ಪುಟ:ಧರ್ಮಸಾಮ್ರಾಜ್ಯಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩] ಐದನೆಯ ಅಂಗ ೧೪೩ ಗಳನ್ನು ಮಾಡಿಕೊಳ್ಳ೦ತಿ ಮಾಡಬೇಕೆಂದೆಂದಿಗೂ ಇರಲಿಲ್ಲ. ” ಎಂದು ಹೇಳುತ್ತಿರುವದರ ಮಧ್ಯದಲ್ಲಿ ಶುಕ್ರನು ಭಗ್ಗನೆ ತನ್ನಾ ಸನದಿಂದ ಮೇಲ ಕೆದ್ದು, ಬೃಹಸ್ಪತಿಯ ಮುಖವನ್ನು ನೋಡುತ್ತ, ಕೈತಲೆಗಳನ್ನು ಅಳ್ತಾ. ಡಿಸುತ್ತ ಸಹಾಸ್ಯಕವಾಗಿ:_“ಅಹುದಹುದು! ಆರೀತಿಯಾದ ದೀರ್ಘದ ರ್ಶಿತ್ವವೂ ಹಿತಚಿಂತೆಯ ಇರ್ದುದರಿಂದಲೇ, ಇಷ್ಟು ಜನರ ಪ್ರಾಣಗಳೂ ನಾಶವಾಗಿ, ರಾಜ್ಯವೇ ಆನಾಯಕವಾಯಿತು! ದಿವ್ಯ ಬ್ರಾಹ್ಮಣರು! ದಿವ್ಯಹಿತಚಿಂತಕರು!! ” ಎಂದು ಅಪಹಾಸ್ಯ ಮಾಡುವದನ್ನು ನೋಡಿದ ಇಂದ್ರನು ಸಂತೋಷದಿಂದ ಫಕಫಕನೆ ನಕ್ಕು:- ಭಲಾ! ಭಲಾ ! ಶುಕ್ರನೇ! ' ಎಂದು ಸಂತೋಷಪಡುವದನ್ನು ನೋಡಿದ ಯಮಕಿಂಕ ರರು, ತಾವೂ ಸಂತೋಷದಿಂದ ಉಬ್ಬಿ ತಮ್ಮಲ್ಲಿ ತಾವೇ:- " ಆಹಾ ಹಹ ಹಹ! ಎಂತಹ ಸಂಧಿಯನ್ನು ನೋಡಿ ಹೊಡೆದನೈಯ್ಯಾ! ಶುಕ್ರನೇನು ಕಡ ಮೆಯೇ? ಇಂತಹ ಪ್ರಚಂಡವಾದಿಯು ಇಲ್ಲದೇ ಇರ್ದರೆ ಎಮ್ಮ ನರಕ ವೆಲ್ಲ ಹಾಳಾಗಿ ಹೋಗುತಿರ್ದುದು! ದಿವ್ಯಸಾಹಸ! ದಿವ್ಯಸಾಹಸ!! ಅ೦ ತೂ ಈ ಹಾರುವರಿಬ್ಬರೂ ನಮ್ಮ ಕೈಗೆ ಸಿಕ್ಕಿದಂತೆಯೇ ಆಯಿತು; ಮೃ «ಭೋಜನದಿಂದಲೂ ಭೂರಿದಕ್ಷಿಣೆಗಳಿಂದಲೂ ತುಷ್ಟಿ ಯನ್ನು ಪಡೆದು ಪುಷ್ಟರಾಗಿ, ಕಷ್ಟ ಕಾರ್ಯಗಳನ್ನು ಮಾಡದೆ, ಇಷ್ಟ ಬಂದಂತೆ ವಿಹರಿಸುತ್ತ ಕೊಬ್ಬಿರುವೀ ಭ್ರಷ್ಟಮಾನವರ ದೊಳ್ಳು ಹೊಟ್ಟೆಗಳನ್ನು ಕುಟ್ಟಿ ಕುಟ್ಟಿ, ಕಷ್ಟ ಕಷ್ಟ' ಎಂದು ಆtಚಿಕೊಳ್ಳಂತೆ ಮಾಡುವೆವು. ' ಎಂದು ಕುಣಿ ದಾಡುತಿರ್ದರು. ಈ ಅವಿವೇಕವನ್ನೂ ಬಾಲಿಶತ್ವವನ್ನೂ ನಿಂದೆಯನ್ನೂ ಅರಿತ ಬೃಹ ಸೃತಿಯು, ಇವರ ಅಜ್ಞಾನಕ್ಕೆ ವಿಷಾದಗೊಂಡು, ಬಳಿಕ ಬ್ರಹ್ಮನನ್ನು ಕುರಿತು ವ್ಯಸನದಿಂದ:*"ಧರ್ಮಾ ಸನನೆ ! ಶುಕ್ರನೂ ಮತ್ತೀ ಇಂದ್ರನೂ ತಮ್ಮ ಬಾಲಿಶತ್ವದಿಂದಲೂ ಅಪಹಾಸ್ಯದಿಂಬಲೂ ಎಮ್ಮ ದೇವಸಭೆಗೇ ಅಪ ಕೀರ್ತಿಯುಂಟಾಗುವುದೆಂಬುದನ್ನು ಅರಿಯರು; ನಾನು ಹೇಳಿದುದನ್ನು ಸಂಪೂರ್ಣವಾಗಿ ಕೇಳಿ ತಿಳಿದುಕೊಳ್ಳದೆ, ಅದರಲ್ಲಿ ಏನೋ ದೋಷವಿದ್ದಂತೆ