ವಿಷಯಕ್ಕೆ ಹೋಗು

ಪುಟ:ಧರ್ಮಸಾಮ್ರಾಜ್ಯಂ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ ೧೪೫ ವರು; ಹೀಗಿರುವಲ್ಲಿ ಸತ್ಯಾತರಾಗಿಯೂ ಲೋಕಹಿತೈಷಳಾಗಿಯೂ ೧ರುವ ಈ ಪ್ಯಾಹ್ಮಣರಲ್ಲಿ ದೋಷವೆಲ್ಲಿ ತೋರುವುದು? ಆದಕಾರಣ ಇವರು ನಿರ್ದೋಷಿಗಳೆಂದೇ ಎನ್ನ ಸಿದ್ಧಾಂತವು.” ಎಂದು ಹೇಳಿದನು. ಈ ಧರಸೂಕ್ಷ್ಮಗಳನ್ನು ಕೇಳಿದ ಬ್ರಹ್ಮದೇವನು, ಸ್ವಲ್ಪ ಸಂಶಯ ಗೊಂಡು, ಸ್ವಲ್ಪ ಕಾಲ ಆತ್ಮ ಜಿಜ್ಞಾಸೆಯಿಂದ:- ಶುಕ್ರನುಹೇಳಿದಂತೆ, ಈ ಅನಾಹುತಗಳೆಲ್ಲವೂ ನಡೆದಿರುವುದನ್ನು ನೋಡಿದರೆ, ಈ ಬ್ರಾಹ್ಮಣರ ಧರ್ಮದರ್ಶಿತ್ವವು ವಿಫಲವಾಗುವುದು, ಮತ್ತು ಬೃಹಸ್ಪತಿಯು ನಿರೂ ಸಿದಂತೆ ಈ ದ್ವಿಜರಪರಸ್ಪರ ಸಂವಾದದ ಸಂದರ್ಭವನ್ನು ನೋಡಿದರೆ, ವರು ಊಹಿಸಿದಂತೆಯೇ, ಈ ಸ್ತ್ರೀಯನ್ನು ರಾಜನು ನೋಡಿದ ಮಾತ್ರದಿಂದಲೇ ರಾಜ್ಯವು ಅನಾಯಕವಾಗಿ ಕೊನೆಗೆ ಈ ಸರ್ವನಾ ಶವೂ ಆಗಿರುವುದು; ಈ ವಿಷಯದಲ್ಲಿ ಈರ್ವರ ಮಾತ್ರ ನಿಜವಾಗಿರು ವುದು; ಈಗ ಆರಲ್ಲಿ ದೋಷವನ್ನಾರೋಷಿಸುವುದಕ್ಕೂ ಯತ್ನ ವೇ ಇಲ್ಲ ದಂತಾಗಿದೆ; ಹಾಗಾದರೆ ಇದಕ್ಕೆ ಕಾರಣವೇನಾಗಿರಬೇಕು ? ದೈತಿಕ ಭೌತಿಕ ಕಾರ್ಯಗಳಲ್ಲಿಯ ವ್ಯತ್ಯಾಸವೂ ವಿರೋಧವೂ ಉಂಟಾಗಬೇ ಕಾದರೆ, ಅದಕ್ಕೂ ಕಾರಣಗಳಿರ್ದೆ ಇರಬೇಕು, ಇಲ್ಲಿ ಈಗ ಆವಕಾರ ಇವನ್ನು ಹೇಳುವುದಕ್ಕಾದಿತು ? ” ಎಂದು ಸ್ವಲ್ಪ ಹೊತ್ತು ಏಕಾಗ್ರ.. ದಿಂದ ಯೋಚಿಸುತ್ತಿದು' ಪುನಃ:« ಆ ಇದರ ನಿಜಾಂಶವು ಈಗ ತಿಳಿ ಯಿತು; ಇಂದ್ರನು ಪರರ ಶ್ರೇಯಸ್ಸಿನ ವಿಷಯದಲ್ಲಿ ಅಸೂಯೆಯನ್ನು ಹೊಂದಿ ಅಧರ್ಮವೇ ಈ ಸರ್ವನಾಶಕ್ಕೂ ಕಾರಣವಾಯಿತು; ಈ ಸರ್ವ ನಾಶವು ಪ ಸ್ವವಾದರೂ, ಈ ರಾಜನೇ ಮುಂತಾದವರು ತಂತಮ್ಮ ಧರ್ಮವನ್ನು ಬಿಡದೆ ಕಾಪಾಡಿಕೊಂಡರಾದುದರಿಂದ, ಈ ಇ೦ದ್ರನು ತನ್ನ ಅಧಿಕಾರವನ್ನು ತಾನೆ ಇವರಿಗೆ ಈಗ ಒಪ್ಪಿಸಬೇಕಾಗಿರುವುದು; ಮುಖ್ಯವಾಗಿ ಭೂಲೋಕದಲ್ಲಿರ್ದ ಧರ್ಮವು, ಈ ಇಂದ್ರಲೋಕಕ್ಕೆ ಒಂದು ಇಲ್ಲಿನ ಅಧರ್ಮಗಳನ್ನೆಲ್ಲ ನಾಶಮಾಡುವುದಕ್ಕಾಗಿ ಪ್ರಯತ್ನಿಸಿ ರುವುದುಂದ, ಈ ಅತಿಶಯವಾದ ಕಾರ್ಯಗಳಾಗಿರುವುವು, ಆದರೆ ಈ