ಪುಟ:ಧರ್ಮಸಾಮ್ರಾಜ್ಯಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಮೊದಲನೆಯ ಅಂಗ ೧೧ ག་ ་གག་ག་ འགན་ན་འ་་་ འག་ ལཱ --- བ ರ್ವಕವಾಗಿ ಪ್ರಶ್ನೆ ಮಾಡಿದನು:- ಎಲೈ ಪ್ರಜಾಪ್ರಮುಖರೇ! ನಿಂನಿಮ್ಮ ಪ್ರಾಂತವಾಸಿಗಳಾದ ಎನ್ನ ಪ್ರಜೆಗಳು ಸುಕ್ಷೇಮಿಗಳೇ? ರೋಗ, ಹಿಂಸೆ ದಾರಿದ್ರ, ಮುಂತಾದ ಪ್ರಜೋಪದ್ರವಗಳೇನಾದರೂ ಉಂಟೋ ?” ಈರೀತಿಯಿಂ ಬೆಸಗೊಳಲ್ಪಟ್ಟ ಪ್ರಜಾಪ್ರಮುಖರು ಭಯಭರಿತ ಭಕ್ತಿಗೌರವಗಳಿಂದೆದ್ದು ನಿಂತು ಕೈಮುಗಿದುಕೊಂಡಂತೆಂದರು :- “ದೇವ ಧರ್ಮದಮೇರೆಯನ್ನು ಅತಿಕ್ರಮಿಸದೆ ನಡೆವ ನಿನ್ನೀರಾಜ್ಯದಲ್ಲಿ ಋತುಧರ್ಮಗಳು ಸಕಾಲದಲ್ಲಿ ಪ್ರಾಪ್ತವಾಗಿ ಧಾನ್ಯಾದಿಗಳು ಅನ ರ್ಫೈವಾಗಿ ಬೆಳೆಯುವುದರಿಂದಲೂ, ಮತ್ತು ನಿನ್ನ ಪ್ರಜೆಗಳಾದ ನಮ್ಮನ್ನು ನೀನು ಸ್ವಪುತ್ರರಂತೆ ಭಾವಿಸಿ ಪ್ರೀತಿಮಮತೆಗಳಿಂದ ಕಾಪಾಡುತ್ತಿರುವು ದರಿಂದ, ರೋಗ ದಾರಿದ್ರ ಹಿಂಸೆ ಮುಂತಾದುವುಗಳು ಇಲ್ಲಿಗೆ ಪ್ರವೇ ಶಿಸಲು ಅವಕಾಶವೆಲ್ಲಿಹುದು ? ನಂನಮ್ಮ ಭಾಗದ ನಿನ್ನ ಪ್ರಜೆಗಳೆಲ್ಲರೂ ಸುಖಿಗಳಾಗಿಯೂ ಅನ್ನ ಪಾನಾದಿಗಳಿಂದ ತೃಪ್ತರಾಗಿಯ ಆರೋಗ ದೃಢಕಾಯರಾಗಿಯೂ ಸ್ವವೃತ್ತಿ ಸ್ವಕಾರ್ಯಗಳಲ್ಲಿ ದಕ್ಷರಾಗಿಯ ಇರುವರು. ೨೨ ದೇವಸೇನ:_ ಸಂತೋಷ! ಆದರೆ, ರಾಜ್ಯ ರಕ್ಷಣಕ್ರಮದ ವಿಷಯದಲ್ಲಿ ತಿಳಿಸತಕ್ಕ ನಿಮ್ಮ ಅಭಿಪ್ರಾಯಗಳೇನಾದರೂ ಉಂಟೋ? ಪ್ರಜಾಪ್ರಮುಖರು- ದೇವ, ರಾಜ್ಯವೆಂಬ ಕುಟುಂಬಕ್ಕೆ ಹಿತವನ್ನೂ ಸುಖಸಮೃದ್ಧಿಗಳನ್ನೂ ಉಂಟುಮಾಡುವ ಆಲೋಚನೆಗಳು, ಮಕ್ಕಳುಗಳಿಗಿಂತಲೂ ಭಾರವಾಹಕನಾದ ತಂದೆಗೆಂತು ಸಂಪೂರ್ಣವಾಗಿ ತಿಳಿದುಬರುವುವೋ ಅದರಂತೆ, ರಾಜ್ಯ ರಕ್ಷಣೋಪಾಯಗಳು ಪಿತೃಸ್ವರೂ ಪನಾದ ನಿನಗೆ ತಿಳಿದುಬರುವುದೇ ಹೊರತು, ಅನನುಭವಿಗಳಾಗಿಯೂ ಈಶ್ವರಬುದ್ದಿ ಯಿಲ್ಲದವರಾಗಿಯ ಇರುವ ಎಮಗೆಂತುತಾನೆ ತಿಳಿಯು ವುವು ? ಬಹುಭಾಷಣದಿಂದೇನು ಪ್ರಯೋಜನ