ಪುಟ:ಧರ್ಮಸಾಮ್ರಾಜ್ಯಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Author's Preface. ಉಪೋದ್ಘಾತವು. `ಇ ವಾಚಕಸಹೋದರರೆ? ! ಈ ಗ್ರಂಥವನ್ನು ಸಂಪೂರ್ಣವಾಗಿ ಓದಿ ಅನಂತರ ತಮ್ಮ ಅಭಿಪ್ರಾಯಗಳನ್ನು ಸೂಚಿಸಬೇಕೆಂದು ಮೊದಲು ಬೇಡುವೆನು | ಏಕೆಂದರೆ ಈ ಗ್ರಂಥದ ೪ ನೆಯ ಶ್ಲೋಕದಲ್ಲಿ ಹೇಳಿರುವಂತೆ, ಒಂದು ವಸ್ತು ವಿವ ನಿಜಸ್ಥಿತಿಯು ಮನಸ್ಸಿಗೆ ಬರಬೇಕಾದರೆ, ಆ ವಸ್ತುವನ್ನು ಸಂಪೂರ್ಣವಾಗಿ ಪರೀ ಕ್ಷಿಸಬೇಕು. ಹಾಗೆ ಮಾಡದೇಹೋದರೆ, ಕೆಲವು ವೇಳೆ ದುರಭಿಪ್ರಾಯಗಳಿಗೆ ಅವಕಾಶ ನುಂಟಾಗಿ ಮಹಾ ಅನರ್ಥಗಳು ಪ್ರಾಪ್ತವಾಗುವುವು, ಈರೀತಿಯಾದ ಸಂಪೂರ್ಣಪರಿ ಚಯಾಭಾವದೋಷದಿಂದ ಹಿಂದೆ ಸಾಮಾನ್ಯಜನರು ದುಗಭಿಪ್ರಾಯಗಳುಳ್ಳವರಾಗಿ, ಚೀಣ ದೇಶದ ಆಚಾರ್ಯನಾದ 66 ಕನ್ನೂಷಿಯಸ್” ಎಂಬುವನನ್ನೂ ,ಪಾರ್ಸಿದೇಶದ.ಸಾದಿ'? ಯನ್ನೂ, ಅರಬ್ಬಿದೇಶದ ಮಹಮ್ಮದ್‌?” ನನ್ನೂ, ದೇಶಭ್ರಷ್ಟರನ್ನಾಗಿ ಮಾಡಿದರು; ಗೌತಮ ಬುದ್ಧನು ” ವಿಷಪಯೋಗಕ್ಕೂ, ಅವಿವೇಕಿಗಳ ಸಿಂದಗೂ ಗುರಿಯಾದನು; ಗ್ರೀಕ್ ದೇಶದ ctಸೋಕೊಟೀಸ್" ಎಂಬ ತತ್ರ್ಯವತ್ರನು, ವಿಷಪ್ರಯೋಗದಿಂದ ಕೊಲ್ಲಲ್ಪಟ್ಟನು. ನಜರತ್‌ನಗರದ «ಏಸೂಕ್ರಿಸ್ತ,ನು ಘೋರವಾದ ಹಿಂಸೆಯನ್ನನುಭವಿಸಿ, ಕೊನೆಗೆ ಬಹುಸಂಕಟದಿಂದ ಪ್ರಾಣಗಳನ್ನು ತ್ಯಜಿಸಿದನು. ಹೀಗೆಯೇ ಅನೇಕ ಮಹಾತ್ಮರು ಇತರರ ದುರಭಿಖಾಯಮೋಘದಿಂದ ಪ್ರತಿಯನ್ನೆ ದಿರುವರು. ಆದರೆ ಇವರುಗಳು ಮೃತ ರಾದನಂತರ, ಇವರುಗಳು ಲೋಕೋದ್ಧಾರಕರಾಗಿರ್ದರೆಂಒಂಶವು ಸಾಮಾನ್ಯಜನರಿಗೂ, ಆಮಹಾಪುರುಷರುಗಳಿಗೆ ಹಾನಿಯನ್ನೆಸಗಿದವರಿಗೂ ಕೂಡ ತಿಳಿದುಬಂದು, ತಮ್ಮ ಅವ ಜ್ಞತಾದೋಷಗಳಿಗೆ ತಾವೇ ಶೇಕಿಸಿ, ಪಶ್ಚಾತ್ತಾಪಾಗ್ನಿಯಿಂದ ಬಂದು, ತದ್ರೋಷಪರಿ ಹಾರಾರ್ಥವಾಗಿ ಆ ಮೃತರ ನಾಮಮಾತ್ರಗಳನ್ನು ಅವಲಂಬಿಸಿ, ಈಗಲೂ ಸ್ತುತಿಸುತ್ತ ವೃಥಾ ಶ್ರಮಪಡುತ್ತಿಹರು. . ಆದರೆ, ಆ ಮಹಾತ್ಮರ ಜೀವಿತಕಾಲಗಳಲ್ಲಿಯೇ ಅವ ರನ್ನೂ ಅವರ ಉದ್ದೇಶಗಳನ್ನೂ, ಅವರ ಗುಣಗಣಗಳನ್ನೂ, ಸಂಪೂರ್ಣವಾಗಿ ತಿಳಿ ದಿರ್ದರೆ, ಅವರುಗಳಿಗೆ ದುಃಖವೂ ದುರ್ಮರಣಗಳ ಉcಾಗುತ್ತಿರಲಿಲ್ಲ: ಮು!