ಪುಟ:ಧರ್ಮಸಾಮ್ರಾಜ್ಯಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನಯ ಅಂಗ ತ್ನಿಸಿರ್ದರೂ ಅವನು ತನ್ನ ಧರ್ಮಕ್ಕೆ ಅನುಸಾರವಾಗಿ ನಡೆದು ಕೊಂ ಡುದೇ ಆದರೆ, ಆಗ್ಗೆ •ವುಗಳೆಲ್ಲ ರೂ ಪರಾಜಿತರಾಗುವುದು ಮಾತ್ರ ವಲ್ಲದೆ ಕೊನೆಗೆ ಅವನ ದಾಸರಾಗಬೇಕಾಗುವುದು.” - ಇದನ್ನು ಕೇಳಿದ ಯಮನು ಕೋಪಾವಿಷ್ಟನಾಗಿ ಇಂತೆಂದನು:- << ಪೂಜ್ಯರೇ ! ಇಲ್ಲದ ಊಹೆಗಳನ್ನು ಕಲ್ಪಿಸಿ ಎಮ್ಮ ಉತ್ಸಾಹಗಳಿಗೆ ಭಂಗ ವನ್ನುಂಟುಮಾಡಬೇಡಿರಿ. ” ಎಂದು ಹೇಳಿದಬಳಿಕ ಇಂದ್ರನ ಕಡೆಗೆ ತಿರುಗಿ “ ಬಿಡೌಜನೇ ನಡೆ ! ಹೋಗಿ ಮುಂದಣ ಕಾರ್ಯಗಳನ್ನು ತ್ವರೆ ಗೊಳಿಸೋಣ, ೨ ಈ ರೀತಿ ಪ್ರೋತ್ಸಾಹಿತನಾದ ಇಂದ್ರನು ಪರಮಾನಂದಭರಿತ ನಾಗಿ:_ ಹಾಗೇ ಆಗಲಿ ನಡೆಯಿರಿ ” ಎಂದು ಹೇಳಿ ಎಲ್ಲರೊಡನೆ ಹೊರಟುಹೋದನು. ಎರಡನೆಯ ಸಂಧಿ. GOOD VERsUS BAD. ಗುಣಪಾವತರಣವು ಇತ್ತಲಾ ಯಮನಿಂದ ಆಜ್ಞಪ್ತರಾಗಿ ಬಂದಿರ್ದ ಚಿತ್ರಗುಪ್ತರು ಭೂಲೋಕವನ್ನು ಪ್ರವೇಶಿಸಿ, ಅನೇಕ ದೇಶಗಳೊಳಗೆ ರಾಜಪ್ರಜೆಗಳು ಆಚರಿಸಿದ ಪಾಪಪುಣ್ಯ ಕಾರ್ಯಗಳನ್ನು ತಮ್ಮ ಧರ್ಮಪುಸ್ತಕದಲ್ಲಿ ಬರೆ ದುಕೊಂಡು ಹಾಗೆಯೇ ಮುಂದಣ ದೇಶಕ್ಕೆ ಹೋಗುವ ಉದ್ದೇಶದಿಂದ ಬರುತ್ತಾ ದಾರಿಯಲ್ಲಿ ಗುಪ್ತನು ಚಿತ್ರನನ್ನು ಕುರಿತು:_ಚಿತ್ರನೆ ! ನಾವಗಳು ಬರುವುದಕ್ಕೆ ಮುಂಚೆಯೇ ದೇವೇಂದ್ರನೇ ಮೊದಲಾದವರು ತಂತಮ್ಮ ಪ್ರಭಾವಗಳನ್ನು ಈ ಭೂಲೋಕದಲ್ಲೆಲ್ಲಾ ಪ್ರಯೋಗಿಸಿರುವುದ ರಿಂದ ನಾನಿದುವರೆಗೆ ಸಂಚರಿಸಿಬಂದ ದೇಶಗಳೊಳಗೆ ಎಲ್ಲಿನೋಡಿದರೆ ರೋಗ, ಕಾಮ, ದಾರಿದ್ರ,ಫೋರಯುದ್ಧ, ಪ್ರಜೋಪದ್ರವ ಮುಂತಾದ ವಿಪತ್ತುಗಳುಂಟಾಗಿರುವುವು ; ಆ ದೇಶಗಳ ರಾಜರುಗಳೂ ಅವರ