ಪುಟ:ಧರ್ಮಸಾಮ್ರಾಜ್ಯಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ. ೧೬೧ • • ••• , , .. ವನ್ನು ಪರಿಗ್ರಹಿಸುವೆನು; ಈ ಉನ್ಮಾದಯನ್ತಿಯು ಕಾಳಿರಾಜನ ಸೀಮಂ ತಪುತ್ರಿಯಾದ ಯಶೋಧರೆಯಾಗಿ ಜನಿಸಿ ಈಗಿನಂತೆಯೇ ತಾನೇ ಎನ್ನನ್ನು ಪತಿಯನ್ನಾಗಿ ವರಿಸುವಳು: ಎನ್ನ ಸೈನ್ಯಾಧಿಪತಿಯಾದೀ ಅಭಿಪಾರ ಗನು ಆದೇ ಶುದ್ಧೋದನಮಹಾರಾಜನ ದ್ವಿತೀಯಪತ್ನಿ ಯಾದ ಮಹಾಪ್ರ ಚಾವತೀದೇವಿಯ ಗರ್ಭದಲ್ಲಿ ಜನಿಸಿ, ಆನಂದನೆಂಬ ನಾಮದಿಂದ ವಿಖ್ಯಾ ತನಾಗಿ, ಎನ್ನ ನಿರ್ವಾಣಪರ್ಯಂತ ಎನ್ನೊಡನೆಯೇ ಇರ್ದು, ಆನಂತರ ಎನ್ನ ನುಗಾಮಿಯಾಗಿ ನಿರ್ವಾಣವನ್ನು ಹೊಂದುವನು; ಈ ಕಿರೀಟವಲ್ಪನೂ ಅವನ ಭಾರ್ಯೆಯ ಯಶೋಧರೆಯ ಮಾತಾಪಿತೃಗಳಾಗುವರು ಈ ಕುರುಬನು ಲೋಕಾಶ್ಚರ್ಯಕರವಾದ ಸತ್ವ ಜಾಸಂಪತ್ತಿಯನ್ನು ವ್ಯಕ್ತ ಪಡಿಸಿದನಾದಕಾರಣ, ಈ ಗುಣಪ್ರಭಾವದಿಂದ ಅಗ್ಗೆ ಉತ್ತಮ ವರ್ಣ ಜನಾಗಿ, ದ್ವಿಜತ್ವವನ್ನು ಪಡೆದು, ಬಿಂಬಿಸಾರನೆಂಬ ಅಭಿಧಾನದಿಂದ ಶೋ ಭಿಸುತ್ತ, ಚಕ್ರೇಶ್ವರನೆಂಬ ಬಿರುದನ್ನು ಹೊಂದಿ ಮಗಧರಾಜ್ಯವನ್ನು ಪರಿ ಪಾಲಿಸುವನು. ಎನ್ನೀ ಪುರೋಹಿತಸ್ತ್ರೀಲಕ್ಷಣಜ್ಞರು, ಆಗ್ಗೆ ಮಹಾವ ಸಿಷ್ಠ ಮತ್ತು ಮಹಾಕಾಕ್ಯ ಪರೆಂಬ ಮುನಿಶ್ರೇಷ್ಠರಾಗಿ ಜನಿಸಿ, ಬ್ರಹ್ಮ ವೇತ್ತರೆಂಬ ಪ್ರತೀತಿಯನ್ನು ಪಡೆದು, ಆಗ್ಗೆ ಲೋಕಹಿತಾರ್ಥವಾಗಿ ನಾನು ಮಾಡುವ ಕಾರ್ಯಕ್ಕೆ ಸಹಾಯಕರಾಗಿ ಧರ್ಮಾಗ್ರೇಸರರೆಂದೆನಿಸಿಕೆ ಊರು; ಅದಲ್ಲದೆ ನೀವುಗಳೆಲ್ಲರೂ ಆಗ್ಗೆ ಭರತಖಂಡದ ಗಾಂಧಾರ ಆವಂತಿ ಕೋಸಲ ಕಳಿಂಗ ಮುಂತಾದ ದೇಶದ ಅರಸರಾಗಿ ಜನ್ನಿಸಿ ಈಗಿನಂತೆಯೇ ಎನ್ನ ಧರ್ಮೋಪದೇಶವನ್ನು ಭಕ್ತಿಯಿಂದ ಲಾಲಿಸಿ, ಅದರ ಪ್ರಭಾವದಿಂದ ನಿಂನಿಮ್ಮ ರಾಜ್ಯವನ್ನು ಸಮೀಚೀನವಾಗಿ ಪರಿಪಾಲಿಸಿ ಐಹಿಕ ಸುಖವನ್ನು ಹೊಂದುವುದಲ್ಲದೆ, ಜ್ಞಾನಪರಿಪಾಕದಿಂದ ನಿರ್ವಾಣ ಪದವಿಯ ನಿತ್ಯ ಸುಖವನ್ನೂ ಪಡೆಯುವಿರಿ, ” ಎಂದು ತನ್ನ ಮುಂದಿನ ಬೌದ್ದಾ ವತಾರದ ವಿಶೇಷಗಳನ್ನು ಸೂಚಿಸಿದನು. ಬಳಿಕ ಬ್ರಹ್ಮನು, ಬೋಧಿಸತ್ವನನ್ನು ಕುರಿತು ಭಕ್ತಿಗೌರವಗಳಿಂದ “ಭಗವನ್!ನೀಸಿಲ್ಲಿ ಕೆಲಕಾಲ ಮಹಾಲಕ್ಷ್ಮೀಸ್ವರೂಪಿಣಿಯಾದೆ ಉನ್ಮಾ