ಪುಟ:ಧರ್ಮಸಾಮ್ರಾಜ್ಯಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಅಂಗ vvvvvvvv •vvvvvvvvvvvvvvv ಕ್ಷುದ್ರ ಮೃಗಗಳಿಗೆ ಎಂತು ಆಸ್ಪದವಿಲ್ಲವೋ ಅದರಂತೆ, ನಿನ್ನ ಪರಾಕ್ರಮ ದಿಂದ ಪರಿಪಾಲಿಸಲ್ಪಟ್ಟ ಎಮ್ಮಿ ರಾಜ್ಯದಮೇಲೆ ಮತ್ತಾರಸಾಮರ್ಥ್ಯವು ತಾನೆ ನಡೆಯುವುದು? ಅದಲ್ಲದೆ, - N[೭, ತಾ|| ಜೀಯ! ಪ್ರಜೆಗಳು ತಮ್ಮಲ್ಲುಕ್ಕುವ ರಾಜಭಕ್ತಿಯಿಂದ ಪ್ರೇರಿತರಾಗಿ ಕೊಂಡಾಡುವುದು ನಿನಗೆ ಒಪ್ಪುವುದು; ಮತ್ತ೭ಯು (ವಿಷ್ಣು ಸ್ವರೂಪನಾರು ನಿನ್ನನ್ನು ತನಗೆ ಯೋಗ್ಯದ ಪತಿಯೆಂದು ಭಾವಿಸಿ, (ತನ್ನ ತೌರುಮನೆಯಾದ) ಪಂಕಜವವನ್ನು ತ್ಯಜಿಸಿ, ನಿನ್ನನ್ನು ಸೇರಲಾಗಿ ಶ್ಲಾ ಫೈಯೆನಿಸಿಕೊಂಡ ಮತ್ತು ದೇವೇಂದ್ರನೇ ರಾಜನಾ ಗುಳ್ಳ ಆ' ಸ್ವರ್ಗವು, ನಿನ್ನ ಧರ್ಮದಿಂದ ಪರಿಪಾಲಿಸಲ್ಪಡುತ್ತಿರುವೀ ಭೂಲೋಕವನ್ನು ನೋಡಿ ನಿನ್ನಲ್ಲಿಗೆ ಬಂದು (ಧರ್ಮವನ್ನು ಕಲಿತುಕೊಳ್ಳ ಬೇಕೆಂಬ ಆಶೆಯುಳ್ಳುದಾಗಿ ನೋಡುವುದು; ಹಾಗೆ ನೋಡದೇಹೋದರೆ ನಿಜವಾಗಿಯೂ ಮೋಸಹೋಗುವುದು.] ಈರೀತಿಯಾಗಿ ತನ್ನ ಅಧಿಕಾರಿಗಳು ಉಚ್ಚರಿಸಿದ ಅನುಮೋದ ವಚನಗಳನ್ನು ಕೇಳಿದ ದೇವಸೇನಮಹಾರಾಜನು, ಪರಮಸಂತುಷ್ಟನಾಗಿ, ಅವರುಗಳನ್ನು ಕುರಿತು ಈರೀತಿ ಕೃತಜ್ಞಭಾಷೆಗಳನ್ನಾಡಿದನು:-'ಎನ್ನಾ ಹರಿರಾ! ನಿಮ್ಮಗಳಲ್ಲಿ ನೆಲೆಗೊಂಡಿರುವ ಎನ್ನ ವಿಷಯಕವಾದ ಪ್ರೀತಿಬಹು ಮಾನಗಳು ಎನ್ನ ನಿಂತು ಮಿತಿಮೀರಿ ಕೊಂಡಾಡುವಂತೆ ನಿಮ್ಮನ್ನು ಪ್ರೇರಿ ಸಿದುವೆಂದು ಭಾವಿಸುವೆನು, ಸತ್ಯರಾದ ನಿಮಗೆ ಈ ನಡತೆಯು ಭೂಷಣವೇ ಅಹುದು, ಆದರೆ ತತ್ವತಃ ಎನ್ನ ಬುದ್ದಿಗೆ ಇಲ್ಲಿ ಅತಿಶಯ ವೇನೂ ತೋರಿಬಾರದು, ಏಕೆಂದರೆ ನಾನು ಲೋಕಹಿತೈಷಿಗಳಾದ ಮಹಾ 'ಶ್ಲೋ! ಸ್ಥಾನೇ ಭಕ್ತಿ ವಶೇನ ಗಚ್ಛತಿ ಜನಕ್ಕೀರ್ತಿವಾಚಾಲತಾಂ || ಸ್ಟಾನೇ ಶ್ರೀಃ ಪರಿಭೂಯ ಪಂಕಜವನಂ ತ್ವತ್ಸಂಶ್ರಯಾಮಿನೀ | ವ್ಯಕ್ತಂ ಶಕ್ರ ಸನಾಥತಾಮಪಿ ಗತಾ ತ್ವದ್ದರ್ಮಗುಪ್ತಾಮಿಮಾಂ | ದ್‌: ಪ್ರತ್ಯುದಿತಸ್ಸಹಾ ವಸುಮತೀಂ ನೋ ಚೇದಹೋ ವಂಚ್ಯತೇ ||೭||