ಪುಟ:ಧರ್ಮಸಾಮ್ರಾಜ್ಯಂ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಧರ್ಮಸಾಮ್ರಾಜ್ಯಮ್ (ಸಂ)

  • * * *

• • -+ wn ಒಳಿಕ ಉನ್ಮಾದಯನ್ತಿಯು ಎದ್ದುನಿಂತು ದುಃಖಾಶಗಳನ್ನು ಸುರಿಸುತ್ತ ಲಜ್ಞಾನತವದನೆಯಾಗಿ ಗದ್ದಸ್ವರದಿಂದ:ವಾಣೀಶನ! ಜನ್ಮ ಕ್ರಮವನ್ನು ದಾಟುವವರೆಗೂ ಪ್ರತಿಜನ್ಮದಲ್ಲಿಯ ಈ ಮಹಾರಾ ಜನ ಪತ್ನಿ ಯಾಗಿರಬೇಕೆಂಬ ಸಂಕಲ್ಪವು ಮನದೋಳು ನೆಲೆಗೊಂಡಿರು ವುದು; ನಾನು ಮರ್ತ್ಯಲೋಕದಲ್ಲಿ ಎನ್ನ ವಲ್ಲಭನ ಅಂಗಸುಖವನ್ನು ಪಡೆವುದಕ್ಕಾಗಿ ಬಗೆ ಬಗೆಯಾದ ಕಷ್ಟಗಳನ್ನೆಲ್ಲ ಅನುಭವಿಸಿದೆನು; ಆದರೂ ಎನ್ನ ದುರದೃಷ್ಟ ರೋಷದಿಂದ ', ಅಥವಾ ಅಗ್ಗೆ ಪತಿಸೇವೆಯಭಾಗ್ಯವೆ ನಗಿಲ್ಲದುದರಿಂದಲೋ, ಎನ್ನ ಮನೋವಲ್ಲಭನು ಎನ್ನ ನ್ನು ಧಿಕ್ಕರಿಸಲು, ಅವನಿಗಾಗಿ ಕೊನೆಗೆ ಎನ್ನ ಪ್ರಾಣಗಳನ್ನೇ ಅಲ್ಪಸಿದೆನು; ಈಗಲಾದರೂ ಎನ್ನ ಮೇಲೆ ಎನ್ನ ಪತಿಗೆ ಕರುಣೆಯುಂಟಾಗಿ ಎನ್ನನ್ನು ಪತ್ನಿ ಯನ್ನಾಗಿ ಸ್ವೀಕರಿಸುವಂತೆ ವರವನ್ನು ಕರುಣಿಸಿ ಕಾಪಾಡಬೇಕೆಂದು ಬೇಡುವನು.” ಎಂದು ಕಣ್ಣೀರನ್ನು ತೊಡೆದುಕೊಂಡು ನಮಸ್ಕರಿಸಿದಳು. ಬಳಿಕ ಬ್ರಹ್ಮದೇವನು ಕಾರುಣ್ಯವಶದಿಂದ ಉನ್ಮಾದ ಯನ್ನು ಕುರಿತು:ಎಲೆಮಗಳೆ! ದುಃಖಿಸದಿರು; ನೀವುಗಳು ಸಾಮಾ ನ್ಯೂಮರರಲ್ಲ; ಲೋಕೋದ್ಧರಣಾರ್ಥವಾಗಿ, ಆಧರ್ಮವು ನಿಮ್ಮನ್ನು ತನ್ನ ಸಾಧನವನ್ನಾಗಿ ಮಾಡಿಕೊಂಡು ಈ ಅತ್ಯತಿಶಯವಾದ ಕಾರ್ಯ ಳನ್ನು ಮಾಡಿಸಿರುವುದು; ನಿನ್ನ ಕೋರಿಕೆಯ ಮತ್ತೀ ಉಳಿದವರ ಕೋಲ ಕೆಗಳೂ ಇಲ್ಲಿಯ ಮುಂದಕ್ಕೂ ನೆರವೇರುವುವ; ಚಿಂತಿಸದಿರು, ? ಎಂದು ವರಗಳನ್ನು ಪಾಲಿಸಿದ ಬಳಿಕ, ದೇವಸೇನಮಹಾರಾಜನು ಆವ ವರವನ್ನೂ ಬೇಡದೆ ತನ್ನಾ ಸನದಲ್ಲಿಯೇ ಕುಳಿತಿರುವುದನ್ನು ನೋಡಿ, ಪರ ಮಾಶ್ಚರ್ಯದಿಂದ ಅವನನ್ನು ಕುರಿತು: “ಎಲೈ ಮಹಾರಾಜನೇ! ಆವ ವರವನ್ನೂ ಬೇಡದೆ ಇದೇಕೆ ಸುಮ್ಮನೆ ಕುಳಿತಿರುವೆ? ನಿನ್ನ ಧರ್ಮ ಪ್ರಭಾವದಿಂದ ಈ ಇಂದ್ರಪಟ್ಟವು ನಿನ್ನದಾಗಿಯೇ ಇರುವುದು... ಮತ್ತಾವ ವರವನ್ನು ಪಡೆಯಲಿಚ್ಚಿಸುವೆ? ?” ಎಂದು ಕೇಳಿದನು.