ಪುಟ:ಧರ್ಮಸಾಮ್ರಾಜ್ಯಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧| ಎರಡನೆಯ ಅಂಗ. ೨೩ 4 : \ \'\ ! ಕುರಿತಿಂತೆಂದನು:- ಜಯವಾಗಲಿ ಮಹಾರಾಜನಿಗೆ ; ಮಹಾಪಾದ ದರ್ಶನಾರ್ಥವಾಗಿ ಕಿರೀಟವನು ಬಂದು ಕಾದಿರುವನು. ” ಇದನ್ನು ಕೇಳಿದ ದೇವಸೇನನು: - * ಆತನನ್ನು ಒಳಕ್ಕೆ ಕಳುಹಿ ನೀನಲ್ಲಿಯೇ ಇರು. ” ಎಂದು ಆಜ್ಞಾಪಿಸಲು ದ್ವಾರಪಾಲಕನು ಕೈಮು ಗಿದು ಹೋಗಿ ಕಿರೀಟವತ್ಥನನ್ನು ಕಳುಹಿದನು. ಆ ಬಳಿಕ ಕಿರೀಟವನು ಒಳಕ್ಕೆ ಪ್ರವೇಶಿಸಿ, ರಾಜನಿಗೆ ತಲೆವಾಗಿ ವಂದಿಸಿ, ತನ್ನ ಕೈಲಿರ್ದ ಪುಷ್ಪಮಾಲೆಯನ್ನು ಅವನಿಗರ್ಪಿಸಿ ಭಕ್ತಿಗೌರ ವಗಳಿಂದ ಇಂತು ಪ್ರಾರ್ಥಿಸಿದನು:-ಜೀಯ! ನಿನ್ನ ಸೇವಕನಾದೆನಗೆ ಓರ್ವಮಗಳು ಜನಿಸಿದಳು. ಅವಳ ಜನ್ಮ ನಾಮವ ' ಗೌರೀ ' ಎಂದಾ ಗಿರ್ದರೂ, ಅವಳ ರೂಪಾತಿಶಯವು ಮುನಿಚಿತ್ತಾಕರ್ಷಣದಕ್ಷವಾಗಿ ರುವುದರಿಂದ, ಎಮ್ಮ ನೆರೆಹೊರೆಯವರೆಲ್ಲರೂ ಅವಳನ್ನು * ಉನ್ಮಾದ ಯನ್ತಿ ' ಅಧವಾ ° ಉನ್ಮಾದಿನೀ ' ಎಂದು ಕರೆಯಲಾರಂಭಿಸಿ, ಇವಳು ರಾಜಪತ್ನಿತ್ವಕ್ಕೆ ಅರ್ಹಳೇಹೊರತು ಸಾಮಾನ್ಯ ಜನಯೋಗ್ಯಳಲ್ಲ ವೆಂದು ಅವಳ ಬಾಲ್ಯಾದಾರಭ್ಯ ಹೇಳುತ್ತಿರುವುದರಿಂದ ಅವಳು ಆಗಿನಿಂದಲೂ ನಿನ್ನನ್ನೇ ತನ್ನ ಪತಿಯನ್ನಾಗಿ ವರಿಸಬೇಕೆಂದು ಸಂಕಲ್ಪಿಸಿದಳು, ಈಗ ಅವಳು ಪ್ರಾಪ್ತ ಯೌವನೆಯಾಗಿರುವುದರಿಂದ ಅವಳನ್ನು ಪತ್ನಿ ಯನ್ನಾಗಿ ಸ್ವೀಕರಿಸುವನಾಗು. ?” ಈ ರೀತಿ ಪ್ರಾರ್ಥಿತನಾದ ದೇವಸೇನನು ಪರಮವಿಸ್ಮಿತನಾದರೂ ಒಂದು ಕ್ಷಣಕಾಲ ಹಾಗೆಯೇ ಆಲೋಚಿಸಿ, ಬಳಿಕ ಇಂತೆಂದನು:- ಯದು! ವಿಚಾರಮಾಡಿ ಹೇಳಿಕಳುಹುವೆನು; ನೀನು ಹೊರಡಬಹುದು ಎಂದು ಹೇಳಲು ಕಿರೀಟವನು ಮಂತ್ರಿಯಿಂದ ಕೊಡಲ್ಪಟ್ಟ ತಾಂಬೂಲ ವನ್ನು ಸ್ವೀಕರಿಸಿ ಹೊರಟುಹೋದ ತರುವಾಯ, ಮಂತ್ರಿಯಾದ ಸುಮತಿ ಯನ್ನು ಕುರಿತು ದೇವಸೇನನು ಈರೀತಿ ಪ್ರಶ್ನೆ ಮಾಡಿದನು:-( ಸುಮ ತಿಯೇ! ಈತನ ಮಗಳನ್ನು ಪರಿಗ್ರಹಿಸುವ ವಿಷಯದಲ್ಲಿ ನಿನ್ನ ಅಭಿಪ್ರಾ ಯವೇನು ? )