ಪುಟ:ಧರ್ಮಸಾಮ್ರಾಜ್ಯಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ಗೌತಮಬುದ್ಧನು ತಾನು: ಸನ್ಯಾಸಿಯಾದನಂತರ ಕಪಿಲವಸ್ತುವಿಗೆ ಹಿಂದಿರುಗಿ ಬಂದಾಗ, ತನ್ನ ಸಹಧರ್ಮಿಣಿಯಾದ ದುಶೋಧರೆಯ ದುಃಖವನ್ನು ಶಮನಮಾಡುವು ದಕ್ಕಾಗಿ ತನ್ನ ಮತ್ತು ಅವಳ ಪೂರ್ವಜನ್ಮವೃತ್ತಾಂತವನ್ನು ಒಳಗೊಂಡಿರುವ ಈ ಅತ್ಯಾ ಶ್ಚರ್ಯಕರವಾದ ಕಥೆಯನ್ನು ಹೇಳಿದನೆಂದು ಬೌದ್ಭಾಗಮಗಳಿಂದ ತಿಳಿದುಬರುವುದು ಈ ಇತಿಹಾಸವು-ಸೂರ್ಯಾಸ್ತಮಯದ ತತ್ವವನ್ನೊಳಗೊಂಡಿರುವ, ದಾಕ್ಷಾಯಣಿಯ ಅಥವಾ ಗೌರಿಯ ಪಾತಿವ್ರತ್ಯಸೂಚಕವಾದ ವೇದದ ಐತಿಹ್ಯದಿಂದ ಸಂಗ್ರಹಿಸಲ್ಪಟ್ಟು ಬಳಿಕ ಪಾಳಿಭಾಷೆಯ 66ವಿಶ್ವ ಶಾಸನಶಾಲಿನೀ, ಅಥವಾ 64ಜಾತಕ » ಎಂಬ ಗ್ರಂಥದ ೫೨೯ ನೆಯ ಜಾತಕದಲ್ಲಿ ಯೂ, ಅನಂತರ ಅದೇ ಭಾಷೆಯ 66ಚಕ್ಯಾಪಿಟಕ, ಎಂಬ ಗ್ರಂಥ ದಲ್ಲಿಯೂ, ಸ್ವಲ್ಪ ವ್ಯತ್ಯಾಸವಾಗಿ ಹೇಳಲ್ಪಟ್ಟಿದೆ, ಅನಂತರ ಇದೇ ಕಥೆಯನ್ನು ಮಹಾಯಾನಿಬೌದ್ದರಲ್ಲಿ ಅಗ್ರಗಣ್ಯನೂ, ಪುರುಷಪುರ ,, (ಪೆಷಾವರ್)ದ ಅರಸನಾಗಿರ್ದ ೧೦೧ನೆಯ ಕನಿಷ್ಠ,,ನ ಗುರುವೂ, ಆಗಿರ್ದ ೯೯ ಶ್ರೀಮದಾರ್ಯಶೂರ ,, ನೆಂಬ ಮಹಾ ಕವಿಯು ಕೆಲವು ವಿಷಯಗಳಲ್ಲಿ ಸ್ವಲ್ಪ ವ್ಯತ್ಯಾಸವನ್ನು ಮಾಡಿ, ತನ್ನಿಂದ ಸಂಸ್ಕೃತಕ್ಕೆ ಪರಿವರ್ತಿಸಲ್ಲ ೬, ೯೯ ಬೋಧಿಸತ್ತಾವದಾನವಾಲಾ , ಎಂಬ ಗ್ರಂಥದ ೧೩ ನೆಯ ಜನ್ಮಚರಿತ್ರೆ ಯಲ್ಲಿ ಸೇರಿಸಿರುವನು. ಇದನ್ನೇ ಅನುಸರಿಸಿ ಈಚೆಗೆ ಪ್ರತಿಷ್ಟಾನಪುರಾಧೀ ಶ್ವರನಾಗಿರ್ದ (“ಸಾತವಾಹನ , ಅಥವಾ ೯೯ ತಾಲೀವಾಹನ, ನ ಸಭೆಯಲ್ಲಿ ಪಂಡಿತನಾಗಿರ್ದ 66 ಗುಣಾಢ ೨ ನೆಂಬ ಮಹಾಕವಿಯು, ಪಾಲಿಭಾಷೆಯ ಜಾತಕದ ಕಥೆಗಳ ಆಧಾರದಮೇಲೆ ಭೂತಭಾಷೆಗೆ ತನ್ನಿಂದ ಪರಿವರಿಸಲ್ಪಟ್ಟ ೯೯ ವೃಹತ್ಕಥಾ , ಎಂಬ ಗ್ರಂಥದಲ್ಲಿ, ಸ್ವಧರ್ಮವನ್ನು ಕಾಪಾಡಿಕೊಳ್ಳುದಕ್ಕಾಗಿ ರಾಜನೂ ಉನ್ಮಾದಯನ್ತಿಯೂ ಮತ್ತು ಸೇನಾಪತಿಯೆ ಮುಂತಾದವರೂ ಪ್ರಾಣಗಳನ್ನು ತ್ಯಾಗಮಾಡಿಕೊಂಡರೆಂಬ ವಿಶೇಷಾಂಶಗಳನ್ನು ಸೇರಿಸಿದನೆಂದು ತಿಳಿದುಬರುವುದು, ಬಳಿಕ ೧೧ ನೆಯ ಶತಮಾನದಲ್ಲಿ ಕಾಶ್ಮೀರದೇಶಕ್ಕೆ ಅರಸನಾಗಿರ್ದ ೯೯ ಅನಂತದೇವ ,, ನ ಆಸ್ಕಾನಪಡಿತನಾದ ೨ ನೆಯ 66 ಕ್ಷೇಮೇಂದ್ರ » ನಂಬ ಬ್ರಾಹ್ಮಣಕವಿಯು, ಗುಣ ಕ್ಯನ ವೃಹತ್ಕಥೆಯ ಆಧಾರದ ಮೇಲೆ ತನ್ನಿಂದ ಸಂಸ್ಕೃತದಲ್ಲಿ ರಚಿಸಲ್ಪಟ್ಟ ೬೯ ಬೃಹತ್ರ ಥಾಮಂಜರೀ , ಎಂಬ ಗ್ರಂಥದಲ್ಲಿ ಯ ಇದೇ ಕಥೆಯನ್ನು ಹೇಳಿರುವನು ಬಳಿಕ ಈ ಬೃಹತ್ಕಥಾಮಂಜರಿಯ ಆಧಾರದಮೇಲೆ ಅದೇ ಕಾಶ್ಮೀರಾಧಿಪನಾದ ಅನಂತ ಕಾಜನ ಕಾಲಾನಂತರ ಅವನ ಧರ್ಮಪ್ರಯಾದ 66 ಸೂರ್ಯನ ,, ಎಂಬುವಳ ಪ್ರೋತ್ಸಾಹದಮೇಲೆ ಅದೇ ಆಸ್ಥಾನಪಡಿತನಾಗಿರ್ದ ರಾಮಭಟ್ಟನ ಮಗನಾದ