ಪುಟ:ಧರ್ಮಸಾಮ್ರಾಜ್ಯಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ಮಹಾರಾಜಾಕಾಲೇಜ್ ಸೀನಿಯ‌'ಕರ್ಣಾಟಕ ಪಂಡಿತ ಪಿ ಆರ್. ಕರಿಬಸವಶಾಸ್ತ್ರಿಗಳ ಅಭಿಪ್ರಾಯ. .....ಕಾ". ಬ್ರಹ್ಮಶ್ರೀ || ಬದರೆ ಅಶ್ವತ್ಥನಾರಾಯಣಶಾಸ್ತ್ರಿಗಳಿಂದ ರಚಿಸ ಲ್ಪಟ್ಟ : ಧರ ಸಾಮ್ರಾಜ್ಯ ” ಅಥವಾ “ ಜವಾನರುನ್ನ ತಿಗೆ ಮೂಲಾ ಧಾರ ವೆಂಬ ಗ್ರಂಥವನ್ನು ನಾನು ಆಮೂಲಾಗ್ರವಾಗಿ ನೋಡಿದೆನು, ಇದು ಕರ್ಣಾಟಕ ಗದ್ಯ ಪ್ರಬಂಧವಾಗಿಯ, ಚಾತಕವೆಂಬ ಬೌದ್ಧ ಗ್ರಂಥದಿಂದ ಸಂಗ್ರಹಿಸಲ್ಪಟ್ಟ ಕಥೆ ಯೋಗಿಯ, ಲಲಿತಪದಪ್ರಯೋಗ ವುಳ್ಳು ದಾಗಿಯ, ಅಪೂರ್ವಪ್ರೌಢತರಸಂವಿಧಾನಗರ್ಭಿತವಾಗಿಯೂ, ಶೃಂಗಾರ-ಕರುಣ-ಅದ್ಭುತ ಶಾಂತರಸಭರಿವಾಗಿಯ, ಇರುವುದ ರಿಂದ-ಪಾಠಕರಿಗೆ ಕೇವಲ ಕೌತುಕಾವಹವಾಗಿರುವುದಲ್ಲದೆ, ಮುಖ್ಯ ವಾಗಿ ಪ್ರಜೆಗಳಿಗೆ ರಾಜಭಕ್ತಿ, ರಾಜರಿಗೆ ಪ್ರಚಾನುರಾಗ, ಸ್ತ್ರೀಯರಿಗೆ ಪಾತಿವ್ರತ್ಯ, ಮನುಷ್ಯ ಸಾಮಾನ್ಯಕ್ಕಿರಬೇಕಾತಿ ಪರಸ್ಪರಪ್ರೀತಿ ಜಿತೇಂ ಪ್ರಿಯತ್ವ ಅಹಿಂಸೆ ಪರೋಪಕಾರ ಆಸ್ತಿ ಕಬುದ್ದಿ ಸೀ ತಿ ಮುಂತಾದ ಧಮ್ಮಗಳನ್ನೂ ದುಷ್ಟರಿಗಾಗುವದುಗ್ಗತಿಯನ್ನೂ, ಬೋಧಿಸುವುದರಿಂದಧಮ್ಮ ಸಾಮ್ರಾಜ್ಯವೆಂಬ ಸಾಗೃಕನಾವವುಳ್ಳು ದಾಗಿದೆ. ಮುಖ್ಯವಾಗಿ ಮನುಷ್ಯರಿಗೆ ಅವಶ್ಯಕವಾಗಿರುವ ಧಮ್ಮಗಳೆಲ್ಲವನ್ನೂ ಸದೃಷ್ಟಾಂತವಾಗಿ ಪ್ರತಿಪಾದಿಸುವ ಈ ಗ್ರಂಥವನ್ನು ಓದಿದವರಿಗೆ ಧರಾಧಮ್ಮಸ್ವರೂಪಚ್ಛಾ ನವು ಹೃದಯದಲ್ಲಿ ಅಷ್ಟೊತ್ತಿದಂತೆ ನೆಲೆಯಾಗಿನಿಂತು, ಧರ್ಮಮಾರ್ಗ ಪ್ರವೃತ್ತಿಯ ಅಧರಮಾರ್ಗನಿವೃತ್ತಿಯ ಉಂಟಾಗವುದರಲ್ಲಿ ಯಾವ ಸಂದೇಶವೂ ಇಲ್ಲ. ಈ ಪುಸ್ತಕವನ್ನು ಸರ್ಕಾರದವರು ಕನ್ನಡ ಪ್ರೇಮ ರಿಸ್ಕೂಲಿನ ವಿದ್ಯಾಕ್ಸಿಗಳಿಗೆ ಓದುವುದಕ್ಕಾಗಿ ನೇಮಿಸುತ್ತಾ ಬಂದರೆ, ಬಾಲಕರಿಗೆ ಬಾಲ್ಯಾದಾರಭ್ಯ ಧರಾಧಕ್ಕೆ ಸಂಸ್ಕಾರವು ವೃದ್ಧಿ ಹೊಂದಿ ರಾಜ್ಯಕ್ಕೆ ಸುಕ್ಷೇಮವುಂಟಾಗುವುದೆಂದು ನಂಬುತ್ತೇನೆ.