ಪುಟ:ಧರ್ಮಸಾಮ್ರಾಜ್ಯಂ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಐದನೆಯ ಅಂಗ ೧೧ • • • ••• r\\?" psts Ptnr\\ ? • • • • •n 14, 514\ \h 11 \ \r\\ \ : * [ಗಮ್|| ತಾ:-(ಮಹಾಜ್ಞಾನಿಯಾಗಿಯ, ಸರ್ವಪ್ರಾಣಿ ಗಳಿಗೂ ರಕ್ಷಕನಾಗಿಯೂ, ಅತಿ ಶ್ರೇಷ್ಠವಾದ ಕಾರುಣ್ಯವುಳ್ಳವನಾ 'ಗಿಯೂ, ಅಚಿಂತ್ಯವಾದ ಮಹಿಮೆಯುಳ್ಳವನಾಗಿಯ, ಸಮಸ್ತ ಪ್ರಾಣಿ ವರ್ಗವನ್ನೂ ರಕ್ಷಿಸುವುದಕ್ಕಾಗಿ ಸಂಕಲ್ಪಗೊಂಡಿರುವ ಬೋಧಿಸತ್ವ ನಾಗಿಯ, ಮಹಾಸತ್ಯನಾಗಿಯೂ ಇರುವ ಮಹಾತ್ಮನೆ ! ನಿನಗೆ ಸರ್ವಪ್ರಕಾರಗಳಿಂದಲ ನಮಸ್ಕಾರವು ”]. ಎಂದು ಸ್ತುತಿಸಿದ ಬಿಳಿಕ ಪುನಃ:-- ಎಲೈ ಮಹಾತ್ಮನೇ ! ನಾನು ನಿನ್ನ ಪರಿವಾರದವರಿಗೆಲ್ಲ ವರವನ್ನಿತ್ತೆನು; ಈಗ ನೀನೆನಗೊಂದು ವರವನ್ನು ಕರುಣಿಸುವನಾಗು.” ಎಂದು ಬ್ರಹ್ಮದೇವನು ಪ್ರಾರ್ಥಿಸಲು, ದೇವಸೇನನಾಮಕನಾದ ಬೋಧಿಸತ್ವನು ಗಾಂಭೀರ್ಯದಿಂದ:- ಅದೇ ನು ಕೇಳು ?” ಎಂದು ಹೇಳಲು ಬ್ರಹ್ಮನು ಕೈಮುಗಿದು ಕೊಂಡು ದೈನ್ಯ ದಿಂದ:- .ನಿನ್ನ ಪರಿವಾರದವರಾದ ಈಕುರುಬನೇ ಮುಂತಾದವರು ಎನ್ನ ಇಲ್ಲಿ ಬೇಡಿದವರಗಳನ್ನೆಲ್ಲ ಕೊಡುವುದಾಗಿ ವಾಗ್ದಾನಮಾಡಿದೆನು, ಆವರಗ ಇನ್ನು ನೀನೂ ಅನುಮೋದಿಸಿ ನನ್ನನ್ನು ಸಂತುಷ್ಟನನ್ನಾಗಿ ಮಾಡಬೇಕೆಂದು ಬೇಡುವೆನು. ಎಂದು ವಿನಯದಿಂದ ಪ್ರಾರ್ಥಿಸಲು ಬೋಧಿಸತ್ವನು:- ಒಳ್ಳೆಯದು! ಹಾಗೆಯೇ ಆಗಲಿ.” ಎಂದು ಬ್ರಹ್ಮನ ಕೋರಿಕೆಯನ್ನು ಸಫಲಗೊಳಿಸುವುದಾಗಿ ವಾಗ್ದಾನಮಾಡಿದನು. ಬಳಿಕ ಬ್ರಹ್ಮದೇವನು ತೃಪ್ತನಾಗಿ, ಇಂದ್ರನೇ ಮೊದಲಾದವ ರನ್ನು ಕುರಿತು ತವಕದಿಂದ:- ಎಲೈ ದಿಕ್ಷಾಲರಿರಾ : ಧರ್ಮಪ್ರಿಯನಾದ ಈ ಮಹಾತ್ಮನಿಗೆ ಈ ದೇವಲೋಕಾಧಿಪತ್ಯವನ್ನು ವಹಿಸಿ, ಈ ಮಹಾಪ ತಿವ್ರತೆಯಾದ ಉನ್ಮಾದಯಂತಿಯನ್ನು ಅವನ ಪತ್ನಿಯನ್ನಾಗಿಮಾಡಿ, ವಿವಾಹವನ್ನು ನೆರವೇರಿಸೋಣ, ” ಎಂದು ಹೇಳಿದನು. ಗದ್ಯವತ್ || ಸರ್ವಥಾ ನಮೋsಸ್ತು ಮಹಾಭಾಗಾಯ ಸರ್ವಭೂತಶರಣಾ ಯಾತಿವಿಪುಲಕಾರುಣ್ಯಾಯಾಪ್ರಮೇಯಸರ್ತಯ ಭೂತಾರ್ಥಬೋಧಿಸತ್ಪಾಯ ಮಹಾ ಸತ್ಕಾಯ |