ಪುಟ:ಧರ್ಮಸಾಮ್ರಾಜ್ಯಂ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಧರ್ಮಸಾಮ್ರಾಜ್ಯ [ಸಂಧಿ ಗುತ್ತಿರುವುದನ್ನು ಸಹಿಸಲಾರದೆ ಶೋಕಾತುರದಿಂದ ಕಿರಿಚಿಕೊಳ್ಳರು; ಇನ್ನು ಕೆಲವರ ದೇಹಗಳು ದೊಡ್ಡ ಶೂಲಗಳಿಂದ ಚುಚ್ಚಲ್ಪಟ್ಟು ಹೊಗೆ ಯಿಲ್ಲದ ಬೆಂಕಿಯ ಕೆಂಡಗಳಲ್ಲಿ ಬೇಯಿಸಲ್ಪಡುತ್ತಿರುವುವು; ಇನ್ನೂ ಕೆಲ ವರು ಉರಿಯುವ ಬೆಂಕಿಯಂತೆ ಕಾಣುವ ಲೋಹರಸವನ್ನು ಕುಡಿಸಲ್ಪ ಡುತ್ತ ಹಾಗೆಯೇ ಹಾಹಾಕಾರವನ್ನು ಮಾಡುತ್ತಿಹರು, (೯೫) ಇಷ್ಟೇ ಅಲ್ಲದೆ ಇನ್ನು ಕೆಲವರ ದೇಹಗಳು, ಸಂಘಾತಪರ್ವತಗಳ ಮಧ್ಯದಲ್ಲಿ ಸಿಕ್ಕಿಸಲ್ಪಟ್ಟು, ಅವುಗಳ ಸಂಘಟ್ಟನದಿಂದ ಪುಡಿಪುಡಿಯಾಗುತ್ತಿರುವುವು; ಇಂತಹ ಮಹತ್ತರವಾದ ದುಃಖಗಳಿಗೊಳಗಾಗಿರ್ದರೂ ಮರಣವನ್ನು ಹೊಂದದೆ ತಮ್ಮ ದುಷ್ಕರ್ಮದಿಂದುಂಟಾದ ಪಾಸಶೇಷದ ಅವಧಿಯು ಮುಗಿಯುವ ವರೆಗೂ ಈರೀತಿಯೇ ಅನುಭವಿಸುವರು. '7 ಎಂದು ಹೇಳಿದ ನರಕಯಾತನೆಯ ವರ್ಣನೆಯನ್ನು ಕೇಳಿದ ಬೋ ಧಿಸತ್ವನು, ವಿಷಾದದಿಂದ:- ಹಾ ! ಕಷ್ಟ! ಕಷ್ಟ!! ” ಎಂದು ವ್ಯಸನ ಗೊಂಡು ಬಳಿಕ ಬ್ರಹ್ಮನನ್ನು ಕುರಿತು, ವ್ಯಸನದಿಂದ:- ಎಲೈ ಬ್ರಹ್ಮದೇ ವನೇ ! ಸುಧರ್ಮಾಖ್ಯಸಭೆಯುಳ್ಳು ದೆಂಬ ವಿಖ್ಯಾತಿಯನ್ನೂ, ಆನಂದ ಸ್ಥಾನವೆಂಬ ಪ್ರತೀತಿಯನ್ನೂ, ಪಡೆದಿರುವ ಈ ದೇವಲೋಕದಲ್ಲಿಯ ಇಂತಹ ಕೌರವಿರುವುದೆ ? ಮರ್ತರು ಅಪರಿಚಯದೋಷದಿಂದ ದೇವತೆ ಗಳಲ್ಲಿ ಇಲ್ಲದ ಗುಣಗಳನ್ನೆಲ್ಲ ಅನ್ಯಾಯವಾಗಿ ಆರೋಪಿಸುವರು ಇಲ್ಲಿ ನ ನಿಜಸ್ಥಿತಿಯನ್ನು ತಿಳಿದ ಬಳಿಕ ಮರ್ತ್ಯಲೋಕವನ್ನು ಧರ್ಮಭೂಮಿ ಯೆಂದು ಹೇಳಬೇಕಾಗುವುದೇ ಹೊರತು, ಈ ವಿವೇಕಶೂನ್ಯವಾದ ಸುರ ಲೋಕವನ್ನು ಹಾಗೆ ಹೇಳಲಾಗುವುದಿಲ್ಲ; ಇಲ್ಲಿ ಸ್ವಕ್ಷೇಮವೂ, ಪರಹಿಂ ಸೆಯಲ್ಲಿ ಪ್ರತೋಷವೂ, ಪರಶ್ರೇಯಸ್ಸಿನಲ್ಲಿ ಅಸೂಯೆಯ, ಭರಿತವಾಗಿ ರುವುದರಿಂದ ಇಲ್ಲಿನ ನಡತೆಯ ವಿಷಯದಲ್ಲಿ ಶೋಕಿ ಸಬೇಕಾಗಿಹುದು ; ಅದಲ್ಲದೆ ಅನೇಕ ರಾಜರೆಲ್ಲ ದುಃಖಪಡುತ್ತಿರುವಲ್ಲಿ ನಾನೊಬ್ಬನು ಈ ಅಧಿಪತ್ಯ ಸುಖವನ್ನೆಂತು ತಾನೇ ಬಯಸುವೆನು ? ಅದಲ್ಲದೆ ದೋಷಿಗಳಾ ದವರು ದಂಡಿಸಿದಲ್ಲಿ ಗುಣಿಗಳಾಗುವರೆಂಬುದು ಶುದ್ಧ ಅವಿವೇಕವು ಇನ್ನೂ