ಪುಟ:ಧರ್ಮಸಾಮ್ರಾಜ್ಯಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ಬೋಧಿಸುವ ಪುರಾಣಗಳಲ್ಲಿ ಯೂ - ವಿಶ್ವ ಶಾಸನಶಾಲಿನಿ ” ಎಂಬ ಬೌದ್ಧರ ಜಾತಕೇತಿ ಹಾಸದಲ್ಲಿಯೂ ವೇದದಲ್ಲಿಯೂ ಹೇಳಲ್ಪಟ್ಟಿದೆ ಎಂದು ಪ್ರತೀತಿಯು "] ಹೀಗೆ ಹೇಳಿದುದರಿಂದ ಕಾಲಕ್ರಮಕ್ಕನುಸಾರವಾಗಿ, ಈ ಕಥೆಯನ್ನು ಬೌದ್ಧ ರು ವೇದದ ಐತಿಹ್ಯಗಳಿಂದಲೂ ಬಳಿಕ ಆಧುನಿಕರದ ಬ್ರಾಹ್ಮಣಕವಿಗಳು ಬೌದ್ದರ ಇತಿಹಾಸಗಳಿಂದಲೂ, ಸಂಗ್ರಹಿಸಿದರೆಂದು ವ್ಯಕ್ತವಾಗುವದು. ನಾನು ಈ ಆಧಾರಗಳನ್ನೆಲ್ಲಾ ಅವಲಂಬಿಸಿ ಈ ಗ್ರಂಥವನ್ನು ಎಮ್ಮ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ವಿರಚಿಸಿರುವೆನು, ಆದರೆ, ಒಂದೊಂದು ಗ್ರಂಥದಲ್ಲಿ ಒಂದೆಂ ದುವಿಧವಾದ ಹೆಸರೂ ಒಂದೊಂದುವಿಧವಾದ ಅಭಿಪ್ರಾಯವೂ ಸೂಚಿಸಿರ್ದುದರಿಂದ ಆ ಗ್ರಂಥಗಳನ್ನೆಲ್ಲ ಚೆನ್ನಾಗಿ ಪರಿಶೀಲಿಸಿ, ಪರಸ್ಪರ ಇರ್ದ ವಿರೋಧಾಂಶಗಳನ್ನೆಲ್ಲ ತೆಗೆದು ಹಾಕಿ, ಪೂರ್ವೇತಿಹಾಸಗಳ ಆಧಾರಗಳಮೇಲೆಯೇ ವಿಶೇಷ ಗಮನವನ್ನಿತ್ತು, ಈಗಿನಜನ ರಿಗೆ ಅನುಕೂಲಿಸುವಂತ ರಚಿಸಿರುವೆನು. ಇದರಲ್ಲಿ ರುವ ಅನೇಕ ಸಂಸ್ಕೃತಶೆ ಕಗ ಈ ಕಲವು ಗದ್ಯಗಳೂ ಮೂಲಗ್ರಂಥದಿಂದ ಸಂಗ್ರಹಿಸಲ್ಪಟ್ಟವು, ಉಳಿದವುಗಳನ್ನೆಲ್ಲ ಕಥೆಯ ಸಂದರ್ಭಕ್ಕೆ ಅನುಕೂಲಿಸುವಂತೆ ನಾನೇ ರಚಿಸಿ ಸರಿಸಿರುವೆನು, ಮತ್ತು ಕೆಲವುಕಡೆಗಳಲ್ಲಿ, ಪಾಳಿಭಾಷೆಯಲ್ಲಿಯೂ ಮತ್ತು ಸಂಸ್ಕೃತದಲ್ಲಿಯೂ ಇರ್ದ ಕಥಾ ಸಂದರ್ಭದ ಗದ್ಯಭಾಗಗಳನ್ನು ಶ್ಲೋಕಕ್ಕೆ ಪರಿವರ್ತಿಸಿರುವೆನು ಇನ್ನು ಕೆಲವುಕಡೆಗೆ ಇಲ್ಲಿ ಕಥಾಭಾಗವನ್ನು ವಿಸ್ತರಿಸಿಯೂ ಇರುವೆನು, ಮತ್ತು ಈ ಶ್ಲೋಕಗಳಿಗೆಲ್ಲ ಪದಶಃ ಅರ್ಥವನ್ನು ಬರೆದರೆ ವಾಚಕರಿಗೆ ಸುಲಭವಾಗಿ ಬೋಧೆಯಾಗದೆ ಕವಿಯ ಆಶಯವೂ ವ್ಯಕ್ತವಾಗದೆ ಹೋಗುವುದೆಂಬ ಶಂಕೆಯಿಂದ, ಪ್ರತಿಯೊಂದು ಶ್ಲೋಕಕ್ಕೂ ತಾತ್ಪರ್ಯ ರ್ಥವನ್ನು ಮಾತ್ರ ಬರೆದು, ಆ ತಾತ್ಪರ್ಯಭಾಗಗಳನ್ನು °: [ypಎಂಬ ಆವರಣಚಿಹ್ನೆಗಳೂ ಳಗೆ ಸೇರಿಸಿ, ಆ ಶ್ಲೋಕಸಂಖ್ಯೆಯನ್ನೂ ಅಲ್ಲೇ ಕೊಟ್ಟಿರುವೆನಲ್ಲದೆ, ಆ ಮೂಲ ಶ್ಲೋಕಗಳನ್ನೂ ಆಯಾ ಪುಟಗಳ ತಳಭಾಗದಲ್ಲಿಯ: ಸಣ್ಣ ಅಕ್ಷರಗಳಲ್ಲಿ ಬರೆದು ಸೇರಿಸಿರುವೆನು. ಆದರೆ ಈ ಕಥೆಯ ಮಹಿಮೆಯು ಏನ್ನನ್ನು ಬಹು ಪ್ರಯಾಸಕ್ಕೆ ಗುರಿಮಾ ಡಿತು. ಅದೇನೆಂದರೆ ನಾನು ಈಗ್ಗೆ ೨-೩ ವರುಷಗಳ ಕೆಳಗೆ ಕಾಶ್ಮೀರ ಮತ್ತು 'ಟಿಬೆಟ್, ದೇಶಗಳ ಗ್ರಂಥಗಳ ಉನ್ನತಿಯನ್ನು ಕುರಿತು, ಸಿಸಿಲ್ ಬೆಂಡಾಲ್” ಎಂಬ ಹಿರಶ್ಯ ಪಂಡಿತನ, ಮತ್ತು ನಿಮ್ಮ ಕಲ್ಕತ್ತಾ ಪಟ್ಟಣದಲ್ಲಿ ರ್ದ ಪಂಡಿತ್ತಮರಾದ