ಪುಟ:ಧರ್ಮಸಾಮ್ರಾಜ್ಯಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ 13 ತಾದ ವಿಪತ್ತುಗಳುಂಟಾದಾಗ, ರಾಷ್ಟ್ರ ಪಿತನಾದ ರಾಜನಿಗೆ ಅಂಕಮಾಡಿ ಆ ದುಃಖ ಗಳನ್ನು ನಿವಾರಣೆಮಾಡಿಸುತ್ತಲೂ, ರಾಜಕಾರ್ಯಗಳಲ್ಲಿ ತಮ್ಮ ಕೌಶಲ್ಯವನ್ನೂ ದಕ್ಷತೆಯನ್ನೂ ತೋರಿಸಿ ಅವುಗಳನ್ನು ಸರ್ವಪ್ರಯತ್ನದಿಂದಲೂ ಸಾಫಲ್ಯಗೊಳಿಸು ತಲೂ, ರಾಜನಿಗೇ ಆಗಲಿ ರಾಷ್ಟ್ರಕ್ಕೆಆಗಲಿ ವಿಪತ್ತುಗಳುಂಟಾದಾಗ ತಂತಮ್ಮ ತನುಧನಪ್ರಾಣಗಳನ್ನಾದರೂ ಹಿಂತೆಗೆಯದೆ ಅರ್ಪಿಸಿ ಅಂತಹ ವಿಪತ್ತುಗಳನ್ನು ಶಮನ ಮಾಡಲು ಪರಮೋತ್ಸಾಹವುಳ್ಳವರಾಗುತ್ತಲೂ ವರ್ತಿಸಬೇಕೆಂದೂ; (ಶ) ಮತ್ತಾ ಬಾಲಬಾಲಿಕೆಯರು-ತಂತಮ್ಮ ತಂದೆತಾಯ ಳಿಗೂ ಗುರುಹಿರಿ ಯರಿಗೂ ವಿಧೇಯರಾಗಿಯ, ವಿದ್ಯೆಯನ್ನಧಿಕರಿಸುವುದರಲ್ಲಿ ಆದರವಳ್ಳವರಾಗಿಯೂ, ಸ್ವಧರ್ಮ ಸ್ವಮತ ಸ್ವಭಾಷೆಗಳಲ್ಲಿ ಸಂಪೂರ್ಣವಾದ ಆಸಕ್ತಿಯನ್ನು ಹೊಂದಿ ಅವುಗಳ ತತ್ವವನ್ನು ಮೊದಲು ತಿಳಿದುಕೊಂಡು, ಬಳಿಕ ಇತರ ಭಾಷೆಗಳ ಮತಗಳ ಧರ್ಮಗಳ ತತ್ವಗಳನ್ನು ತಿಳಿಯುವರಾಗಿಯೂ, ಡಂಭ, ಅಹಂಕಾರ, ಬಾಹ್ಯಾಡಂಬರ, ಸ್ವಕೀಯ ದಲ್ಲಿ ಮುಂದಾದರ ಪರಕೀಯದಲ್ಲಿ ಅತ್ಯಾದರ ಮುಂತಾದ ದುರ್ಗುಣಗಳನ್ನು ತ್ಯಜಿಸಿ ಸನಾತನಾರ್ಯಧರ್ಮಕ್ಕೆ ವಿಹಿತವಾದ ಸದಾಚಾರ ಸಚೀಲಗಳುಳ್ಳವರಾಗಬೇಕಂದೂ ; (೬) ಮತ್ತಾ ತಂದತಾಯಳು ತಮ್ಮ ಮಕ್ಕಳಿಗೆ ವಿವಾಹವನ್ನು ಮಾಡುವ ವಿಷಯದಲ್ಲಿ ತಮ್ಮ ಅಭಿಪ್ರಾಯಗಳನ್ನೇ ಮುಖ್ಯವೆಂದು ಭಾವಿಸದೆ, ವಧೂವರರ ಪರ ಸ್ಪರ ಸಮ್ಮತಿಯನ್ನೂ ಅವರಾಗವನ್ನೂ ಚೆನ್ನಾಗಿ ತಿಳಿದು ದಾಂಪತ್ಯಾನುಕೂಲ್ಯವು ವ್ಯಕ್ತ ವಾದಲ್ಲಿ ಆಗ್ಗೆ ವಿವಾಹವನ್ನು ಮಾಡಬೇಕೇ ಹೊರತು - ಅನಿಚ್ಚಾ ವಿವಾಹಗಳನ್ನೂ ಬಾಲ್ಯವಿವಾಹಗಳನ್ನೂ ಅಜ್ಞ ವಿವಾಹಗಳನ್ನೂ ನೆರವೇರಿಸಿದರೆ-ಆ ದಂಪತಿಗಳಲ್ಲಿ ಪರ ಸ್ಥರಾನುರಾಗವು ನೆಲೆಗೊಳ್ಳದ, ಆ ಸಂಸಾರವು ಅಸಾರವಾಗಿಯೂ ದುಃಖಮಯವಾ ಗಿಯ ಪರಿಣಮಿಸಿ, ಕೊನೆಗೆ ಮಹಾಪ್ರಮಾದಗಳೂ ಅನರ್ಥಗಳೂ ಪ್ರಾಪ್ತವಾಗುವುವೆಂ ಬಂಶವನ್ನು ತಿಳಿದು, ಅಂತಹ ಅನಿವೇಕಕಾರ್ಯಗಳನ್ನು ನೆರವೇರಿಸಲಾಗದೆಂದೂ, (೭) ಮತ್ತಾ, ರಾಜರೇ ಮುಂತಾದ ಸಮಸ್ತ ಜನರೂ-ಆಸ್ತಿಕರಾಗಿಯ ಪಾಪಭೀರುಗಳಾಗಿಯೂ ಸ್ವಧರ್ಮ ಸ್ವಕರ್ಮನಿರತರಾಗಿಯೂ ಪರಲೋಕವೇತ್ತರಾ ಗಿಯೂ ಪರಸ್ಪರಾನುರಾಗಮೈತ್ರಿಗಳುಳ್ಳವರಾಗಿಯ ಸ್ವ ಪರಹಿತಕಾರ್ಯಗಳಲ್ಲಿ ದಕ್ಷ ರಾಗಿಯ, ಸಿದ್ದು ಆಶ್ಚರ್ಯಸಂಪನ್ನರಾಗಿಯೂ ಆಗಬೇಕೆಂದೂ, ಈ ಉಪೋದ್ಘಾತದ ದ್ವಾರಾ ಪ್ರಾರ್ಥಿಸುವೆನು, ಎ' ವಿಜ್ಞಾಪನೆಯಂತ ಜನರೆಲ್ಲರೂ ಆಚರಿಸಿದರೆ, ಲೋಕದ ದುಃಖಗಳೆಲ್ಲವೂ