ವಿಷಯಕ್ಕೆ ಹೋಗು

ಪುಟ:ಧರ್ಮಸಾಮ್ರಾಜ್ಯಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪L ಧರ್ಮಸಾಮಾಮ್ [ಸಂಧಿ ಕೃತ್ಯಗಳನ್ನು ಅನಾಹುತಗಳೆಂದು ಹೇಳಕೂಡದು; ಏಕೆಂದರೆ, ಈ ರಾಜನೇ ಮುಂತಾದವು ಕಾರ್ಯಗಳೆಲ್ಲವೂ ಸ್ವಧರ್ಮಪಾರಮಿತತ್ವಗಳನ್ನು ಸೂಚಿಸುವುವು; ಆದುದರಿಂದ ಈ ಆತ್ಮಹತ್ಯೆಗಳನ್ನು ದೋಷವೆಂದು ಯೋಚಿಸಕೂಡದು; ಏಕೆಂದರೆ, ಇಂತಹ ಧರ್ಮಸೈರ್ಯವಿರುವ ಮಹಾ ತ್ಪರ ಮೂಲಕವೇ ಧರ್ಮವು ಉದ್ದೀವಿಸತಕ್ಕದು; ಆದಕಾರಣ ಇವ ರುಗಳಲ್ಲಿ ದೋಷವನ್ನೆಣಿಸಕೂಡದು.” ಎಂದು ಸಿದ್ಧಾಂತಮಾಡಿಕೊಂಡ ಬಳಿಕ ಸಭಿಕರನ್ನು ಕುರಿತು:- ಈ ಪುರೋಹಿತಶಿಕ್ಷಣಜ್ಞರ ಉದ್ದೇಶವು ಸದುದ್ದೇಶವಾಗಿರುವುದರಿಂದ ಅವರು ದೋಷಿಗಳೆಂದಿಗೂ ಅಲ್ಲ ; ಮತ್ತು ಸ್ವಾಮಿಹಿತಾರ್ಥವಾಗಿ ತಾವೂ ಪ್ರಾಣಗಳನ್ನು ಅರ್ಪಿಸಿ ರುವುದರಿಂದ ಅವರನ್ನು ಮಹತ್ಯಾರೆಂದೇ ಹೇಳಬೇಕು. ” ಎಂದು ಸಿದ್ದಾಂತವನ್ನು ಹೇಳಿದನು. - ಇದನ್ನು ಕೇಳಿದೊಡನೆಯೇ ಶುಕ್ರನು ಹತಾಶನಾಗಿ:- ಬ್ರಹ್ಮದೇ ವನೇ ! ಉನ್ಮಾದಯನ್ತಿಯಲ್ಲಿಯ ಮತ್ತಾ ಅಭಿಪಾರಗನೇ ಮುಂತಾದ ವರಲ್ಲಿಯ ದೋಷಗಳನ್ನಾ ರೋಪಿಸೋಣವೆಂದಿರ್ದೆನು; ಆದರೆ ಎನ್ನ ಮಿತ್ರನಾದ ಬೃಹಸ್ಪತಿಯ ಅಭಿಪ್ರಾಯದಂತೆ (ಉದ್ದೇಶವೇ ಮುಖ್ಯ ವಾದುದು' ಎಂಬ ಸಂಗ್ರಿಯನ್ನೇ ನೀನೂ ಪ್ರಬಲಪ್ರಮಾಣವನ್ನಾಗಿ ಆ೦ ಗೀಕರಿಸಿರುವುದರಿಂದ, ಬಾಹ್ಯಕರ್ಮಗಳ ಆಧಾರದಮೇಲೆ ಪ್ರಸಂಗವಾ ಡುವುದರಿಂದೇನು ಪ್ರಯೋಜನ? ” ಎಂದು ಖಿನ್ನನಾಗಿ ತನ್ನಾ ಸನದಲ್ಲಿ ಮೌನವಾಗಿ ಕುಳಿತುಕೊಂಡನು. ಬಳಿಕ ಬ್ರಹ್ಮದೇವನು ಸಂತುಷ್ಟನಾಗಿ ಸಭಿಕರನ್ನು ಕುರಿತು:- ““ಎಲೈ ದೇವತೆಗಳೆರಾ! ಇವರೆಲ್ಲರೂ ನಿರ್ದೋಷಿಗಳು; ಮಹಾಪ್ರಣ್ಯವಂ ತರು. ” ಎಂದು ಹೇಳಿದ ಬಳಿಕ ದೇವಸೇನನೇ ಮುಂತಾದವರನ್ನು ಕುರಿತು:ನಿಮನಿಮಗೆ ಆವಾವ ವರವು ಬೇಕೊ ಅದದನ್ನು ನೀವು ಈಗ ಬೇಡಿ ಎನ್ನಿಂದ ಪಡೆಯಬಹುದು. ” ಎಂದು ಹೇಳಿದನು. ಇದನ್ನು ಕೇಳಿದ ಕುರುಬನು ತಾನು ಮೊದಲೆದ್ದು ನಿಂತು ಕೈಮು