ಪುಟ:ಧರ್ಮಸಾಮ್ರಾಜ್ಯಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಮೊದಲನಯ ಅಂಗ V\ , 11 st $4 Y + MSYYYY 1�\ \ \\VVy << ಅಯ್ಯೋ! ಈಗೇನನ್ನು ಮಾಡಲಿ! ಈ ಗುರುಗಳ ಮಾತು ಸುಳ್ಳಾಗದು! ಇದುವರೆಗೂ ದಿಕ್ಷಾಲರುಗಳಿಂದಲೂ ತ್ರಿಮೂರ್ತಿಗಳಿಂದಲೂ ಸೇವಿತ ವಾದ ಈ ದೇವರಾಜ್ಯಕ್ಕೆ ಒಡೆಯನೆಂಬ ಬಿರುದನ್ನು ಪಡೆದಿರ್ದೆನು! ಭೂಲೋಕದ ಹವಿರ್ಭಾಗಪೂರ್ವಕವಾದ ಮರ್ಯಾದೆಗಳೆಲ್ಲವೂ ಮೊ ದಲು ಎನಗೇ ಅರ್ಪಿಸಲ್ಪಡುತಿರ್ದುವು, ಇಂತಹ ವೈಭವವನ್ನು ಅನ್ಯನಿಗೆ ಎಂತು ಒಪ್ಪಿಸಿಬಿಡಲಿ ?” ಈರೀತಿಯಾಗಿ ದೇವೇಂದ್ರನಾಡಿದ ಸಖೇದಭಾ ಷಣವನ್ನು ಕೇಳಿದ ಬೃಹಸ್ಪತಿಯು ಅವನನ್ನು ಕುರಿತು ವಿನಯದಿಂದ ಇಂತೆಂದನು:-ಶಕ್ರನೆ ! ನೀನೀರೀತಿಯಾಗಿ ಅನ್ಯರಲ್ಲಿ ಅಸೂಯೆಯನ್ನು ತಾಳಬಾರದು; ಅರ್ಹತೆಯನ್ನು ಪಡೆದವರಿಗೆ ತಕ್ಕಂತೆ ಗೌರವವಂ ಕೊಡು ವುದು ನಿನ್ನಂತಹ ವಿಚಕ್ಷಣರಿಗೆ ಕರ್ತವ್ಯವು; ಅದಲ್ಲದೆ ಇದನ್ನು ಕೇಳು [೩, ತಾ|| ಅಗಲುವಿಕೆಯನ್ನು ೦ಟುಮಾಡದೇ ಇರುವ ಕೂಡು ವಿಕೆಯ, ವಿಪತ್ಪರಂಪರೆಗೆ ಒಳಗಾಗದ ಸಂಪದವೂ ಈ ಜಗತ್ತಿನಲ್ಲಿ ಆವುದಿರುವುದು ? ಈಪ್ರಕಾರ ಜಗತ್ತಿನ ಲಕ್ಷಣವು ಅತಿ ಚಂಚಲವಾ ಗಿರುವಲ್ಲಿ ನಿನ್ನೀ ದುಃಖವು ಶುದ್ದ ಅವಿವೇಕವೇ ಆಗಿರುವುದಲ್ಲವೆ? ಆದಕಾರಣ ಈ ದುಃಖವನ್ನೂ ಅಸೂಯೆಯನ್ನೂ ತ್ಯಜಿಸಿ, ಪರರ ಶ್ರೇಯಸ್ಸಿನ ವಿಷಯದಲ್ಲಿ ಸಂತೋಷಿಸುವ ಗುಣವನ್ನು ಅವಲಂಬಿಸು.” ಇತ್ತಲಾ ಯಮನು ಬೃಹಸ್ಪತಿಯ ಮಾತನ್ನು ಕೇಳಿ, ತನ್ನಾ ಸನ ದಿಂದೆದ್ದು ಕೋಪದಿಂದ ಇಂತೆಂದನು:_<ಸಹಸ್ರಾಕ್ಷನೇ! ನೀನೀ ಗುರು ಗಳ ಮಾತನ್ನು ನಿಜವೆಂದು ನಂಬಿ ಭಯಪಡಬೇಡ ; ಒಂದುವೇಳೆ ಅದು ನಿಜವಾಗಿರುವ ಪಕ್ಷಕ್ಕೆ ಎನ್ನ ಕರಣಿಕರಾದ ಚಿತ್ರಗುಪ್ತರನ್ನು ಕಳು ಹಿಸಿ ಭೂಲೋಕದಲ್ಲಿರುವ ಸಮಸ್ತ ರಾಜರಿಂದಲೂ ಆಚರಿಸಲ್ಪಡುವ ಪಾಪಪುಣ್ಯಗಳನ್ನು ಧರ್ಮಪುಸ್ತಕದಲ್ಲಿ ಬರೆದುಕೊಂಡುಬರುವಂತೆ ಆಜ್ಞಾ ಕಸ್ಸಮ್ಮ ಯೋಗೋಸ್ತಿ ವಿಯೋಗಶೂನ್ಯಃ ಕಾಸ್ಸಮೃದಸ್ಸ ವಿಪಹೀನಾಃ| ಜಗಕ್ಷ್ಯವೃತ್ತವಂಚಂಚಲಾಯಾಮಪ್ರತ್ಯಕ್ಷಂ ಖಲು ಈ sತ್ರ ದುಃಖಮ್ 4