ಪುಟ:ಧರ್ಮಸಾಮ್ರಾಜ್ಯಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸದತ ಜನರಿಗೆ ತಮ್ಮ ಪಾಪಕಾರ್ಯಗಳಿಗಾಗಿ ಪಶ್ಚಾತ್ತಾಪವೂ ತಲೆದೋರುತ್ತಿರಲಿಲ್ಲ, ಆದ ಕಾರಣ ಮನುಷ್ಯನಾದವನು, ಆವವಸ್ತುವನ್ನೇ ಆಗಲಿ, ಸಂರ್ಘವಾಗಿ ಪರೀಕ್ಷಿಸದೆ ಅದರ ವಿಷಯಕನಾಗಿ ದುಡುಕಿನಿಂದ ಅಭಿಪ್ರಾಯಗಳನ್ನು ಸೂಚಿಸುವುದು ವೈಚಕ್ಷಣ್ಯ ವೆನಿಸಲಾರದು, ಹಾಗೆ ವಸ್ತುವನ್ನು ಸಂಪೂರ್ಖವಾಗಿ ವಿಮರ್ಶಿಸಬೇಕಾದರೆ, ಮೊದಲು ಸಹನೆಯು ಅತ್ಯವಶ್ಯಕವು, ಏಕೆಂದರೆ ಹಾಗೆ ಮಾಡಿದರೆ ವಸ್ತುವಿನ ಗುಣ ದೊಷಗಳೆರಡೂ ವ್ಯಕ್ತವಾಗುವುದು, ಅನಂತರ ಹಿತಕರವಾದ ಗುಣದ ಸಂಗ್ರಹವನ್ನೂ, ಅಹಿತಕರವಾದ ದೇಹದ ತ್ಯಾಗವನ್ನೂ, ಮಾಡಲು ಅನುಕೂಲಿಸುವುದು, ಏಳ ಗುಣ ನನ್ನ? ಸ್ವೀಕರಿಸಿ ದೋಷವನ್ನು ತ್ಯಜಿಸಬೇಕ:ದು ಕೇಳಿದರೆ,-ಮನುಷ್ಯನು ಗುಣ ವನ್ನೇ ಅನ್ವೇಷಿಸುತ್ತ ಬಂದರೆ, ಅವನಲ್ಲಿ ಗುಣಾಂಶವೇ ನೆಲೆಗೊಂಡು, ಇವನೂ ಗುಣಿಯಾ ಗುವುದಲ್ಲದೆ--ಈ ಗುಣಾಧಿಕ್ಯದಿಂದ ಸಾಧುತನ ಪ್ರಾಪ್ತವಾಗಿ, ಚಿತ್ತ ಶಾಂತಿಯ ಸರ್ವರ ಮೈತ್ರಿಗೌರವಗಳೂ ಲಭಿಸಿ, ತನ್ನ ಜೀವಿತಕಾಲವನ್ನು ಸುಖಸಂತೋಷಗಳಿಂದ ಇಳಿದು, ಅಂತ್ಯದಲ್ಲಿ ನಿತ್ಯಸುಖವನ್ನೂ ಪಡೆಯಬಹುದು. ಆದಕಾರಣ ಗುಣಗ್ರಹಣ ಕಾರ್ಯವೇ ಮನುಷ್ಯನ ಸಾಧುತ್ವಕ್ಕೆ ಕಾರಣವು, ಇದಕ್ಕನುಗುಣವಾಗಿ ಪ್ರಾಜ್ಞರೂ ಈರೀತಿ ಹೇಳುವರು:- ಶ್ಲೋ| ಗುಣಾಭ್ಯಾಸೇನ ಸಾಧೂನಾಂ ಗುಣಸ್ತಿಷ್ಠತಿ ಚೇತಸಿ ಭತ್ಯವಗುಣಸ್ತಸ್ಮಾಜಿ ಲಂ ಪದ್ಮದಲಾದಿವ !೧!! [೧, ಶಾಶ್ಚರ್ಯ_ಗುಣವನ್ನೇ ಅನ್ವೇಷಿಸುವ ಅಭ್ಯಾಸಬಲದಿಂದ ಸಾಧುಶುರು ಪರ ಮನಸ್ಸಿನಲ್ಲಿ, ಇತರರ ಗುಂಭಾಗವು ಮಾತ್ರವೇ ನಿಂತು, ಅವಗುಣಭಾಗವು, ಕಮಲ ಪತ್ರದಿಂದ ಜಾರಿಹೋಗುವ ಜಲಬಿಂದುವಿನಂತ ಕಳೆದುಹೋಗುವುದು } ಹೀಗೆ ಹೇಳಿದುದರಿಂದ ದೋಷಜ್ಞರಾದ ವಿದ್ವಾಂಸರನ್ನು ನಿಂದಿಸಬೇಕೆಂದಾಗಲೀ ಅಥವಾ ಈ ಗ್ರಂಥದಲ್ಲಿ ದೋಷವೇ ಇಲ್ಲವೆಂದಾಗಲೀ, ಎನ್ನ ಅಭಿಪ್ರಾಯವಲ್ಲ ಇದ ರಲ್ಲಿ ಅನೇಕದೋಷಗಳಿರಲೂ ಬಹುದು, ಅದಲ್ಲದೆ ಅವರವರ ದೋಷಗಳು ಅವರವರಿಗೆ ಗುಣರೂಪವಾಗಿಯೇ ತರುವುದೂ ಉಂಟು, ಇಂತಹ ಸಂಭವಗಳಲ್ಲಿ ಅಂಥವರ ಗುಣಗಳನ್ನು ಸ್ವೀಕರಿಸಿ ಪ್ರಮೋದಗೊಳ್ಳುದೂ, ದೋಷಗಳನ್ನು ತಿದ್ದಿ ಅವ ನ್ಯೂ ಗುಣಗಳನ್ನಾಗಿ ಮಾಡುವುದೂ ಸಹ, ವಿದ್ವಾಂಸರ ಕರ್ತವ್ಯವು, ಆದರೆ ಒಗೆ ಮಾಡದೆ, ಅಸೂಯೆಯಿಂದಲೋ ಅಥವಾ ಪಕ್ಷಪಾತವ್ಯಸನದಿಂದಲೋ ಇತರರ ಗುಣವು ಇಳವಾಗಿ ತೋರುರ್ದರೂ ಅದನ್ನು ಲಕ್ಷಿಸದೆ, ದೋಷಗಳನ್ನೇ ಅನ್ವೇಷಿಸುವವರ