ಪುಟ:ಧರ್ಮಸಾಮ್ರಾಜ್ಯಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ 11 ಉಂಟಾಗಬೇಕಾದ ಪ್ರಯೋಜನವನ್ನೂ, ಅವುಗಳ ಮುಖ್ಯೋದ್ದೇಶಗಳನ್ನೂ, ಅದರಂ ತಾಚರಿಸುವುದರಿಂದ ರಾಜರಿಗೂ ರಾಷ್ಟ್ರ ಪ್ರಜೆಗಳಿಗೂ ಲಭಿಸುವ ಸುಖಾದಾಯ ಗಳನ್ನೂ ವ್ಯಕ್ತಮಾಡಬೇಕೆಂಬ ಮುಖ್ಯೋದ್ದೇಶದಿಂದ ಈ ಇತಿಹಾಸವನ್ನು ಮೊದಲು ನಾಟಕರೂಪವಾಗಿ ರಚಿಸಿದನು. ಅಷ್ಟರಲ್ಲಿಯೇ ಎಮ್ಮನ್ನಾಳುವ ಮಹಾಸ್ವಾಮಿಯವರಾದ « ಶ್ರೀಕೃಷ್ಣರಾಜ ಸಾರ್ವಭೌಮ್ಮ ರವರ ಧರ್ಮಸಂಸ್ಥಾನದ ವಿದ್ಯಾಶಾಖೆಯ ಅಧ್ಯಕ್ಷರಾಗಿಯೂ ವಿದ್ಯಾವಾರಿಧಿಯಾಗಿಯೂ, ಇರುವ 14 ಶ್ರೀಮಾನ್‌ ಎಂ, ಶ್ಯಾಮರಾವ್ ಎಂ, ಎ' ಯ ವರು ಮತ್ತು ಎಮ್ಮ ರಾಜಸಭಾಭೂಷಣ-ದಿವಾನ್ ಬಹದ್ದೂರ್-ಶ್ರೀಮಾನ್ ಕೆ ಪಿ ಪುಟ್ಟಣ್ಣ ಶ್ರೇಷ್ಠಿ , ಯವರು, ಇವರೇ ಮುಂತಾದ ವಿದ್ಯಾಭಿಮಾನಿಗಳು ಈ ಇತಿಹಾಸದ ನೀತಿಗಳನ್ನೂ ತತ್ವಗಳನ್ನು ಕೇಳಿ ಸಂತುಷ್ಟರಾಗಿ, ಇದನ್ನು ವಿದ್ಯಾರ್ಥಿ ಗಳೂ ವಿದ್ಯಾರ್ಥಿನಿಯರೂ ಮತ್ತು ಇತರ ಜನರೂ ಸುಲಭವಾಗಿ ಗ್ರಹಣಮಾಡಲು ಅನುಕ ನಿಲಿಸುವಂತ ಗದ್ಯರೂಪವಾಗಿಯೂ ಪ್ರಶ್ನೆತ್ತರವಿಶಿಷ್ಟವಾಗಿಯೂ ರಚಿಸಿದರೆ, ಬಹು ಉಪಯೋಗಕರವಾಗಿರುವುದೆಂದು ಸೂಚಿಸಿದುದರಿಂದ, ಅವರ ಅಭಿಪ್ರಾಯದಂ ತೆಯ ಗದ್ಯರೂಪವಾಗಿ ರಚಿಸಿದೆನು, ಆದರೆ ಈ ಇತಿಹಾಸವನ್ನು ರೂಪಕವಾಗಿ ಪ್ರದ ರ್ಶಿಸಿದುದರಿಂದ ಅನೇಕ ದೇಶಗಳಲ್ಲಿ ರಾಜಪ್ರಜೆಗಳಿಗೆ ಪರಸ್ಪರ ಮೈತ್ರೀವಿಶ್ವಾಸಗಳುಂ ಟಾಗಿ ಶಾಂತಿರಸವ ನೆಲೆಗೊಂಡಿದುದರಿಂದ, ಈಗಲೂ ಅದರಂತೆಯೇ' ಎನ್ನ ದೇಶ ದಲ್ಲಿಯೂ ಸರ್ವರೂ ಸನ್ಮಾರ್ಗಾವಲಂಬಿಗಳಾಗಲೆಂದು, ನಾಟಕದ ಅಭಿನಯಕ್ಕೆ ಅನು ಕೂಲಿಸುವಂತೆಯೂ ಅಂಗಸಂಧಿಗಳ ಕ್ರಮದಿಂದ ವಿಂಗಡಿಸಿರುವೆನು. ಈ ಗ್ರಂಥದ ಗುಣದೋಷಗಳ ವಿಷಯದಲ್ಲಿ ನಾನೇ ಪ್ರಸ್ತಾವಿಸುವುದು ಯುಕ್ತ ವಲ್ಲ ವಾದುದರಿಂದ ಆ ಕಾರ್ಯವನ್ನು ಈ ಗ್ರಂಥಕ್ಕೆ ಪ್ರೌಢತರವಾದ « ಅವತಾರಿಕೆ, ಯನ್ನು ಬರೆಯುವದರದ್ವಾರಾ ತಮ್ಮಲ್ಲಿ ಸಹಜವೆನಿಸಿದ ವಿದ್ಯಾಭಿಮಾನವನ್ನೂ ಸಮದ ರ್ಶಿತ್ವವನ್ನೂ ಔದಾರ್ಯವನ್ನೂ ತೋರ್ಪಡಿಸಿದ ಎಮ್ಮ ಧರ್ಮಸಂಸ್ಥಾನದ c« ಚೀಫ್ ಇಂಜನಿಯರಾದ ಶ್ರೀಮಾನ್ ಕರ್ಪೂರ್ ಶ್ರೀನಿವಾಸರಾವ್ ಬಿ, ಎಸ್, ಸಿ, ಎಲ್‌, ಸಿ.ಇ, ಯವರಿಗೂ ಮತ್ತು ಪಂಡಿತರಾದ ವಾಚಕರಿಗೂ ಬಿಟ್ಟಿರುವನು. ಆದರೆ ಮುಂದೆ ಬರೆದಿರುವ ಅರ್ಪಣಶ್ಲೋಕದ ಅಭಿಪ್ರಾಯದಂತ-- (೧) ರಾಜರಾದವರು-ತಂತಮ್ಮ ಪ್ರಜೆಗಳನ್ನು ತಂತಮ್ಮ ಪುತ್ರವರ್ಗದಂತ ಪ್ರೀತಿಮಮತಗಳಿಂದ ಕಾಪಾಡುವವರಾಗಿಯೂ, ಸ್ವಜನ ಪರಜನರಲ್ಲಿ ಭೇದವನ್ನೆಣಿಸ