ಪುಟ:ಧರ್ಮಸಾಮ್ರಾಜ್ಯಂ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಂಗ ೩೫ ಳನ್ನು ಉಪೇಕ್ಷಿಸುವ ಉದರಭರಹೋದ್ಯೋಗತತ್ಪರರಾದ ನೀಚ ಪರೋ ಹಿತರಂತೆ ಎನ್ನ ನ್ಯೂ ಎಣಿಸಿದೆಯಾ? ಹಾಗಲ್ಲ ! ರಾಜನಿಗೂ ಮತ್ತವನ ಪ್ರಜೆಗಳಿಗೂ ಮುಂದುಂಟಾಗುವ ಹಾನಿಗಳನ್ನು ಸರ್ವ ಪ್ರಯತ್ನ ದಿಂದಲೂ ತಡೆದು, ಸುಖವನ್ನುಂಟುಮಾಡುವ ಕಾರ್ಯಗಳನ್ನೇ ಮಾಡುವ ವೃತ್ತಿಯ ಇರಾಜ+ ಪುರೋ4 ಹಿತ' ನೆಂದು ತಿಳಿ! ರಾಜಪೌರೋಹಿತ್ಯವು ಸಾಮಾ ನ್ಯರಾದವರಿಂದ ಅಧಿಕರಿಸಲ್ಪಡತಕ್ಕ ವಿಷಯವಲ್ಲ. ಏಕೆಂದರೆ, ರಾಜಪ್ರಜೆ ಗಳೀರ್ವರಿಗೂ ಪುರೋಹಿತನೇ ಮಂತ್ರದೇಶಕನು; ಮತ್ತು ಪ್ರಜೆಗಳಾಚರಿ ಸುವ ಪಾಸಕಾರ್ಯಗಳ ಫಲಿತಾಂಶವು ರಾಜನನ್ನೂ , ರಾಜನ ದುರ್ವಿತಿ ದೋಷದ ದುಃಖವ ಪುರೋಹಿತನನ್ನೂ ಲೇವಿಸುವುವು. ಎಂದು ಹೇಳಲು ಸ್ತ್ರೀಲಕ್ಷಣಜ್ಞನು ಆಶ್ಚರ್ಯಮಗ್ನನಾಗಿ, ಭಕ್ತಿಗೌರವಗಳಿಂದ ವಂದಿಸಿ:- * ಬ್ರಹ್ಮನ್ ! ಅಲ್ಪ ಪರಿಚಯದೋಷದಿಂದ ನಿನ್ನನ್ನು ಹೊಟ್ಟೆ ಹೊರೆದುಕೊ ಇದೊಂದನ್ನು ಮಾತ್ರವೇ ಒಲ್ಲ ಪ್ರರೋಹಿತನೆಂದು ಭಾವಿಸಿರ್ದೆನು. ನೀನು ಆಂಧವನೆಂದಿಗೂ ಅಲ್ಲವು. ನೀನು ತ್ರಿಲೋಕಾಧಿಪತ್ಯವನ್ನು ಬೇಕಾ ದರೂ ನಿರ್ವಹಿಸಬಲ್ಲೆ ನಿನ್ನನ್ನು ಆಚಾರ್ಯನನ್ನಾಗಿ ಪಡೆದಿರುವ ಎಮ್ಮ ಮಹಾರಾಜನೂ ಮತ್ತವನ ಪ್ರಜೆಗಳೂ ನಾನೂ ಭಾಗ್ಯಶಾಲಿಗಳೆಂದೇ ಹೇಳಬೇಕು! ಅಲ್ಪ ಬುದ್ಧಿ ದೋಷದಿಂದ ನಿನ್ನಲ್ಲಿ ಇಷ್ಟು ಹೊತ್ತು ಆಯುಕ್ತ ವಾದವನ್ನು ಮಾಡಿದ ಎನ್ನ ಮೌಡ್ಯವನ್ನು ಕ್ಷಮಿಸುವನಾಗು. ಮುಂದೆ ನೀನಾವ ರೀತಿ ಆಜ್ಞೆಮಾಡುವೆಯೋ ಅದರಂತೆಯೇ ಆಚರಿಸುವೆನು. ” ಎಂದು ಹೇಳಿ ನಮಸ್ಕರಿಸಲು ಪ್ರರೋಹಿತನು ಪ್ರಸನ್ನನಾಗಿ:- (ಮಿತ್ರನೇ! ಹಾಗಾದರೆ ರಾಜನಲ್ಲಿಗೆ ಹೋಗಿ - ಆ ಕಯ ಮುಖಾವಲೋಕನಮಾ ತ್ರದಿಂದಲೇ ನಿನಗೂ ನಿನ್ನ ಪ್ರಜೆಗಳಿಗೂ ಹಾನಿಯುಂಟಾಗುವಂತಹ ಅಮಂಗಲದೋಷವಿರುವದು! " ಎಂದು ಮೊದಲು ನೀನು ಹೇಳು; ಬಳಿಕ ನಾನೂ ಅದಕ್ಕೆ ಅನುಗುಣವಾಗಿ ಹೇಳುವೆನು.” ಎಂದು ಹೇಳಿ ಈರ್ವರೂ ರಾಜಸನ್ನಿಧಿಯನ್ನು ಕುರಿತು ತೆರಳಿದರು.