ಪುಟ:ಧರ್ಮಸಾಮ್ರಾಜ್ಯಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ವಿಷಯದಲ್ಲಿ ನಾನು ಏನೂ ಹೇಳಲಾರೆನು ಆದರೆ ಅಂಥವರ ವಿಷಯದಲ್ಲಿ ಒಬ್ಬ ಮಹಾಕವಿಯು ಹೇಳಿರುವದೇನಂದರೆ:- ಶ್ಲೋಕi] ಲೊಕೆ: ದುರ್ಜನಕ್ಕಾಃ ಕತಿ ನ ವಾ ದೋಷೋದಯೆ ತೋಷಿತಾ ಸತ್ತೆ ಷಾಮಿಕ ನಾರ್ತಿಕಾಪಿ ಜಗತಿ ಶ್ಲಾಘಸ್ಪದಂ ನಾರ್ಹತಿ ದೆಷಾ ಏವ ಗುಣಾ ಯದಾಸ್ಯಕುಹರೇಷ್ಟಾ ರ್ಯಾಪ್ತ ದಿನ ಸಾದರಂ | ಮಾನ್ಯಾ ಲಾವಣ ಸೈಂಧವಾ ಇವ ಪವಾಹೇಷು ನಾರ್ಬಿಂದವಃ ||೨|! [೨, ತಾ|| 66 ಕತ್ತಲೆಯ ಸಂಭವದಿಂದ ಸಂತೋಷವನ್ನು ಹೊಂದುವ ಗೋಜಿಗ ಇಂತ, ಇತರರ ದೋಷಗಳನ್ನು ಕಂಡುಹಿಡಿದು ಆನಂದಪಡುವ ದುರ್ಜನರು ಈಲೋಕ ದಲ್ಲಿ ಎಷ್ಟಿಲ್ಲ : ಅಂಥವರ ನಾಮಸ್ಮರಣೆಯೂ ಕೂಡ ಈ ಜಗತ್ತಿನಲ್ಲಿ ಶ್ಲಾಘಿಸಲು ಎಂದಿಗೂ ಅರ್ಹವಾಗಲಾರದು ; ಆದರೆ, ಲವಣಸಮುದ್ರದ ಜಲಬಿಂದುಗಳು ಆವ ಮೇಘಮಂಡಲವನ್ನು ಸೇರಲಾಗಿ, (ತಮ್ಮ ಕಾರಗುಣವನ್ನು ಕಳೆದುಕೊಂಡು) ಮಾಧು ರ್ಯವನ್ನಂತು ಹೊಂದುವುವೊ ಅದರಂತೆ-ಇತರರ ದೋಷಗಳು ಆರ ವಕ್ರಾಂತರಾಳ ವನ್ನು ಸರಲಾಗಿ ಗುಣವಾಗಿಯೇ ಪರಿಣಮಿಸುವುವೂ ಅಂತಹ ಮಹನೀಯರೇ ನಿರಂತರವೂ ವಂದನೆಗೆ ಅರ್ಹರು, »•] ಇಷ್ಟಾದರೂ ಇದರಲ್ಲಿಯೂ ದೋಷಜ್ಞರ ನಿಂದೆಯು ಸ್ವಲ್ಪಮಟ್ಟಿಗೆ ಇರುವುದ ರಿಂದ ಮತ್ತೊಬ್ಬ ಕವಿಯು ತನ್ನ ಸಾಧುತ್ವವನ್ನು ಈ ರೀತಿ ವ್ಯಕ್ತಪಡಿಸಿರುವನು:- ಶೇ ಮನ್ನಿ೦ದಯಾ ಯದಿ ಜನಃ ಪುತೋಷಮೆತಿ | ನನ್ನ ಪ್ರಯತ್ನ ಸುಲಭೋಯಮನುಗ್ರಹೋ ಮೇ ||41| 1೩ ತಾ_66 ಎನ್ನನ್ನು ನಿಂದಿಸುವುದರಿಂದಲಾದರೂ ಜನರಿಗೆ ಸಂತೋಷವು ಉಂಟಾದುದೇ ಆದರೆ, ಅದು, ಎನ್ನ ಪ್ರಯತ್ನವನ್ನು ಅಪ?ಕ್ಕಿಸದೆ ಅವರಾಗಿಯೇ ಎನಗೆ ಕರುಣಿಸಿದ ಅನುಗ್ರಹವಲ್ಲವೆ ? "] ಈ ಅಭಿಪ್ರಾಯವನ್ನೇ ಈಗ 'ನಾನೂ ಅವಲಂಬಿಸಬೇಕಾಗಿಹುದು, ಏಕೆಂದರೆ, ಇತರರನ್ನು ಸಂತೋಷಗೊಳಿಸುವುದೇ ಮನುಷ್ಯನಾದವನಿಗೆ ಮುಖ್ಯ ಕರ್ತವ್ಯ ಆದ ಕಾರಣ ಮಚಕರು ಈ ಗ್ರಂಥವನ್ನು ಭೂಷಿಸಿದರೂ ಅಥವು ದೂಷಿಸಿದರೂ ನಾನು ಮಟ್ಟಿಗೆ ಸಂತೋಷವನ್ನೇ ಹೊಂದುವನು ಇನ್ನಿಗ ಈ ಗ್ರಂಥದ ಐತ್ಯದ ವಿಷಯ ವಾಗಿ ಸ್ವಲ್ಪ ಪ್ರಸ್ತಾಪಿಸುವೆನು~ -