ಪುಟ:ಧರ್ಮಸಾಮ್ರಾಜ್ಯಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯಮ್ [ಸಂಧಿ wwwxrwx

ವರ ಪ್ರಜೆಗಳೂ ಸ್ವಧರ್ಮಸ್ವವೃತ್ತಿಗಳಿಂದ ಭ್ರಷ್ಟರಾಗಿರುವುದುಮಾತ್ರ ವಲ್ಲದೆ, ಎಲ್ಲೆಲ್ಲಿಯೂ ಹಾಹಾಕಾರವೇ ಪ್ರಾಪ್ತವಾಗಿಹುದು ; ಇವೆಲ್ಲ ವನ್ನೂ ಧರ್ಮಪುಸ್ತಕದಲ್ಲಿ ಬರೆದುಕೊಂಡೇ ಇರುವೆವು; ಇನ್ನು ಮುಂದಣ ದೇಶಗಳಿಗೆ ಹೋಗೋಣನಡೆ, ” ಎಂದು ಹೇಳಿದುದನ್ನು ಕೇಳೆ ಚಿತ್ರ ನು:- “ ಹಾಗೇ ಆಗಲಿ, ನಡೆ, ” ಎಂದು ಸ್ವಲ್ಪ ಮುಂದಕ್ಕೆ ಹೋಗಿ ಇದಿರುಗಡೆಯಲ್ಲಿ ಕಾಂದ ಶಿಬದೇಶದ ರಾಜಧಾನಿಯನ್ನು ನೋಡಿ ಪರಮಾಶ್ಚರ್ಯದಿಂದ ಇಂತೆಂದನು:_ ಗುಪ್ತನೇ ಇತ್ತ ನೋಡು; ಆವುದೋ ಒಂದು ಮಹಾರಾಜಧಾನಿಯು ಕಾಣ್ಣರುವುದುನಕ್ಷತ್ರಗಳಿಂದ ಅಲಂಕೃತವಾದ ಅಂತರಿಕ್ಷದಂತೆ ಎಲ್ಲಿ ನೋಡಿದರೂ ಥಳಥಳಿಸುತ್ತಿರುವ ದೀ ಪಾಂಶುಜಾಲಗಳಿಂದೊಡಗೂಡಿ ಪರಮದರ್ಶನೀಯವಾಗಿಹುದು ; ಮಧ್ಯ ರಾತ್ರಿಯಾಗಿರ್ದರೂ ಇಲ್ಲಿನ ಜನರು ಸೂರ್ಯಾಭಾವದಿಂದ ಆವ ಖೇದ. ವನ್ನೂ ಹೊಂದದೆ ಸ್ವಕಾರ್ಯಗಳೊಳಾಸಕ್ತರಾಗಿ ಸಂಚರಿಸುತ್ತಿಹರು ; ಮಹೋನ್ನ ತಗಳಾದ ನಾರಿಕೇಳಾಶ್ವತಾದಿವೃಕ್ಷತತಿಯಿಂದ ಪರಿವೇ ಪ್ರಿತವಾಗಿರ್ದರೂ ಈ ಪುರದ ರಾಜಮಂದಿರದ ಮತ್ತು ಇತರ ಅಧಿಕಾರಿ ಗಳ ಸೌಧಗಳ ಅಗ್ರಭಾಗದಲ್ಲಿ ಇಡಲ್ಪಟ್ಟಿರುವ ಸ್ವರ್ಣಮಯ ಕಲಶಗಳು. ಇತರದೇಶೀಯರಿಗೆ ತಮ್ಮ ರಾಜನ ಮತ್ತೂ ಅವನಧಿಕಾರಿಗಳ ಔನ್ನತ್ಯವನ್ನು ತೋರ್ಪಡಿಸುತ್ತಿರುವುವೋ ಎಂಬಂತೆ ಪ್ರಕಾಶಿಸುವುವು ; ಮುಖ್ಯವಾಗಿ ಈ ದೇಶಾಧಿಪನು ಧರ್ಮಪ್ರಿಯನಾಗಿರಬೇಕೆಂದು ತೋರುವ್ರದು ; ಇಲ್ಲವಾದರೆ ಈ ವಿಭವೈಶ್ವರ್ಯಗಳೆಲ್ಲಿಂದ ಲಭಿಸುವುವು ??? - ಇದನ್ನು ಕೇಳಿದ ಗುಪ್ತನು ತಾನೂ ಅ ಪುರವನ್ನು ನೋಡಿದಬಳಿಕ ಸಂಶಯದಿಂದ ಈರೀತಿ ಹೇಳಿದನು:_ ಚಿತ್ರಗುಪ್ತನೇ! ಹೀಗೆ ಆತುರ ವಾಗಿ ನಿರ್ಧರಿಸದಿರು ; ಏಕೆಂದರೆ [೪, ತಾ|| (ನಿಜವಾಗಿಯ) ಸಾಧುವಾದ ವಸ್ತುವು ಒಂದು ವೇಳೆ (ಹೊರಗೆ) ಅಯೋಗ್ಯವಾಗಿಯ, ಮತ್ತೊಂದುವಸ್ತುವು (ಒಳಗೆ) ಶ್ಲೋ| ಅಯುಕ್ತವತ್ಯಾಧ್ವಪಿ ಕಿಂಚಿದ'ಕ್ಷತೇ ಪ್ರಕಾಶತೇ೭ಸಾಧ್ಯಪಿ ಕಿಂಚಿದನ್ಯಥಾ | : ನವಸ್ತು ತತ್ವಂ ಸಹಸ್ಯವ ಲಕ್ಷ್ಮತೇ ವಿಮರ್ಶಮಪ ಪ್ಯ ವಿಶೇಷ ಹೇತುಭಿಃ||೪||