ಪುಟ:ಧರ್ಮಸಾಮ್ರಾಜ್ಯಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಂಗ. 11 \'\ \" • • • • • • • • • \ +1 1 1 1 1 ಬರುವುದಕ್ಕೂ ಅವಳ ರೂಪಲಾವಣ್ಯಾದಿಗಳನ್ನು ಪರೀಕ್ಷಿಸಿಕೊಳ್ಳು ದಕ್ಕೂ ಅವಕಾಶವಾಗುವುದು; ಹೀಗೆ ಮಾಡುವುದರಿಂದ ಅವರು ತೃಪ್ತ ರಾಗಿ ನಮಗೆ ಅನುಕೂಲವಾಗಿ ರಾಜನಲ್ಲಿ ವಿಜ್ಞಾಪಿಸುವರು; ಹಾಗೆ ಮಾಡುವುದು ಉತ್ತಮವಲ್ಲವೆ ? ” ಇದನ್ನು ಕೇಳಿದ ಇಂದುಮತಿಯು ನಗುತ್ತ:-“ಹಾಗೇ ಆಗಲಿ!” ಎಂದು ಹೇಳಿದಳು, ಬಳಿಕ ಕಿರೀಟವನು ತವಕದಿಂದ:-'ಮಧುಪರ್ಕಾದಿ ಸತ್ಕಾರಸಾಮಗ್ರಿಗಳನ್ನು ಸಿದ್ಧ ಮಾಡಿರು ವೆಯಾ ? ” ಎಂದು ಕೇಳಲು ಇಂದುಮತಿಯು ಉತ್ಸಾಹದಿಂದ;-ರಮ ಣನೇ ! ಮಹಾರಾಜನ ಕಡೆಯಿಂದ ದೂತನು ಬಂದು ಹೇಳಿದ ಒಡನೆಯೇ ಸರ್ವವನ್ನೂ ಸಿದ್ಧ ಮಾಡಿ, ಉನ್ಮಾದಿನಿಯನ್ನೂ ಚೆನ್ನಾಗಿ ಅಲಂಕರಿಸಿರು ವೆನು, ” ಎಂದು ಹೇಳಿದಳು, ಇದನ್ನು ಕೇಳಿದ ಕಿರೀಟವನು ಸಂತುಷ್ಟನಾಗಿ ಮಂದಹಾಸದಿಂದ:- ನಿನ್ನಂತಹ ವಿಚಕ್ಷಣೆಗೆ ಇದನ್ನೆಲ್ಲ ಹೇಳಿಕೊಡಬೇಕೆ ? ವಿವಾಹವಿಚಾರಗಳಲ್ಲಿ ಪುರುಷರಿಗಿಂತಲೂ ಸ್ತ್ರೀಯ ಕಿಗೆ ಆದರೋತ್ಸಾಹಗಳು ಅಧಿಕವಲ್ಲವೆ ? ಅದು ಹಾಗಿರಲಿ, ಪುರೋಹಿ ತಾದಿಗಳನ್ನು ಭಕ್ತಿಗೌರವಗಳಿಂದ ಸತ್ಕರಿಸತಕ್ಕ ವಿಧಾನವನ್ನು ಉನ್ಮಾ ದಿನಿಗೆ ತಿಳಿಸಿರುವೆಯೋ ಇಲ್ಲವೋ?” ಎಂದು ಕೇಳಲು, ಇಂದುಮತಿಯು ಓರೆಗಣ್ಣಿನಲ್ಲಿ ಪತಿಯನ್ನು ನೋಡುತಿಂತೆಂದಳು:- ಎಮ್ಮುನ್ನಾದಿನಿಗೆ ಅವುಗಳನ್ನು ತಿಳಿಸಬೇಕಾದುದಿಲ್ಲ, ಆದರೂ ನಾನೂ ಸಂಕ್ಷೇಪವಾಗಿ ತಿಳಿ ಸಿರುವೆನು.” ಎಂದು ಹೇಳುತಿರುವಲ್ಲಿ ಬೀದಿಯ ಬಾಗಿಲಿನ ಬಳಿ ಶಬ್ದ ವಾ ಗಲು ಕಿರೀಟವನು ತವಕದಿಂದೆದ್ದು ನಿಂತು:- “ ಪುರೋಹಿತಾದಿಗಳು ಬಂದಂತಿರುವುದು ; ನೀನು ಒಳಕ್ಕೆ ನಡೆ; ಪಾದಪ್ರಕ್ಷಾಳನಕ್ಕೆ ಜಲವನ್ನು ಉನ್ಮಾದಿನಿಯ ಕೈಲಿ ಕೊಟ್ಟು ಕಳುಹು. ?” ಎಂದು ಹೇಳಲು ಇಂದು ಮತಿಯು:- “ ಹಾಗೇ ಮಾಡುವೆನು. ಎಂದು ಹೇಳಿ ಒಳಕ್ಕೆ ಹೋದಳು. ಒಳಿಕ ಆ ಕಿರೀಟವತ್ಸನು ಒಳಕ್ಕೆ ಬಂದ ಪುರೋಹಿತಶ್ರೀಲಕ್ಷ ಇಜ್ಞರಿಗೆ ಉನ್ಮಾದಿನಿಯಿಂದ ಪಾದಪ್ರಕ್ಷಾಲನವನ್ನು ಮಾಡಿಸಿ ಅಲ್ಲಿ