ್ಯಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ? ಧರ್ಮಸಾಮಾ ವಮ್ [ಸಂಧಿ ಭವಿಸುತಿರ್ದನು, ಆಕಾಲಕ್ಕೆ ಸರಿಯಾಗಿ ಯಮ ಮನ್ಮಥ ಯ ಕೇಶ್ವರ ಮುಂತಾದವರು ಪ್ರವೇಶಿಸಿ, ತಂತಮ್ಮ ಸನಗಳಲ್ಲಿ ಕುಳಿತಕೊಂಡರು. ಬಳಿಕ ದೇವೇನ್ದ್ರನು ಯಮನನ್ನು ಕುರಿತು ತವಕದಿಂದ:-'ಎಲೈ ಮೃತ್ಯುವೇ ! ಭೂಲೋಕದಲ್ಲಿ ನೀವು ಮಾಡಿದ ಸಾಹಸಗಳೇನು? ?” ಎಂದು ಕೇಳಲು ಯಮನು ಅತಿ ಸಂಭ್ರಮದಿಂದ:._ ಸಹಸ್ರಾಕ್ಷನೇ ! ನಿನ್ನಾ ಜ್ಞೆಯಂತೆ ನಾವುಗಳು ಭೂಲೋಕದ ಪ್ರತಿರಾಷ್ಟ್ರವನ್ನೂ ಪ್ರವೇಶಿಸಿ ಅಲ್ಲಿನ ರಾಜ ರುಗಳನ್ನೂ ಮತ್ತು ಪ್ರಜೆಗಳನ್ನೂ ಸಹ ಪಾಪಕಾರ್ಯಾಸಕ್ತರನ್ನಾಗಿ ಮಾಡಿ, ಇವನು ಪ್ರಜೆ, ಇವನು ರಾಜ, ಎಂಬ ತಾರತಮ್ಯಗಳನ್ನೆಣಿಸದೆ, ಅವರುಗಳೆಲ್ಲರನ್ನೂ ಆಗಲೇ ನರಕಕ್ಕೆ ಕಳುಹಿರುವೆನು. ಅಂತೂ ನಿನ್ನೊ ಡೆ ತನಕ್ಕೆ ಕುಂದುಂಟಾಗದಂತೆ ಮಾಡಿರುವೆನು. ಅಪ್ಪಣೆಯನ್ನಿರೆ ಈಗಲೇ ಆ ಪಾಪಿಗಳನ್ನು ವಿಚಿತ್ರತರವಾಗಿ ಹಿಂಸಿಸುವೆನು. ” ಎಂದು ಹೇಳಿ, ಅದಕ್ಕನುಸಾರವಾದ ಅಪ್ಪಣೆಯನ್ನು ತೆಗೆದುಕೊಂಡು ಹೊರಟು ಹೋದನು. ಬಳಿಕ ಅಲ್ಲಿಗೆ ಚಿತ್ರಗುಪ್ತರು ವೇಗವಾಗಿ ಪ್ರವೇಶಿಸಿ ದೇವೆನ್ ನಿಗೆ ಕೈಮುಗಿದು ನಿಲ್ಲಲು, ದೇವೇನ ನು ಅವರುಗಳನ್ನು ಕುರಿತು ಕುತೂಹಲದಿಂದ: - ನಿಮ್ಮ ಇಂಗಿತದಿಂದ ಏನೋ ಆಶ್ಚರ್ಯವು ಕಂಡು ಬರುವುದು ! ಅದೇನು ? ” ಎಂದು ಕೇಳಲು ಚಿತ್ರನು ಸರಮವಿಸ್ಮಯ ವನ್ನು ತೋರುತ್ತ: ದೇವೇಶನಸೀ ! ಆಶ್ವರ್ಯದಂತಹದನ್ನು ನೀನು ಹಿಂದೆ ಕೇಳಿ ಯ ಇಲ್ಲ ! ಇನ್ನು ಮುಂದಕ್ಕೆ ಕೇಳುವುದೂ ಇಲ್ಲ ! ಅಂತ ಸಿನ್ನಲ್ಲಿ ವಿಜ್ಞಾವಿಸಲು ಎಮ್ಮ ಮನಸ್ಸುಗಳು ಸ್ವಲ್ಪ ಹಿಂದೆಗೆ ಯುವುವು.” ಎಂದು ಹೇಳಲು ಇನ್ಮನು ಕುತೂಹಲದಿಂದ:-_44 ಭಯ ಪಡಬೇಡ; ಅದೇನು ಹೇಳು.” ಎಂದು ಕೇಳಲು ಚಿತ್ರನು:-- ನೀನು ದೇವ ರಾಜ್ಯಾಧಿಪತ್ಯವನ್ನು ಭೂಲೋಕದ ರಾಜನೊಬ್ಬಸಿಗೆ ಒಪ್ಪಿಸಲೇ ಬೇಕಾ ಗಿರುವುದು, ಇದೇ ಅವನ .ಧರ್ಮಜ್ಞತೆಯನ್ನೂ ಗುಣಾತಿಶಯಗಳನ್ನೂ ಇಲ್ಲಿ ಬರೆದು ಕೊಂಡು ತಂದಿರುವೆವು, ” ಎಂದು ಹೇಳಿ ಆ ಪ್ರಸ್ತಕವನ್ನು