ಪುಟ:ಧರ್ಮಸಾಮ್ರಾಜ್ಯಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯಮ್ (ಸಂಧಿ

  • \ YYYY V V+ \v 1 \ \r\ \ \

/VVy ಪಿಸುವೆನು; ಈ ಗುರುಗಳು ಹೇಳಿದಂತಹ ಭೂಪಾಲನು ಮರ್ತ್ಯನಾಗಿರು ವುದರಿಂದ ಪಾಪಕಾರ್ಯವನ್ನು ಮಾಡಲೇ ಬೇಕಾಗುವುದು ! ಅಗ್ಗೆ ಅವ ನನ್ನು ಇಲ್ಲಿಗೆ ಎಳೆತಂದು ನಿನ್ನೆದುರಿನಲ್ಲಿಯೇ ಅವನಿಗೆ ವಿವಿಧವಾದ ಹಿಂಸೆ ಗಳನ್ನು ಕೊಡುವೆನು; ಈ ಕಾರ್ಯದಲ್ಲಿ ಎನಗೆ ಮನ್ಮಥನೂ ಸಹಾ ಯಕನಾಗುವನು.” ಇದಕ್ಕನುಗುಣವಾಗಿ ಮನ್ಮಥನು ಉತ್ಸಾಹದಿಂದ ಎದ್ದು ನಿಂತು ಪೌರುಷದಿಂದ ಇಂತೆಂದನು: “ಶತಕೃತ ವೇ! ಈ ಯಮನು ಹೇಳಿ ದಂತೆಯೇ ಮದ, ಮೋಹ, ಕ್ರೋಧ, ಏಸ್ಕೃತಿ, ಅವಿವೇಕ ಮುಂತಾದ ಎನ್ನ ಪರಿವಾರವನ್ನು ಭೂಲೋಕಕ್ಕೆ ಕಳುಹಿ, ಪ್ರತಿಯೊಬ್ಬ ದೇಶಾಧಿಪ ನನ್ನೂ ಅವನವನ ಪ್ರಜೆಗಳನ್ನೂ ವ್ಯಾಪಿಸಿ ಪಾಪಕಾರ್ಯಗಳನ್ನು ಮಾಡುವಂತೆಸಗುವೆನು. '

  • ಇವನಂತೆಯೇ ಯಕ್ಷೇಶ್ವರನು ತನ್ನಾ ಸನದಿಂದೆದ್ದು ನಿಂತು ಅಟ್ಟ ಹಾಸದಿಂದ ಇಂತೆಂದನು: “ಪಾಕಶಾಸನನೇ! ಇವರ ಸಹಾಯಾರ್ಥವಾಗಿ ಎನ್ನ ಪರಿವಾರದವರಾದ ರಾಜಯಕ್ಷ್ಯ, ಸಾಂಕ್ರಾಮಿಕ ಮುಂತಾದ ರೋಗಸಮೂಹವನ್ನು ಈಗಲೇ ಕಳುಹುವೆನು.”

ಬಳಿಕ ದೇವೇಂದ್ರನು ಇವರುಗಳಾಡಿದ ಅನುಕಂಪಾಕ್ಷರಗಳನ್ನು ಕೇಳಿ ಸಂತುಷ್ಟನಾಗಿ ಇಂತೆಂದನು:- ಎನ್ನ ವಿಷಯದಲ್ಲಿ ನೀವು ತೋರಿದ ಕರುಣೆಗಾಗಿ ನಾನು ಸಂತುಷ್ಟನಾದೆನು; ನಿಮ್ಮಗಳ ಕಾರ್ಯ ಗಳಿಗೆ ಅನುಕೂಲವಾಗಿ ಪುಷ್ಕಲಾವರ್ತಾದಿ ಮೇಘಸಮೂಹವನ್ನು ಭೂಮಿಯಮೇಲೆ ಮಳೆಗರೆಯದಂತೆಸಗಿ, ಭೂಲೋಕದಲ್ಲೆಲ್ಲ ಅನಾವೃಷ್ಟಿ ಕ್ಷಾಮ, ದಾರಿದ್ರ ಮುಂತಾದುವನ್ನು ಉಂಟುಮಾಡುವೆನು, ನೀವು' ಗಳೀಗಲೇ, ನಿಂನಿಮ್ಮ ಕಾರ್ಯಗಳನ್ನು ಆಚರಿಸಲು ತೆರಳಿರಿ.” - ಈ ದುರಾಲೋಚನೆಯನ್ನು ಬೃಹಸ್ಪತಿಯು ತಿಳಿದು ಸಹಿಸಲಾರದೆ ವಿವಾದದಿಂದ ಇಂತೆಂದನು:- “ ಆಖಂಡಲನೇ ! ಇದು ಧರ್ಮವಲ್ಲ; ನೀವುಗಳೆಲ್ಲರೂ ಸೇರಿ ಆ ರಾಜನಿಗೆ ಹಾನಿಯಂ ಮಾಡಬೇಕೆಂದು ಪ್ರಯ