ಪುಟ:ಧರ್ಮಸಾಮ್ರಾಜ್ಯಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಧರ್ಮಸಾಂಮ್ರಾಜ್ಯ [ಸಂಧಿ /ww! 'syyyyyyyyyyyyyyvy ಇಲ್ಲಿನಂತೆಯೇ ಏಕಕಂಠವೂ ತೃಪ್ತಿಯ ಕಂಡುಬಂದರೆ ಆಗ್ಗೆ ಈ ರಾಜ ನನ್ನು ಧರ್ಮಜ್ಞನೆಂದು ನಿರ್ಧರಿಸಬಹುದು. ಆದಕಾರಣ ಅಂತಹ ಪ್ರದೇ ಶಕ್ಕೆ ಹೋಗಿ ವಿಚಾರಿಸಿ ತಿಳಿಯೋಣ ನಡೆ.” ಎಂದು ಹೇಳಿ ಪಳ್ಳಿಕಾರ ನನ್ನು ಹುಡುಕುತ್ತ ಮುಂದಕ್ಕೆ ಹೋದರು. ಐದನೆಯ ಸಂಧಿ THE LOYAL SUBJECT ಸಪ್ಪ ಜಾಸಂಪತ್ತಿ. ಇತ್ತಲಾ ಸಮಯಕ್ಕೆ ಸರಿಯಾಗಿ ಓರ್ವ ಪಶುಪಾಲಕನಾದ ಕುರುಬನು, ದುರ್ಗಮವಾದ ಒಂದು ಕಾಂತಾರಮಧ್ಯದಲ್ಲಿ ನಿರ್ಭಯ ನಾಗಿಯೂ, ಕೈಗೊಡಲಿಲ್ಲ ಳನ್ನು ಕರದೊಳ್ ಪಿಡಿದವನಾಗಿಯೂ, ಕಂಬಳಧಾರಿಯಾಗಿಯ, ವನಪುಷ್ಪಗಳನ್ನು ಶಿರದೊಳ್ ಮುಡಿದವನಾ ಗಿಯ ಸಂಚರಿಸುತ್ತ, ಅಲ್ಲಿರ್ದೊಂದು ಉನ್ನತವಾದ ವೃಕ್ಷದ ಛಾಯಾ ಪ್ರದೇಶದ ಶಾದ್ವಲದಿಂದ ಆವೃತವಾದ ಶಿಲಾತಲದಲ್ಲಿ ಸುಖಾಸೀನನಾಗಿ, ಒಂದುಕ್ಷಣ ಸೆಣಬಿನಿಂದ ಹಗ್ಗವನ್ನು ಹೊಸೆಯುತ್ತಲೂ, ಇನ್ನೊಂದು ಕ್ಷಣ ಮನೋಹರವಾಗಿ ವೇಣುಗಾನಮಾಡುತ್ತಲೂ, ಮತ್ತೊಂದು ಕ್ಷಣ ಅತ್ತಿತ್ತ ಚದರಿಹೋಗಿರ್ದ ತನ್ನ ದನಕುರಿಗಳನ್ನು ಗುಂಪುಗೂಡಿಸುತ್ತಲೂ ಅತಿಸಂಭ್ರಮದೊಡನೆ ವಿಹರಿಸುತ್ತಿರ್ದನು. * * ಇವನನ್ನು ನೋಡಿದ ಚಿತ್ರನು ಗುಪ್ತನನ್ನು ಕುರಿತು ಸಂತೋ ತದಿಂದ ಮೆಲ್ಲನೆ ಇಂತಂದನು:-liಇತ್ತ ನೋಡು; ಈ ಪಶುಪಾಲಕನ ಮುಖದಿಂದ ಈ ರಾಜನ ಸಂಗತಿಗಳೆಲ್ಲವನ್ನೂ ಸವಿಸ್ತಾರವಾಗಿ ಕೇಳಿ ತಿಳಿಯುವುದು ಯುಕ್ತವಾಗಿ ಎನಗೆ ತೋರುವುದು. ಆದಕಾರಣ ಸ್ವಲ್ಪ ಹಿಂದಕ್ಕೆ ನಡೆ; ಬಾಹ್ಯದಲ್ಲಿ ಬ್ರಾಹ್ಮಣವೇಷವನ್ನು ಅಳವಡಿಸಿಕೊಂಡು