ಪುಟ:ಧರ್ಮಸಾಮ್ರಾಜ್ಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಧರ್ಮಸಮ್ರಾಜ್ಯ [ಸಂಧಿ - * - * * *v 5 ಅನುಗೊಳಿಸಿರ್ದ ಪೀಠಪ್ರದೇಶದ ಬಳಿಗೆ ಅವರುಗಳನ್ನು ಮರ್ಯಾದೆಯಿಂದ ಕರೆದುತಂದು, ಅವರು ಆಸನಗಳನ್ನ ಲಂಕರಿಸಿದ ಬಳಿಕ ಉನ್ಮಾದಿನಿಯನ್ನು ಕುರಿತಿಂತೆಂದನು:-ವತ್ಸೆ ಉನ್ಮಾದಿನಿ! ಈ ದ್ವಿಜೋತ್ತಮರಿಗೆ ನಮಸ್ಕ ರಿಸು; ಇದೋ ಸತ್ತಾರಸಾಮಗ್ರಿಗಳಲ್ಲಿಯೇ ಇರುವುವು; ಭಕ್ತಿಯಿಂದುಪ ಚರಿಸು. ?? ಈ ಆಜ್ಞೆಯನ್ನು ಮೌನದಿಂದ ಅಂಗೀಕರಿಸಿದ ಉನ್ಮಾದಿನಿಯು ಅವರುಗಳಿಗೆ ನಮಸ್ಕರಿಸಿ ಲಜ್ಞಾಗಾಂಭೀರ್ಯಗಳಿಂದೊಡಗೂಡಿ ಉಪ ಚರಿಸುತ್ತಿರುವಲ್ಲಿ, ಪುರೋಹಿತಸ್ತ್ರೀಲಕ್ಷಣಜ್ಞರು ಮಧುಪರ್ಕಾದಿಗ ಳನ್ನು ಸ್ವೀಕರಿಸುವುದನ್ನು ಮರೆತು, ಉನ್ಮಾದಿನಿಯ ಮುಖವನ್ನೂ , ಗತಿ ವಿಶೇಷಗಳನ್ನೂ, ಪಶ್ಚಾತ್ಪುರೋಭಾಗಾಂಗಗಳನ್ನೂ ನೋಡುತ್ತಅವಳು ಚಲಿಸಿದ ಕಡೆಗೇ ತಮ್ಮ ದೃಷ್ಟಿ ಗಳನ್ನೂ ಚಲನಗೊಳಿಸುತ್ತ, ಕ್ಷಣೇ ಕ್ಷಣೆ ಆಶ್ಚರ್ಯಪಡುತ್ತ, ಒಂದೊಂದು ವೇಳೆ ಅವಳನ್ನೇ ನೋಡುತ್ತ, ಸೂತ್ರ ಪ್ರತಿಮೆಗಳಂತಾದರು. ಇದನ್ನು ನೋಡಿದ ಕಿರೀಟವನು:- ಇವ ಇನ್ನು ಇವರ ದೃಷ್ಟಿಪಾತದಿಂದ ದೂರಗೊಳಿಸಿದ ಹೊರತೂ ಇವರು ಸ್ವಸ್ಥರಾಗುವುದಿಲ್ಲ ! " ಎಂದು ನಿಶ್ಚಯಿಸಿ, ಉನ್ಮಾದಿನಿಯನ್ನು ಕುರಿತು:- « ವತ್ಸೆ ! ಅದೇಕೋ ನಿಮ್ಮ ಜನನಿಯು ಕರೆದಳು ; ಹೋಗಿ ಕೇಳು. ಎಂದು ಹೇಳಲು, ಉನ್ಮಾದಿನಿಯು ಒಳಕ್ಕೆ ಹೊರಟು ಹೋದ ತರುವಾಯ ಆದ್ವಿಜರನ್ನು ಕುರಿತು ದೈನ್ಯ ದಿಂದ:- ಪೂಜ್ಯರೆ ! ಇದೇಕೆ ಮಧುಪರ್ಕಾದಿಗಳನ್ನು ಸ್ವೀಕರಿಸಲೇ ಇಲ್ಲವು ? ಈ ಕುವರಿಯು ಇನ್ನೂ ಬಾಲಿಕೆಯಾಗಿರುವುದರಿಂದ ಉಪ ಚರಿಸುವ ಕ್ರಮವು ತಿಳಿಯದೇ ಇರಬಹುದು ; ಲೋಪವೇನಾದರೂ ಇರ್ದಲ್ಲಿ ಕ್ಷಮಿಸಿ ಎನ್ನನ್ನು ಕಾಪಾಡಬೇಕು ; ನಾನೇ ತಮ್ಮ ಪರಿಚ ರ್ಯೆಗೆ ಸಿದ್ಧನಾಗಿರುವೆನು; ತಮ್ಮ ಇಚ್ಛೆಯನ್ನು ತಿಳುಹಬೇಕು.” ಎಂದು ಪ್ರಾರ್ಥಿಸಿದನು. ಇದನ್ನು ಕೇಳಿದ ಪುರೋಹಿತಸ್ತ್ರೀಲಕ್ಷಣಜ್ಞರು, ತೃಪ್ತಿಯನ್ನು